ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಬೆಂಗಾವಲ ವಾಹನದ ಮೇಲೆ ದಾಳಿ ನಡೆದಿದೆ. ಜನರ ಗುಂಪೊಂದು ಕೋಲು,ಕಟ್ಟಿಗೆಗಳನ್ನು ಹಿಡಿದು ಬಂದು ಬೆಂಗಾವಲು ವಾಹನಕ್ಕೆ ತಡೆಯೊಡ್ಡುತ್ತಿರುವುದು, ಕಾರಿನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ. ಪಶ್ಚಿಮ ಮಿಡ್ನಾಪುರ್ನಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ದಾಳಿ ನಡೆಸಿದವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಎಂದು ಬಿಜೆಪಿ ಆರೋಪಿಸಿದೆ.
ವಿ.ಮುರಳೀಧರನ್ ಅವರಿಗೆ ಏನೂ ಆಗಿಲ್ಲ. ಅವರ ಕಾರಿನ ಚಾಲಕ ಮತ್ತು ಇತರರಿಗೆ ಗಂಭೀರ ಗಾಯಗಳಾಗಿವೆ.
ಟಿಎಂಸಿ ಗೂಂಡಾಗಳು ಪಶ್ಚಿಮ ಮಿಡ್ನಾಪುರ್ನಲ್ಲಿ ನನ್ನ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ ಕಾರಿನ ಗಾಜು ಒಡೆದಿದ್ದಾರೆ. ನಮ್ಮ ಜತೆಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಪ್ರಯಾಣ ಮೊಟಕುಗೊಳಿಸಿದ್ದೇನೆ ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ.
#WATCH Union Minister V Muraleedharan’s car attacked by locals in Panchkhudi, West Midnapore#WestBengal
(Video source: V Muraleedharan) pic.twitter.com/oODtHWimAW
— ANI (@ANI) May 6, 2021
ಇಂಡಿಯಾ ಟಿವಿ ಜತೆ ಮಾತನಾಡಿದ ಮುರಳೀಧರನ್, ಈ ದಾಳಿ ನಡೆಸಿದ್ದು ಟಿಎಂಸಿ ಕಾರ್ಯಕರ್ತರು. ಪೊಲೀಸರ ಕಣ್ಮುಂದೆಯೇ ಈ ಘಟನೆ ನಡೆದಿದೆ ಎಂದು ಹೇಳಿದ ಅವರು, ಮಮತಾ ಬ್ಯಾನರ್ಜಿ ಸರ್ಕಾರವು ಜಾಣ ಕುರುಡು ನಡೆ ಅನುಸರಿಸುತ್ತಿದೆ ಟಿಎಂಸಿ ಗೂಂಡಾಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ, ನಾವು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಮುರಳೀಧರನ್ ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದ ನಂತರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ . ಈ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ಬಿಜೆಪಿ ಕಾರ್ಯಕರ್ತರ ಮನೆಗೆ ಭೇಟಿ ನೀಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
TMC goons attacked my convoy in West Midnapore, broken windows, attacked personal staff. Cutting short my trip. #BengalBurning @BJP4Bengal @BJP4India @narendramodi @JPNadda @AmitShah @DilipGhoshBJP @RahulSinhaBJP pic.twitter.com/b0HKhhx0L1
— V Muraleedharan (@VMBJP) May 6, 2021
ಟಿಎಂಸಿ ಬೆಂಬಲಿತ ಗೂಂಡಾಗಳು ತನ್ನ ಹಲವಾರು ಬೆಂಬಲಿಗರ ಹತ್ಯೆ ಮಾಡಿದ್ದಾರೆ ಮಹಿಳಾ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ, ಮನೆಗಳನ್ನು ಧ್ವಂಸ ಮಾಡಿದ್ದಾರೆ, ಸದಸ್ಯರ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ ಮತ್ತು ಬಿಜೆಪಿ ಕಚೇರಿಗಳನ್ನು ದರೋಡೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ 77 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಮುಖ್ಯ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಏತನ್ಮಧ್ಯೆ, ಬಿಜೆಪಿಯ ಹಿರಿಯ ಮುಖಂಡ ರಾಹುಲ್ ಸಿನ್ಹಾ ಅವರ ಕಾರಿನ ಮೇಲೂ ತೃಣಮೂಲ ಕಾಂಗ್ರೆಸ್ ದಾಳಿ ಮಾಡಿದೆ.
ಮತ್ತೊಂದು ಸಂಬಂಧಿತ ಬೆಳವಣಿಗೆಯಲ್ಲಿ, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಕಾರಣಗಳನ್ನು ಪರಿಶೀಲಿಸಲು ಮತ್ತು ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿಯಲು ಕೇಂದ್ರ ಗೃಹ ಸಚಿವಾಲಯ ನಾಲ್ಕು ಸದಸ್ಯರ ಸತ್ಯ ಶೋಧನಾ ತಂಡವನ್ನು ರಚಿಸಿದೆ. ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ತಂಡ ಇಂದು ಮಧ್ಯಾಹ್ನ ಕೋಲ್ಕತ್ತಾಗೆ ತಲುಪಿದೆ.
West Bengal Violence: ಸತ್ಯಶೋಧನೆಗಾಗಿ ಪಶ್ಚಿಮ ಬಂಗಾಳಕ್ಕೆ ನಾಲ್ವರು ಅಧಿಕಾರಿಗಳ ತಂಡ ಕಳುಹಿಸಿದ ಕೇಂದ್ರ ಸರ್ಕಾರ
(Union Minister V Muraleedharan’s convoy attacked allegedly by Trinamool Congress workers in West Bengal)
Published On - 2:16 pm, Thu, 6 May 21