ದೆಹಲಿ: ಇಂದು ಉನ್ನಾವೋ ರೇಪ್ ಸಂತ್ರಸ್ತೆಯ ಕೊಲೆಗೆ ಯತ್ನ ನಡೆದಿದ್ದು, ಸಂತ್ರಸ್ತೆ ಸ್ಥಿತಿ ಗಂಭೀರಗೊಂಡಿದೆ. ಹಾಗಾಗಿ ತುರ್ತುಚಿಕಿತ್ಸೆಗಾಗಿ ಸಂತ್ರಸ್ತೆಯನ್ನು ದೆಹಲಿಗೆ ಏರ್ ಲಿಫ್ಟ್ ಮಾಡಲಾಗಿದೆ.
ಉತ್ತರ ಪ್ರದೇಶದ ಉನ್ನಾವೋದಲ್ಲಿ ಕಳೆದ ಮಾರ್ಚ್‌ನಲ್ಲಿ ಯುವತಿ ಮೇಲೆ ಗ್ಯಾಂಗ್‌ರೇಪ್ ದುಷ್ಕೃತ್ಯ ನಡೆದಿತ್ತು. ಪ್ರಕರಣದ ಸಂಬಂಧ ರಾಯ್‌ಬರೇಲಿ ಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಬೇಕಿತ್ತು. 5 ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು.
ಇಂದು ಕೋರ್ಟ್ ವಿಚಾರಣೆಗೆಂದು ರಾಯ್‌ಬರೇಲಿಗೆ ಹೊರಟಿದ್ದ ಗ್ಯಾಂಗ್‌ರೇಪ್ ಸಂತ್ರಸ್ತೆಯನ್ನು ಅಡ್ಡಗಟ್ಟಿದ ಆರೋಪಿಗಳು ಆಕೆಯ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಯತ್ನಿಸಿದ್ದರು. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂತ್ರಸ್ತೆಯನ್ನ ಉತ್ತರ ಪ್ರದೇಶದ ರಾಜಧಾನಿ ಲಖನೌ ಆಸ್ಪತ್ರೆಯಿಂದ ಏರ್ ಌಂಬುಲೆನ್ಸ್ನಲ್ಲಿ ಶಿಫ್ಟ್ ಮಾಡಲಾಗಿದೆ.