ನವದೆಹಲಿಯಲ್ಲಿ ಮಂಗಳವಾರದಂದು ಭಾರತ ಮತ್ತು ಅಮೆರಿಕ 2+2 ಸಚಿವರ ನಡುವೆ ನಡೆದ ಮಾತುಕತೆಯ ನಂತರ ಎರಡು ರಾಷ್ರಗಳ ನಾಯಕರು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಚೀನಾದ ಉದ್ಧಟತನವನ್ನು ಉಲ್ಲೇಖಿಸಿದ ಪಾಂಪಿಯೊ, ಯಾವುದೇ ಸಂಧಿಗ್ಧ ಸಂದರ್ಭದಲ್ಲೂ ಅಮೇರಿಕ, ಭಾರತದ ಜೊತೆ ನಿಲ್ಲುತ್ತದೆ ಎಂದು ಹೇಳಿದರು.
‘‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಭಾಗಿರುವ ಭಾರತದ ಗಲ್ವಾನ್ ಕಣಿವೆಯಲ್ಲಿ ಪಿಲ್ಎಯಿಂದ ಹತ್ಯೆಗೊಳಗಾದ 20 ಹುತಾತ್ಮರು ಸೇರಿದಂತೆ ತಮ್ಮ ಜೀವಗಳನ್ನು ಬಲಿದಾನ ಮಾಡಿದ ವೀರಯೋಧರು ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸಲು ನಾವು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದೆವು. ಭಾರತದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗೆ ಅಪಾಯ ಎದುರಾದಾಗ, ಅಮೆರಿಕ ಅದರ ಜೊತೆ ನಿಲ್ಲುತ್ತದೆ ಮತ್ತು ಸಂಪೂರ್ಣ ನೆರವನ್ನು ಒದಗಿಸುತ್ತದೆ,’’ ಎಂದು ಪಾಂಪಿಯೊ ಹೇಳಿದರು.
‘‘ಚೀನಾದ ಕಮ್ಯುನಿಸ್ಟ್ ಪಾರ್ಟಿ
‘‘ ಚೀನಾದ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ಪ್ರಜಾಪ್ರಭುತ್ವ, ನಾಡಿನ ಕಾನೂನು ಮತ್ತು ಪಾರದರ್ಶಕತೆ ಮೊದಲಾದವುಗಳು ತನಗೆ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿರುವುದನ್ನು ನಮ್ಮ ದೇಶದ ನಾಯಕರು ಮತ್ತು ನಾಗರಿಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಭಾರತ ಮತ್ತು ಅಮೆರಿಕ, ಸಿಸಿಪಿಯಿಂದ ಮಾತ್ರವಲ್ಲದೆ ಬೇರೆಲ್ಲ ರೀತಿಯ ಅಪಾಯ ಮತ್ತು ಸವಾಲುಗಳನ್ನು ಎದುರಿಸಲು ತಮ್ಮ ನಡುವಿನ ಸ್ನೇಹ ಮತ್ತು ಸಹಕಾರನ್ನು ವೃದ್ಧಿಸಿ ಬಲಪಡಿಸುತ್ತವೆಯೆಂದು ಹೇಳಲು ನನಗೆ ಹೆಮ್ಯೆಯೆನಿಸುತ್ತಿದೆ,’’ ಎಂದರು.
ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ‘‘ಜಾಗತಿಕವಾಗಿ ಪ್ಯಾಂಡೆಮಿಕ್ ಮತ್ತು ಭದ್ರತೆಗೆ ಸಂಬಂಧಿಸಿದ ಸವಾಲುಗಳು ಹೆಚ್ಚುತ್ತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಮತ್ತು ಪ್ರಾದೇಶಿಕ ಭದ್ರತೆ, ಸ್ಥಿರತೆ ಮತ್ತು ಪ್ರಗತಿಯನ್ನು ಕಾಯ್ದುಕೊಳ್ಳಲು ಭಾರತ ಮತ್ತು ಅಮೆರಿಕದ ಪಾಲುದಾರಿಕೆ ಮತ್ತು ಸಹಕಾರ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ,’’ ಎಂದರು.
‘‘ನಮ್ಮ ಮಾತುಕತೆ ಭಾರತ–ಪೆಸಿಫಿಕ್ ಪ್ರಾಂತ್ಯದ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು. ಈ ಪ್ರಾಂತ್ಯದ ಎಲ್ಲ ರಾಷ್ಟ್ರಗಳ ಭದ್ರತೆ, ಶಾಂತಿ ಮತ್ತು ಅವುಗಳ ಬೆಳವಣಿಗೆ ಬಹಳ ಮಹತ್ವದ್ದು ಎಂಬುದನ್ನು ನಾವು ಒತ್ತಿ ಹೇಳಿದೆವು. ನೆರೆಹೊರೆಯ ರಾಷ್ಟ್ರಗಳ ಅಭಿವೃದ್ಧಿಯ ಬಗ್ಗೆಯೂ ಮಾತುಕತೆಯಲ್ಲಿ ಚರ್ಚೆಯಾಯಿತು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಹಿಸುವುದು ಸಾಧ್ಯವೇ ಇಲ್ಲ ಅಂತ ನಾವು ಪುನರುಚ್ಛರಿಸಿದೆವು,’’ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದರು.