
ದೆಹಲಿ, ಮಾ.25: ಭಾರತದಲ್ಲಿರುವ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ (Eric Garcetti) ಸೋಮವಾರ ಭಾರತೀಯರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಶುಭಾಶಯವು ತುಂಬಾ ವಿಶೇಷವಾಗಿತ್ತು. ಈ ಬಗ್ಗೆ ಎಕ್ಸ್ನಲ್ಲಿ ಅವರು ಹಂಚಿಕೊಂಡಿದ್ದಾರೆ. ಯುಎಸ್ ರಾಯಭಾರಿ ಗಾರ್ಸೆಟ್ಟಿ ಹೋಳಿ ಹಬ್ಬವನ್ನು ಆಚರಿಸುವ ಎಲ್ಲರಿಗೂ ಆತ್ಮೀಯ ಶುಭಾಶಯ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ನಾನು ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಲು ಬಯಸುತ್ತೇನೆ. ನಾನು ಈ ಬಾರಿಯ ಹೋಳಿಯನ್ನು ಅದ್ಭುತವಾದ ಕರಿಗಡುಬು (Gujiya) ಸವಿಯುವ ಮೂಲಕ ಆಚರಿಸಿಕೊಳ್ಳುತ್ತಿದ್ದೇನೆ. ಆದರೆ ಈ ಕರಿಗಡುಬು ಸ್ವಲ್ಪ ಅಮೇರಿಕನ್ ಟ್ವಿಸ್ಟ್ ಹೊಂದಿದೆ. ಇದರಲ್ಲಿ ಕೆಲವು ಪಿಸ್ತಾಗಳು, ರೋಸ್ ವಾಟರ್ ಇದೆ. ಇಂಡೋ-ಪೆಸಿಫಿಕ್ ಒಟ್ಟಾಗಿ ಹೋಳಿ ಹಬ್ಬವನ್ನು ಆಚರಿಸಿದಂತಿದೆ ಎಂದು ಹೇಳಿದ್ದಾರೆ.
ಗಾರ್ಸೆಟ್ಟಿ ಅವರು ಕರಿಗಡುಬು ಸವಿಯುವ ಬಗ್ಗೆ ಒಂದು ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಈ ಹೋಳಿ ಯುಎಸ್ ಹಾಗೂ ಭಾರತದ ಸಂಬಂಧವನ್ನು ಒತ್ತಿ ಹೇಳುತ್ತಿದೆ. ಹ್ಯಾಪಿಹೋಳಿ, ಸ್ನೇಹಿತರೇ! ಭಾರತದಲ್ಲಿ ನನ್ನ ಮೊದಲ ಹೋಳಿಯನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾನೆ. ಅಮೇರಿಕ ಮತ್ತು ಭಾರತದ ರುಚಿಯನ್ನು ಈ ಕರಿಗಡುಬು ನೀಡಿದೆ. ಇದು ಸಂಪ್ರದಾಯಗಳ ಸಮ್ಮಿಲನ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಭಾರತದಲ್ಲಿನ US ರಾಯಭಾರ ಕಚೇರಿಯಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರೂ ಕೂಡ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ರಾಯಭಾರ ಕಚೇರಿಯಲ್ಲಿ ಹೋಳಿ ಆಚರಣೆಯು ಸ್ವಲ್ಪ ವಿನೋದಮಯವಾಗಿತ್ತು ಹಾಗೂ ಈ ಹೋಳಿಯ ಸಂಭ್ರಮವನ್ನು ಈ ಕ್ಷಣಕ್ಕೆ ಮಾತ್ರ ಸೀಮಿತವಾಗಿಸಿಬೇಡಿ, ಈ ವರ್ಷಪೂರ್ತಿ ಹೋಳಿ ಆಚರಣೆ ಮಾಡುವ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶಗಳಲ್ಲಿ ಹೆಚ್ಚಿದ ಮೋದಿ ಪರಿವಾರ; ಬ್ರಿಟನ್ ಬಳಿಕ ಆಸ್ಟ್ರೇಲಿಯಾದಲ್ಲಿ ಬಿಜೆಪಿಗೆ ಬೆಂಬಲವಾಗಿ ಅಭಿಯಾನ
ಇದಕ್ಕೂ ಮುನ್ನ ಮಾರ್ಚ್ 8 ರಂದು ರಾಯಭಾರಿ ಗಾರ್ಸೆಟ್ಟಿ ಅವರು ಭಾರತ್ ಮಂಟಪದಲ್ಲಿ ವಿದೇಶಿ ಕೃಷಿ ಸೇವೆ (ಎಫ್ಎಎಸ್) ಟೇಸ್ಟ್ ಆಫ್ ಅಮೇರಿಕಾ ಬೂತ್ನ್ನು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಎರಿಕ್ ಗಾರ್ಸೆಟ್ಟಿ ಅವರು ಭಾರತ ಮತ್ತು ಯುಎಸ್ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ತಿಳಿಸಿದ್ದಾರೆ. ಭಾರತ ಮತ್ತು ಯುಎಸ್ ಉತ್ತಮ, ಬಲಶಾಲಿ ಮತ್ತು ಇನ್ನಷ್ಟು ಒಟ್ಟಾಗಿ ಅನೇಕ ಕೆಲಸಗಳನ್ನು ಮಾಡಬೇಕಿದೆ. ಹಾಗಾಗಿ ನಮ್ಮ ಭಾರತೀಯ ಸ್ನೇಹಿತರನ್ನು ನಮ್ಮ ಜತೆಗೆ ಒಟ್ಟಾಗಿ ಕರೆದುಕೊಂಡು ಹೋಗುವುದು ಅಗತ್ಯ, ಅದಕ್ಕಾಗಿ ಈ ಎಫ್ಎಎಸ್ ಸಹಕಾರಿಯಾಗಲಿದೆ ಎಂದರು.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ