ಸಿಕ್ಕಿಂ: ನದಿಗೆ ಉರುಳಿದ ವಾಹನ, ಹನಿಮೂನ್​ಗೆ ಹೋಗಿದ್ದ ದಂಪತಿ ಸೇರಿ 9 ಮಂದಿ ನಾಪತ್ತೆ

ನವವಿವಾಹಿತ ದಂಪತಿ ಸೇರಿ 9 ಮಂದಿ ಇದ್ದ ವಾಹನವು ಸಿಕ್ಕಿಂನ ತೀಸ್ತಾ ನದಿಗೆ ಉರುಳಿದ  ಪರಿಣಾಮ ಎಲ್ಲರೂ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ನವವಿವಾಹಿತ ದಂಪತಿ ಹನಿಮೂನ್‌(Honeymoon)ಗೆ ಸಿಕ್ಕಿಂಗೆ ಹೋಗಿದ್ದರು. ಸಿಕ್ಕಿಂನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ವಾಹನ ನಿಯಂತ್ರಣ ತಪ್ಪಿ ತೀಸ್ತಾ ನದಿಗೆ ಉರುಳಿದೆ. ಇಬ್ಬರನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಸಿಕ್ಕಿಂ: ನದಿಗೆ ಉರುಳಿದ ವಾಹನ, ಹನಿಮೂನ್​ಗೆ ಹೋಗಿದ್ದ ದಂಪತಿ ಸೇರಿ 9 ಮಂದಿ ನಾಪತ್ತೆ
ದಂಪತಿ
Image Credit source: India Today

Updated on: Jun 11, 2025 | 8:13 AM

ಸಿಕ್ಕಿಂ, ಜೂನ್ 11: ನವವಿವಾಹಿತ ದಂಪತಿ ಸೇರಿ 9 ಮಂದಿ ಇದ್ದ ವಾಹನವು ಸಿಕ್ಕಿಂನ ತೀಸ್ತಾ ನದಿಗೆ ಉರುಳಿದ  ಪರಿಣಾಮ ಎಲ್ಲರೂ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ನವವಿವಾಹಿತ ದಂಪತಿ ಹನಿಮೂನ್‌(Honeymoon)ಗೆ ಸಿಕ್ಕಿಂಗೆ ಹೋಗಿದ್ದರು. ಸಿಕ್ಕಿಂನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ವಾಹನ ನಿಯಂತ್ರಣ ತಪ್ಪಿ ತೀಸ್ತಾ ನದಿಗೆ ಉರುಳಿದೆ. ಇಬ್ಬರನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಮೇ 29 ರಂದು ಲಾಚೆನ್ ನಿಂದ ಲಾಚುಂಗ್ ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದ್ದು, ದಂಪತಿ ಮತ್ತು ಅವರ ಚಾಲಕ ಸೇರಿದಂತೆ ಒಟ್ಟು ಒಂಬತ್ತು ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಣೆಯಾದ ಕೌಶಲೇಂದ್ರ ಪ್ರತಾಪ್ ಸಿಂಗ್ (29), ಬಿಜೆಪಿ ನಾಯಕ ಉಮ್ಮದ್ ಸಿಂಗ್ ಅವರ ಸೋದರಳಿಯ. ಅವರು ಮೇ 5 ರಂದು ಧಂಗಢ್ ಸರಾಯ್ ಚಿವ್ಲಾಹಾ ಗ್ರಾಮದ ವಿಜಯ್ ಸಿಂಗ್ ಡಬ್ಬು ಅವರ ಪುತ್ರಿ ಅಂಕಿತಾ ಸಿಂಗ್ (26) ಅವರನ್ನು ವಿವಾಹವಾಗಿದ್ದರು. ಕೌಶಲೇಂದ್ರ ಅವರ ಚಿಕ್ಕಪ್ಪ ದಿನೇಶ್ ಸಿಂಗ್ ಅವರ ಪ್ರಕಾರ, ದಂಪತಿ ಮೇ 25 ರಂದು ರೈಲಿನಲ್ಲಿ ಸಿಕ್ಕಿಂಗೆ ಹೊರಟು ಮೇ 26 ರಂದು ಮಂಗನ್ ಜಿಲ್ಲೆಯನ್ನು ತಲುಪಿದ್ದರು.

ಮತ್ತಷ್ಟು ಓದಿ: ನನ್ನ ಕಣ್ಣೆದುರೇ ಗಂಡನನ್ನು ಕೊಂದರು; ರಾಜಾ ರಘುವಂಶಿ ಪತ್ನಿ ಸೋನಮ್ ಹೇಳಿದ್ದೇನು?

ಮೇ 29 ರಂದು ಲಾಚೆನ್‌ನಿಂದ ಹಿಂತಿರುಗುತ್ತಿದ್ದಾಗ, ಭಾರೀ ಮಳೆಯ ಸಮಯದಲ್ಲಿ ಅವರ ವಾಹನ ನದಿಗೆ ಉರುಳಿದೆ ಎಂದು ವರದಿಯಾಗಿದೆ. ನವವಿವಾಹಿತರ ಜೊತೆಗೆ, ವಾಹನದಲ್ಲಿ ಇತರ ಏಳು ಪ್ರವಾಸಿಗರಿದ್ದರು, ಇಬ್ಬರು ಉತ್ತರ ಪ್ರದೇಶದವರು, ಇಬ್ಬರು ತ್ರಿಪುರದವರು ಮತ್ತು ನಾಲ್ವರು ಒಡಿಶಾದವರು , ಜೊತೆಗೆ ಚಾಲಕನೂ ಸೇರಿ ಎಲ್ಲರೂ ಕಾಣೆಯಾಗಿದ್ದಾರೆ.

ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳ ನಿರಂತರ ಪ್ರಯತ್ನಗಳ ಹೊರತಾಗಿಯೂ, ಇಲ್ಲಿಯವರೆಗೆ ಯಾವುದೇ ಮೃತದೇಹಗಳು ಅಥವಾ ಬದುಕುಳಿದವರು ಪತ್ತೆಯಾಗಿಲ್ಲ ಎಂದು ದಿನೇಶ್ ಸಿಂಗ್ ಹೇಳಿದ್ದಾರೆ.

ಸಿಕ್ಕಿಂಗೆ ಪ್ರಯಾಣ ಬೆಳೆಸಿದ ನಾಪತ್ತೆಯಾದ ದಂಪತಿಯ ಕುಟುಂಬ ಸದಸ್ಯರು ಡಿಐಜಿ ಅಕ್ಷಯ್ ಸಚ್‌ದೇವ್ ಮತ್ತು ಪ್ರದೇಶದ ಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ