
ನವದೆಹಲಿ, ಡಿಸೆಂಬರ್ 6: ಉತ್ತರ ಪ್ರದೇಶದ ಮೌ ಬಳಿಯ ಹಳ್ಳಿಯೊಂದರಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ ತಂದೂರಿ ರೊಟ್ಟಿ (Rotti) ತಯಾರಿಸುವಾಗ ಹಿಟ್ಟಿನ ಮೇಲೆ ಎಂಜಲು ಉಗುಳಿದ ಆರೋಪದ ಮೇಲೆ ಪೊಲೀಸರು ಇಂದು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನ ಕೃತ್ಯ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು.
ಈ ಘಟನೆ ಶುಕ್ರವಾರ ಈ ಗ್ರಾಮದ ಮಾಜಿ ಮುಖ್ಯಸ್ಥ ಅವಧೇಶ್ ಮೌರ್ಯ ಅವರ ನಿವಾಸದಲ್ಲಿ ನಡೆದಿದೆ. ಈ ಬಗ್ಗೆ ಹೆಚ್ಚುವರಿ ಎಸ್ಪಿ ಅನುಪ್ ಕುಮಾರ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. “ಆರೋಪಿ ಅಹ್ಮದ್ ಮದುವೆ ಸಮಾರಂಭದಲ್ಲಿ ರೊಟ್ಟಿ ತಯಾರಿಸುತ್ತಿದ್ದರು. ಅವರು ಹಿಟ್ಟಿಗೆ ಎಂಜಲು ಉಗುಳಿದ್ದಾರೆ ಎಂದು ನಮಗೆ ದೂರು ಬಂದಿತ್ತು. ಈ ಬಗ್ಗೆ ಕಾಣಿಸಿಕೊಂಡ ವೀಡಿಯೊವನ್ನು ಆಧರಿಸಿ, ಅವರನ್ನು ಬಂಧಿಸಲಾಗಿದೆ. ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ: Video: ಎಂಜಲು ಉಗುಳಿ ರೊಟ್ಟಿ ಬೇಯಿಸಿದ ಯುವಕ, ವೈರಲ್ ಆಯ್ತು ದೃಶ್ಯ
ಈ ಕೃತ್ಯವನ್ನು ತೋರಿಸುವ ವೀಡಿಯೊವನ್ನು ಸ್ಥಳೀಯ ನಿವಾಸಿ ಅಜಯ್ ರೈ ಎಂಬುವವರು ಪೊಲೀಸರಿಗೆ ನೀಡಿದ್ದಾರೆ. ಅವರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಘಟನೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಸಾಕ್ಷಿಗಳಿಂದ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ