ರಾತ್ರೋ ರಾತ್ರಿ ಹುಡುಗನಿಂದ ಹುಡುಗಿಯಾಗಿ ಬದಲಾದ ಯುವಕ, ನಿದ್ರೆ ಮಾತ್ರೆ ಕೊಟ್ಟು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡ್ಸಿದ್ದು ಯಾರು?

|

Updated on: Jun 21, 2024 | 9:41 AM

ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಒಪ್ಪಿಗೆಯಿಲ್ಲದೆ ತನಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ, ಯುವಕನಿಗೆ ನಿದ್ರೆ ಮಾತ್ರೆ ಕೊಟ್ಟು ಎಚ್ಚರ ತಪ್ಪಿ ಬಿದ್ದಾಗ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ರಾತ್ರೋ ರಾತ್ರಿ ಹುಡುಗನಿಂದ ಹುಡುಗಿಯಾಗಿ ಬದಲಾದ ಯುವಕ, ನಿದ್ರೆ ಮಾತ್ರೆ ಕೊಟ್ಟು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡ್ಸಿದ್ದು ಯಾರು?
ಶಸ್ತ್ರಚಿಕಿತ್ಸೆ
Follow us on

ರಾತ್ರೋ ರಾತ್ರಿ ಯುವಕನೊಬ್ಬ ಹುಡುಗಿಯಾಗಿ ಬದಲಾಗಿದ್ದಾನೆ, ಆತನಿಗೆ ನಿದ್ರೆ ಮಾತ್ರೆ ಕೊಟ್ಟು ಆಸ್ಪತ್ರೆಗೆ ಕರೆದೊಯ್ದು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಒಪ್ಪಿಗೆಯಿಲ್ಲದೆ ತನಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಮುಜಾಫರ್‌ನಗರದ 20 ವರ್ಷದ ಮುಜಾಹಿದ್, ಓಂಪ್ರಕಾಶ್‌ ಎಂಬಾತ ತನಗೆ ನಿದ್ರೆ ಮಾತ್ರೆ ಕೊಟ್ಟು ಆಸ್ಪತ್ರೆಗೆ ಸಾಗಿಸಿ ಆ ಸಮಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಹೇಳುತ್ತಾರೆ.

ಓಂ ಪ್ರಕಾಶ್ ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ವೈದ್ಯರೊಂದಿಗೆ ಶಾಮೀಲಾಗಿ ಈ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ. ಓಂ ಪ್ರಕಾಶ್ ಕಳೆದ ಎರಡು ವರ್ಷಗಳಿಂದ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು 20 ವರ್ಷದ ಯುವಕ ಹೇಳಿಕೊಂಡಿದ್ದಾನೆ. ಜೂನ್ 3ರಂದು ಓಂ ಪ್ರಕಾಶ್​ ಅವರು ಮುಜಾಹಿದ್​ಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಮನ್ಸೂರ್‌ಪುರದ ಬೆಗ್ರಾಜ್‌ಪುರ ವೈದ್ಯಕೀಯ ಕಾಲೇಜಿನ ವೈದ್ಯರಿಗೆ ಮನವರಿಕೆ ಮಾಡಿದ್ದರು.

ನನಗೆ ಪ್ರಜ್ಞೆ ಬಂದಾಗ, ನಾನು ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದೇನೆ ಎಂದು ಮುಜಾಹಿದ್ ಹೇಳಿದ್ದಾರೆ. ನನಗೆ ಎಚ್ಚರವಾದಾಗ ಓಂ ಪ್ರಕಾಶ್​ ನನ್ನ ಬಳಿ ಬಂದು ನೀನು ಈಗ ಹುಡುಗಿಯಾಗಿ ಬದಲಾಗಿದ್ದೀಯ ನಿನ್ನನ್ನು ಲಕ್ನೋಗೆ ಕರೆದುಕೊಂಡು ಹೋಗಿ ಮದುವೆಯಾಗುತ್ತೇನೆ ಎಂದು ಹೇಳಿದ್ದಾಗಿ ಮುಜಾಹಿದ್ ಹೇಳಿದ್ದಾರೆ.

ಮತ್ತಷ್ಟು ಓದಿ: ಅಮ್ಮ ಬೆಂಬಲವಾಗಿ ನಿಂತರು: ಕೇರಳದ ಮೊದಲ ಮಂಗಳಮುಖಿ ವೈದ್ಯೆ ಪ್ರಿಯಾ ಹೇಳಿದ ಬದುಕಿನ ಕತೆ

ಬೇಗ್ರಾಜ್‌ಪುರ ವೈದ್ಯಕೀಯ ಕಾಲೇಜಿನ ವೈದ್ಯರು ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಮುಜಾಹಿದ್ ತನ್ನ ಸ್ವಂತ ಇಚ್ಛೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಮುಜಾಹಿದ್ ತಂದೆ ನೀಡಿದ ದೂರಿನ ಆಧಾರದ ಮೇಲೆ ಜೂನ್ 16 ರಂದು ಓಂಪ್ರಕಾಶ್ ನನ್ನು ಬಂಧಿಸಲಾಗಿತ್ತು. ಈ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವೈದ್ಯಕೀಯ ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದೆ.

ಮುಜಾಹಿದ್‌ಗೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ಪಾಲ್ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ .
ಆಸ್ಪತ್ರೆಯು ಅಕ್ರಮ ಅಂಗಾಂಗ ವ್ಯಾಪಾರ ಮತ್ತು ಇತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಬಿಕೆಯು ಮುಖಂಡರು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ