Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ತೆಗೆದುಕೊಳ್ಳದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ? ಟೆನ್ಶನ್​ ಬೇಡ! ರೈಲು ಹತ್ತುವ ಮುನ್ನ ಟಿಕೆಟ್ ಖರೀದಿಸಿದರಾಯಿತು, ವಿವರ ಇಲ್ಲಿದೆ

Unreserved Train Ticket: ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದರೆ ನಿಮಗೆ ದಂಡ ವಿಧಿಸಬಹುದು. ಈ ಅಪಾಯದಿಂದ ಪಾರಾಗಬಯಸುವಿರಾದರೆ ನೀವು ರೈಲು ಹತ್ತುವುದಕ್ಕೂ ಮುನ್ನ ಕಾಯ್ದಿರಿಸದ ರೈಲು ಟಿಕೆಟ್ ಅನ್ನು ಬುಕ್ ಮಾಡಬಹುದು. ಆ ವಿಧಾನವನ್ನು ನೀವಿಲ್ಲಿ ತಿಳಿದುಕೊಳ್ಳುವುದು ಒಳ್ಳೆಯದು.

ಟಿಕೆಟ್ ತೆಗೆದುಕೊಳ್ಳದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ? ಟೆನ್ಶನ್​ ಬೇಡ! ರೈಲು ಹತ್ತುವ ಮುನ್ನ ಟಿಕೆಟ್ ಖರೀದಿಸಿದರಾಯಿತು, ವಿವರ ಇಲ್ಲಿದೆ
ರೈಲು ಹತ್ತಿದ ನಂತರವೂ ರೈಲು ಟಿಕೆಟ್ ಬುಕ್ ಮಾಡಬಹುದು!
Follow us
ಸಾಧು ಶ್ರೀನಾಥ್​
|

Updated on:May 31, 2023 | 1:02 PM

ಪ್ರತಿದಿನ ಲಕ್ಷಾಂತರ ಜನರು ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ. ಇದೇ ವೇಳೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಜನಜಂಗುಳಿ ಹೆಚ್ಚಾಗಿದ್ದರಿಂದ ಟಿಕೆಟ್ ಲಭ್ಯವಾಗದೆ, ರೈಲು ತಪ್ಪಿ ಹೋಗುತ್ತದೆ ಎಂಬ ಭಯದಿಂದ ಟಿಕೆಟ್ ಇಲ್ಲದೇ ರೈಲು ಹತ್ತಿಬಿಡುತ್ತಾರೆ. ಆಗ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದರೆ ನಿಮಗೆ ದಂಡ ವಿಧಿಸಬಹುದು. ಈ ಅಪಾಯದಿಂದ ಪಾರಾಗಬಯಸುವಿರಾದರೆ ನೀವು ರೈಲು ಹತ್ತುವುದಕ್ಕೆ ಮುನ್ನ  ಕಾಯ್ದಿರಿಸದ ರೈಲು ಟಿಕೆಟ್ (Unreserved Train Ticket) ಅನ್ನು ಬುಕ್ ಮಾಡಬಹುದು. ಆ ವಿಧಾನವನ್ನು ನೀವಿಲ್ಲಿ ತಿಳಿದುಕೊಳ್ಳುವುದು ಒಳ್ಳೆಯದು. UTS ಆಪ್ (Unreserved Ticketing System -UTS)​: ಟಿಕೆಟ್​​ ಕಾಯ್ದಿರಿಸದೇ ಇದ್ದರೂ ರೈಲು ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಮೊಬೈಲ್​​ನಲ್ಲಿ ಆನ್‌ಲೈನ್ ಮೂಲಕ (Mobile Application) ರೈಲ್ವೆ ಯುಟಿಎಸ್ ಅಪ್ಲಿಕೇಶನ್‌ನಲ್ಲಿ ಒದಗಿಸಲಾಗಿದೆ. UTS ಅಪ್ಲಿಕೇಶನ್ ಮೂಲಕ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲು ಹತ್ತುವುದಕ್ಕೆ ಮುನ್ನ ನಿಲ್ದಾಣದಲ್ಲಿದ್ದಾಗ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳೀ UTS ಆಪ್

ಮೊಬೈಲ್ ಅಪ್ಲಿಕೇಶನ್ ಯುಟಿಎಸ್ ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಆವೃತ್ತಿಗಳೊಂದಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದೇ ಸಮಯದಲ್ಲಿ ಟಿಕೆಟ್ ಪಾವತಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾಡಬಹುದು. ರೈಲ್ವೆ ಇಲಾಖೆ ಒದಗಿಸುವ ಈ ಸೌಲಭ್ಯದೊಂದಿಗೆ ಕಾಯ್ದಿರಿಸದ ಟಿಕೆಟ್‌ಗಳು ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಯುಟಿಎಸ್ ಆಪ್ ಕನ್ನಡದಲ್ಲಿಯೂ ಲಭ್ಯ

UTS ನಿಂದ ಅನ್​​​ರಿಸರ್ವ​ಡ್​​ (ಕಾಯ್ದಿರಿಸದ) ಟಿಕೆಟ್ ಅನ್ನು ಬುಕ್ ಮಾಡುವುದು ಹೇಗೆ ?

ಮೊದಲು ಯುಟಿಎಸ್ ಆಪ್ ಗೆ ಹೋಗಿ. ಸಾಮಾನ್ಯ ಬುಕಿಂಗ್ ಆಯ್ಕೆಯನ್ನು ಆರಿಸಿ.

ನಂತರ ನೀವು ತಲುಪಬೇಕಾದ ನಿಲ್ದಾಣದ ಹೆಸರು/ಕೋಡ್ ಅನ್ನು ನಮೂದಿಸಿ.

ಪ್ರಯಾಣಿಕ, ಮೇಲ್ ಅಥವಾ ಎಕ್ಸ್‌ಪ್ರೆಸ್‌ನಂತಹ ಟಿಕೆಟ್ ಪ್ರಕಾರವನ್ನು ಆಯ್ಕೆ ಮಾಡಿಕೊಳಿ.

ಪೇಪರ್, ಪೇಪರ್ಸ್ ಆಯ್ಕೆಯನ್ನು ಆರಿಸಿಕೊಳ್ಳಬೇಕು. ವಾಲೆಟ್ ಅಥವಾ ಇತರ ಆನ್‌ಲೈನ್ ಪಾವತಿ ವಿಧಾನಗಳಿಂದ ಪಾವತಿ ವಿಧಾನವನ್ನು ಆಯ್ಕೆ ಮಾಡಿ.

ನಿಮ್ಮ ಟಿಕೆಟ್ ಬುಕಿಂಗ್ ಕುರಿತು ಸಂದೇಶವನ್ನು ನೀವು ಪಡೆಯುತ್ತೀರಿ. UTS ಡ್ಯಾಶ್‌ಬೋರ್ಡ್‌ನಲ್ಲಿ ಟಿಕೆಟ್ ಅನ್ನು ವೀಕ್ಷಿಸಬಹುದು.

Published On - 10:47 am, Wed, 31 May 23

KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?