ಲಕ್ನೋ, ಆ.28: ಉತ್ತರ ಪ್ರದೇಶ (uttar pradesh) ಪೊಲೀಸ್ ಪೇದೆಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದೀಗ ಇದು ರಾಜಕೀಯ ವಾದ-ವಿವಾದಕ್ಕೂ ಕಾರಣವಾಗಿದೆ. ಈ ವಿಡಿಯೋದಲ್ಲಿ ಪೊಲೀಸ್ ಪೇದೆಯೊಬ್ಬರು ಇಲಾಖೆಯಲ್ಲಿ ತಮಗೆ ಆಗುವ ಸಂಕಷ್ಟದ ಬಗ್ಗೆ ವಿವರಿಸಿದ್ದಾರೆ. ನಮ್ಮ ಇಲಾಖೆ ಕನಿಷ್ಠಪಕ್ಷ ನಮ್ಮ ಕಷ್ಟವನ್ನು ಕೇಳುವ ಕಾಳಜಿ ಕೂಡ ಮಾಡುತ್ತಿಲ್ಲ. ನಮ್ಮ ಕುಟುಂಬಕ್ಕೆ ನಾವೇ ಆಸರೆ, ಆದರೆ ನಮ್ಮ ಮನೆಯವರಿಗೆ ಏನಾದರೂ ಕಷ್ಟ ಬಂದರೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ನನ್ನ ತಂಗಿ ಸಾವನ್ನಪ್ಪಿದ ಕಾರಣ ಜುಲೈ 20ಕ್ಕೆ ನನಗೆ ರಜೆ ಬೇಕಿತ್ತು. ಅದರೂ ನನಗೆ ರಜೆ ನೀಡಿಲ್ಲ ಎಂದು ಅಧಿಕಾರಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಯುಪಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 10-12 ಕಾನ್‌ಸ್ಟೆಬಲ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬದನ್ನು ಕೂಡ ಹೇಳಿದ್ದಾರೆ.
ಇತ್ತೀಚೆಗೆ ಮತ್ತಿಬ್ಬರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗಳು ಏಕೆ ನಡೆಯುತ್ತಿವೆ ಎಂದು ಯಾರಾದರೂ ಯೋಚಿಸಿದ್ದೀರಾ? ಇದರಿಂದ ನನಗೂ ನೋವಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಜುಲೈ 20ಕ್ಕೆ ನನ್ನ ತಂಗಿ ಸಾವನ್ನಪ್ಪಿದ್ದಾಳೆ. ಅದಕ್ಕಾಗಿ ನಾನು ರಜೆಗಾಗಿ ಮನವಿ ಮಾಡಿದ್ದೇ, ಇನ್ನು ನಮ್ಮನ್ನು ದೂರದ ಊರಿಗೆ ಪೋಸ್ಟಿಂಗ್ ಹಾಕುವ ಕಾರಣ ಅಲ್ಲಿಂದ ನಮ್ಮ ಕುಟುಂಬ ಹೇಗಿದೆ? ಅವರ ಜತೆಗೆ ನಾವು ಸ್ವಲ್ಪ ಕಾಲ ಕಳೆಯಲು ಆಗುತ್ತಿಲ್ವಲ್ಲ ಎಂಬ ನೋವನ್ನು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಿನ್ನ ಲಿಂಗ ಬದಲಿಸುತ್ತೇನೆ ಎಂದು ಹೇಳಿ ಮಹಿಳೆಯ ಪ್ರಾಣವನ್ನೇ ತೆಗೆದ ಮಂತ್ರವಾದಿ
ವಿಡಿಯೋ ಮಾಡಿರುವ ಪೊಲೀಸ್ ಪೇದೆಯನ್ನು ಬಾಗ್‌ಪತ್ ಪೊಲೀಸ್ ಇಲಾಖೆಯ ಓಂವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ವಿಡಿಯೋವನ್ನು ಓಂವೀರ್ ಸಿಂಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಯನ್ನು ನೋಡಿ ಟ್ವಿಟರ್ ಬಳಕೆದಾರರೂ ಕಮೆಂಟ್ ಮಾಡಿದ್ದು, ಈ ಅಧಿಕಾರಿಯನ್ನು ನೋಡಿದಾಗ ಪಾಪ ಎಂದು ಅನ್ನಿಸುತ್ತದೆ. ಅವರು ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ. ಎಲ್ಲರಿಗೂ ಮಾನಸಿಕ ಆರೋಗ್ಯ ಮುಖ್ಯ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಪೊಲೀಸ್ ಪೇದೆಯ ವಿಡಿಯೋ ವೈರಲ್
Video of UP police constable Omveer Singh from Baghpat has surfaced on social media. Directs attention towards the cases of suicide by cops. “I am hurt because my sister died on July 20. My leave was not approved,” he said. pic.twitter.com/hGOudoOVHx
— Piyush Rai (@Benarasiyaa) August 27, 2023
ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ಆತ್ಮಹತ್ಯೆಗೆ ಈ ವಿಡಿಯೋ ಬೆಳಕು ಚೆಲ್ಲಿದೆ. ಈ ಹಿಂದೆ ಕೇಂದ್ರ ಗೃಹ ಸಚಿವಾಲಯವು ರಚಿಸಿದ ಕಾರ್ಯಪಡೆಯು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯಲ್ಲಿ ಆತ್ಮಹತ್ಯೆ ಪ್ರಕರಣಗಳ ಹೆಚ್ಚುತ್ತಿರಲು ಕಾರಣ ಇಲಾಖೆಯಲ್ಲಿ ಅವಮಾನ, ಕಿರುಕುಳ ಮತ್ತು ರಜೆಗೆ ಸಂಬಂಧಿಸಿದ ಸಮಸ್ಯೆಗಳು ಎಂದು ಕಂಡು ಬಂದಿತ್ತು. ಇಲಾಖೆಯಲ್ಲಿ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಒತ್ತಡ ಹೆಚ್ಚಾಗಿತ್ತು, ಇದಕ್ಕಾಗಿಯೇ ಅಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ