ಹುಟ್ಟೋ ಮಗುವಿನ ಲಿಂಗ ತಿಳಿಯುವ ತವಕದಲ್ಲಿ ಗರ್ಭಿಣಿಯ ಹೊಟ್ಟೆ ಬಗೆದ ಪಾಪಿ ಪತಿರಾಯ, ಎಲ್ಲಿ?

| Updated By: KUSHAL V

Updated on: Sep 20, 2020 | 5:50 PM

ಲಕ್ನೋ: ತನ್ನ ಗರ್ಭಿಣಿ ಪತ್ನಿಯ ಬಸಿರಲ್ಲಿ ಬೆಳೆಯುತ್ತಿರುವ ಶಿಶುವಿನ ಲಿಂಗವನ್ನು ತಿಳಿದುಕೊಳ್ಳಲು ಪಾಪಿ ಪತಿರಾಯನೊಬ್ಬ ಆಕೆಯ ಹೊಟ್ಟೆಯನ್ನು ಬಗೆದಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಬದೌನ್​ ಪಟ್ಟಣದ ನೇಕ್ಪುರದಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ, 5 ಹೆಣ್ಣು ಮಕ್ಕಳ ತಂದೆಯಾಗಿದ್ದ ಆರೋಪಿ ಪನ್ನಾಲಾಲ್​ಗೆ ಗಂಡು ಮಗು ಬೇಕೆನ್ನುವ ಹಂಬಲ ಹುಟ್ಟಿತ್ತಂತೆ. ಹಾಗಾಗಿ, ಪನ್ನಾಲಾಲ್​ ತನ್ನ 35 ವರ್ಷದ ಗರ್ಭಿಣಿ ಪತ್ನಿಯ ಬಸುರಲ್ಲಿ ಯಾವ ಮಗು ಬೆಳೆಯುತ್ತಿದೆ ಎಂಬುದನ್ನು ತಿಳಿಯಲು ಈ ಕೃತ್ಯ ಎಸಗಿದ್ದಾನೆ ಎಂದು ಪತ್ನಿಯ ಕುಟುಂಬಸ್ಥರು ಆರೋಪಿಸಿದ್ದಾರೆ. […]

ಹುಟ್ಟೋ ಮಗುವಿನ ಲಿಂಗ ತಿಳಿಯುವ ತವಕದಲ್ಲಿ ಗರ್ಭಿಣಿಯ ಹೊಟ್ಟೆ ಬಗೆದ ಪಾಪಿ ಪತಿರಾಯ, ಎಲ್ಲಿ?
Follow us on

ಲಕ್ನೋ: ತನ್ನ ಗರ್ಭಿಣಿ ಪತ್ನಿಯ ಬಸಿರಲ್ಲಿ ಬೆಳೆಯುತ್ತಿರುವ ಶಿಶುವಿನ ಲಿಂಗವನ್ನು ತಿಳಿದುಕೊಳ್ಳಲು ಪಾಪಿ ಪತಿರಾಯನೊಬ್ಬ ಆಕೆಯ ಹೊಟ್ಟೆಯನ್ನು ಬಗೆದಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಬದೌನ್​ ಪಟ್ಟಣದ ನೇಕ್ಪುರದಲ್ಲಿ ಬೆಳಕಿಗೆ ಬಂದಿದೆ.

ಈಗಾಗಲೇ, 5 ಹೆಣ್ಣು ಮಕ್ಕಳ ತಂದೆಯಾಗಿದ್ದ ಆರೋಪಿ ಪನ್ನಾಲಾಲ್​ಗೆ ಗಂಡು ಮಗು ಬೇಕೆನ್ನುವ ಹಂಬಲ ಹುಟ್ಟಿತ್ತಂತೆ. ಹಾಗಾಗಿ, ಪನ್ನಾಲಾಲ್​ ತನ್ನ 35 ವರ್ಷದ ಗರ್ಭಿಣಿ ಪತ್ನಿಯ ಬಸುರಲ್ಲಿ ಯಾವ ಮಗು ಬೆಳೆಯುತ್ತಿದೆ ಎಂಬುದನ್ನು ತಿಳಿಯಲು ಈ ಕೃತ್ಯ ಎಸಗಿದ್ದಾನೆ ಎಂದು ಪತ್ನಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ತದನಂತರ ಮಹಿಳೆಯನ್ನು ಬರೇಲಿ ಪಟ್ಟಣದ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಿಳೆಯು ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ಪಾಪಿ ಪತಿರಾಯನ ವಿರುದ್ಧ FIR ದಾಖಲಿಸಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.