
ಕ್ನೋ, ಮಾರ್ಚ್ 03: ಮನೆಯ ಮುದ್ದಿನ ಬೆಕ್ಕು ಮೃತಪಟ್ಟಿತೆಂದು ಮಹಿಳೆಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಬೆಕ್ಕಿಗೆ ಮತ್ತೆ ಜೀವಬರಬಹುದು ಎಂದು ಎರಡು ದಿನಗಳ ಕಾಲ ಕಾದು, ಅದು ಮೇಲೇಳದೇ ಇದ್ದಾಗ ಆಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪೂಜಾ ಸುಮಾರು ಎಂಟು ವರ್ಷಗಳ ಹಿಂದೆ ದೆಹಲಿಯ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ, ಎರಡು ವರ್ಷಗಳ ನಂತರ ದಂಪತಿಗಳು ವಿಚ್ಛೇದನ ಪಡೆದರು ಮತ್ತು ಪೂಜಾ ತನ್ನ ತಾಯಿ ಗಜ್ರಾ ದೇವಿಯೊಂದಿಗೆ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದರು.
ಒಂಟಿತನ ಹೋಗಲಾಡಿಸಲು ಪೂಜಾ ಬೆಕ್ಕನ್ನು ಸಾಕಿದ್ದರು, ಅದು ಗುರುವಾರ ಸತ್ತುಹೋಯಿತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪೂಜಾಳ ತಾಯಿ ತನ್ನ ಮಗಳಿಗೆ ಬೆಕ್ಕನ್ನು ಹೂಳಲು ಕೇಳಿದಾಗ, ಅದು ಮತ್ತೆ ಜೀವಂತವಾಗುತ್ತದೆ ಎಂದು ಹೇಳಿಕೊಂಡು ನಿರಾಕರಿಸಿದಳು.
ಮತ್ತಷ್ಟು ಓದಿ: Video: ನೋಯ್ಡಾ: ಲಿಫ್ಟ್ ಒಳಗೆ ನಾಯಿ ತರಬೇಡಿ ಭಯ ಆಗುತ್ತೆ ಎಂದು ಬೇಡಿಕೊಂಡ ಬಾಲಕನ ಧರಧರನೆ ಎಳೆದು ಹೊರಹಾಕಿದ ಮಹಿಳೆ
ಪೂಜಾ ಬೆಕ್ಕನ್ನು ಬಿಡಲು ಇಷ್ಟವಿಲ್ಲದೆ ಎರಡು ದಿನಗಳ ಕಾಲ ಅಂಟಿಕೊಂಡು ಅಲ್ಲೇ ಕೂತಿದ್ದಳು. ಆಕೆಯ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಪ್ರಾಣಿಯನ್ನು ಹೂಳಲು ಕೇಳಿದಾಗ ಆಕೆ ಕೋಪ ಮಾಡಿಕೊಂಡಿದ್ದಳು.
ಪೂಜಾ ನಿರೀಕ್ಷಿಸಿದಂತೆ ಬೆಕ್ಕು ಮತ್ತ ಜೀವಂತವಾಗದಿದ್ದಾಗ ತನ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೊಲೀಸರು ಸಂತ್ರಸ್ತೆಯ ಮನೆಗೆ ಆಗಮಿಸಿ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ