ಲಖನೌ ಸೆಪ್ಟಂಬರ್ 19: ರಾಜ್ಯದಲ್ಲಿ ಹಿಂದಿನ ಸರ್ಕಾರಗಳನ್ನು ಟೀಕಿಸಿದ ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮದ್ಯ ಮಾಫಿಯಾ ಈ ಹಿಂದೆ ಪೌಷ್ಟಿಕಾಂಶ ಯೋಜನೆಗಳನ್ನು ನಡೆಸುತ್ತಿತ್ತು ಎಂದು ಹೇಳಿದ್ದಾರೆ. ಲೋಕಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಪೋಷಣೆ ಮಾಸ (National Nutrition Month) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರವರು. ರಾಜ್ಯದಲ್ಲಿ ಮದ್ಯ ಮಾಫಿಯಾ ಪೌಷ್ಟಿಕಾಂಶ ಪೂರೈಸುತ್ತಿದ್ದ ಕಾಲವೊಂದಿತ್ತು. ನಮ್ಮ ಸರ್ಕಾರವು ಇದಕ್ಕಾಗಿ ಹೊಸ ಕಾರ್ಯವಿಧಾನವನ್ನು ಪರಿಚಯಿಸಿದೆ ಎಂದು ಯೋಗಿ ಹೇಳಿದ್ದಾರೆ.
ಇಡೀ ಉತ್ತರ ಪ್ರದೇಶದಲ್ಲಿ ಎನ್ಸೆಫಾಲಿಟಿಸ್ನಿಂದಾಗಿ ಪ್ರತಿ ವರ್ಷ 1,200-1,500 ಮಂದಿ ಸಾವಿಗೀಡಾಗುತ್ತಿದ್ದರು. ಪೂರ್ವ ಉತ್ತರ ಪ್ರದೇಶವು ವಿಶೇಷವಾಗಿ ಈ ಕಾಯಿಲೆಯಿಂದ ಪ್ರಭಾವಿತವಾಗಿದೆ. 1977 ರಿಂದ 2017 ರ ನಡುವೆ 30 ವರ್ಷಗಳ ಕಾಲ ರಾಜ್ಯದಲ್ಲಿ ಸುಮಾರು 50,000 ಮಕ್ಕಳು ಈ ಕಾಯಿಲೆಗೆ ಬಲಿಯಾಗಿದ್ದಾರೆ. ಆದರೆ ನಮ್ಮ ಸರ್ಕಾರವು ಇಡೀ ರಾಜ್ಯದಲ್ಲಿ ಎನ್ಸೆಫಾಲಿಟಿಸ್ ಅನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ. ತಾಯಿ ಮತ್ತು ಮಕ್ಕಳ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ತಾಯಂದಿರು ಮತ್ತು ಮಕ್ಕಳು ಪೌಷ್ಟಿಕ ಆಹಾರವನ್ನು ಸ್ವೀಕರಿಸಲು ಪ್ರಾರಂಭಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದು ಸಿಎಂ ಹೇಳಿದರು.
‘ರಾಷ್ಟ್ರೀಯ ಪೋಷಣ ಮಾಹ್’ ಕಾರ್ಯಕ್ರಮದ ವೇಳೆ ಸಿಎಂ ‘ಗೋದ್ ಬರಾಯಿ’ (ಸೀಮಂತ ಶಾಸ್ತ್ರ) ಮಾಡಿದ್ದು, ಗರ್ಭಿಣಿಯರಿಗೆ ಔಷಧಿ ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.
'राष्ट्रीय पोषण माह' के अंतर्गत आज लखनऊ में ₹155 करोड़ लागत के 1,359 आंगनवाड़ी केंद्रों और ₹50 करोड़ लागत के 171 बाल विकास परियोजना कार्यालयों का लोकार्पण/शिलान्यास हुआ। इस अवसर पर 2.9 लाख आंगनवाड़ी कार्यकत्री व सहायिकाओं को यूनिफॉर्म हेतु ₹29 करोड़ धनराशि डीबीटी के माध्यम से… pic.twitter.com/OslgpU4GgF
— Yogi Adityanath (@myogiadityanath) September 19, 2023
155 ಕೋಟಿ ವೆಚ್ಚದಲ್ಲಿ 1,359 ಅಂಗನವಾಡಿ ಕೇಂದ್ರಗಳನ್ನು ಸಿಎಂ ಯೋಗಿ ಉದ್ಘಾಟಿಸಿದರು. ಅದೇ ವೇಳೆ 50 ಕೋಟಿ ಅಂದಾಜು ವೆಚ್ಚದಲ್ಲಿ 171 ಶಿಶು ಅಭಿವೃದ್ಧಿ ಯೋಜನಾ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.
ಇದನ್ನೂ ಓದಿ: ಕಿವುಡ ಮತ್ತು ಮೂಕರ ಶಾಲೆಗೆ ಭೇಟಿ ನೀಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್
ಈ ಸಂದರ್ಭದಲ್ಲಿ, ಯುಪಿ ಸಿಎಂ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳನ್ನು ಪೌಷ್ಟಿಕತೆಯಿರುವ ಮಕ್ಕಳಾಗಿ ಬೆಳೆಸಿದ ಪೋಷಕರನ್ನು ಗೌರವಿಸಿದರು. ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ 29 ಕೋಟಿ ರೂ.ಗಳನ್ನು ಸಿಎಂ ವರ್ಗಾಯಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Tue, 19 September 23