ಜಪಾನ್​​ನಲ್ಲಿ ಜಿ7 ಶೃಂಗಸಭೆ: ಪ್ರಧಾನಿ ಮೋದಿ ಬಳಿ ಬಂದು ಆಲಿಂಗಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಪ್ರಧಾನಿ ಮೋದಿಯವರು ಜೂನ್ 21 ರಿಂದ 24 ರವರೆಗೆ ಯುಎಸ್‌ಗೆ ಅಧಿಕೃತ ರಾಜ್ಯ ಪ್ರವಾಸಕ್ಕೆ ಮುಂಚಿತವಾಗಿ ಶನಿವಾರ ಬೈಡನ್ ಅವರೊಂದಿಗಿನ ಸಭೆ ನಡೆಸಿದ್ದಾರೆ. ಇಂದು ಹಿರೋಷಿಮಾದಲ್ಲಿ ಜಿ 7 ಶೃಂಗಸಭೆಯ ಕಾರ್ಯಾಗಾರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಜಪಾನ್ ಪ್ರಧಾನಿ ಪುಮಿಯೊ ಕಿಶಿದಾ ಸ್ವಾಗತಿಸಿದ್ದಾರೆ.

ಜಪಾನ್​​ನಲ್ಲಿ ಜಿ7 ಶೃಂಗಸಭೆ: ಪ್ರಧಾನಿ ಮೋದಿ ಬಳಿ ಬಂದು ಆಲಿಂಗಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಮೋದಿ- ಬೈಡನ್ ಆಲಿಂಗನ
ರಶ್ಮಿ ಕಲ್ಲಕಟ್ಟ

Updated on: May 20, 2023 | 3:28 PM

ಜಪಾನ್‌ನ ಹಿರೋಷಿಮಾದಲ್ಲಿ ಶನಿವಾರ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಪರಸ್ಪರ ಆತ್ಮೀಯವಾಗಿ ಆಲಿಂಗನ ಮಾಡಿದ್ದಾರೆ.ಜಪಾನ್ ಪಿಎಂ ಫುಮಿಯೊ ಕಿಶಿದಾ (Fumio Kishida) ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಜೂನ್ 21 ರಿಂದ 24 ರವರೆಗೆ ಯುಎಸ್‌ಗೆ ಅಧಿಕೃತ ರಾಜ್ಯ ಪ್ರವಾಸಕ್ಕೆ ಮುಂಚಿತವಾಗಿ ಶನಿವಾರ ಬೈಡನ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಇಂದು ಹಿರೋಷಿಮಾದಲ್ಲಿ ಜಿ 7 ಶೃಂಗಸಭೆಯ ಕಾರ್ಯಾಗಾರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಜಪಾನ್ ಪ್ರಧಾನಿ ಪುಮಿಯೊ ಕಿಶಿದಾ ಸ್ವಾಗತಿಸಿದ್ದಾರೆ.

ಒಂದು ದಿನದ ಹಿಂದೆ ಜಪಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ ತಮ್ಮ ಜಪಾನ್ ಪ್ರಧಾನಿ ಕಿಶಿದಾ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಂಪೂರ್ಣ ಶ್ರೇಣಿಯ ಸಂಬಂಧಗಳನ್ನು ಪರಿಶೀಲಿಸಿದರು. ಉಭಯ ನಾಯಕರು ಗ್ರಹವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಭಾರತದ ಜಿ 20 ಪ್ರೆಸಿಡೆನ್ಸಿ ಮತ್ತು ಜಪಾನ್‌ನ ಜಿ 7 ಪ್ರೆಸಿಡೆನ್ಸಿಯ ಕೇಂದ್ರೀಕೃತ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು.


ಇಬ್ಬರೂ ನಾಯಕರು ತಮ್ಮ ಸಂಬಂಧಿತ ಜಿ-20 ಮತ್ತು ಜಿ-7 ಪ್ರೆಸಿಡೆನ್ಸಿಗಳ ಪ್ರಯತ್ನಗಳನ್ನು ಸಂಯೋಜಿಸುವ ಮಾರ್ಗಗಳನ್ನು ಚರ್ಚಿಸಿದ್ದಾರೆ. ಜಾಗತಿಕ ದಕ್ಷಿಣ ರಾಷ್ಟ್ರಗಳ ಕಾಳಜಿ ಮತ್ತು ಆದ್ಯತೆಗಳನ್ನು ಎತ್ತಿ ಹಿಡಿಯುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು.ಅಧಿಕಾರಿಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಟೋಕಿಯೊದಲ್ಲಿ ಭೇಟಿಯಾಗಿದ್ದಾರೆ. ಫೆಬ್ರವರಿ 24, 2022 ರಂದು ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿ ಇದಾಗಿದೆ.

ಪ್ರಬಲ ಗುಂಪಿನ ಪ್ರಸ್ತುತ ಅಧ್ಯಕ್ಷ ಜಪಾನ್‌ನ ಆಹ್ವಾನದ ಮೇರೆಗೆ ಉಕ್ರೇನಿಯನ್ ಅಧ್ಯಕ್ಷರು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.ಉಕ್ರೇನ್ ಸಂಘರ್ಷ ಪ್ರಾರಂಭವಾದಾಗಿನಿಂದ, ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಮಾತನಾಡಿದ್ದಾರೆ.

ಇದನ್ನೂ ಓದಿ: Japan G7 Summit: ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಪ್ರಬಲ ಗುಂಪಿನ ಪ್ರಸ್ತುತ ಅಧ್ಯಕ್ಷರಾಗಿ ಜಪಾನ್ G7 ಶೃಂಗಸಭೆಯನ್ನು ಆಯೋಜಿಸುತ್ತಿದೆ. ಮೇ 19 ರಿಂದ ಮೇ 21 ರವರೆಗೆ ಜಿ7 ಶೃಂಗಸಭೆಗಾಗಿ ಪ್ರಧಾನಿ ಮೋದಿ ಹಿರೋಷಿಮಾದಲ್ಲಿ ಇರಲಿದ್ದಾರೆ. ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆ ಸೇರಿದಂತೆ ಜಾಗತಿಕ ಸವಾಲುಗಳ ಕುರಿತು ಅವರು ಮಾತನಾಡುವ ನಿರೀಕ್ಷೆಯಿದೆ.ಇದಕ್ಕೂ ಮುನ್ನ ಶನಿವಾರ ಯುಎಸ್ ಅಧ್ಯಕ್ಷ ಬೈಡನ್ ಅವರು ಜಿ7 ನಾಯಕರೊಂದಿಗೆ ಶನಿವಾರ ಜಪಾನ್‌ನ ಹಿರೋಷಿಮಾದಲ್ಲಿರುವ 1,400 ವರ್ಷಗಳಷ್ಟು ಹಳೆಯದಾದ ದೇಗುಲವನ್ನು ವೀಕ್ಷಿಸಿದರು ಎಂದು ಶ್ವೇತಭವನ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Sat, 20 May 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us