ಪ್ರಧಾನಿ ಮೋದಿ ಕಾರ್ಯ ಮೆಚ್ಚಿ, 100 ರೂ. ಕಳುಹಿಸಿದ ಒಡಿಶಾ ಮಹಿಳೆ, ಮೋದಿ ಭಾವುಕ ಪೋಸ್ಟ್​

ಪ್ರಧಾನಿ ಮೋದಿ ಕಾರ್ಯ ಮೆಚ್ಚಿ ಒಡಿಶಾದ ಮಹಿಳೆಯೊಬ್ಬರು 100 ರೂ. ಕಳುಹಿಸಿರುವ ಘಟನೆ ನಡೆದಿದೆ. ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಮೋದಿಯ ಕಾರ್ಯವನ್ನು ಹಲವು ಮಂದಿ ಶ್ಲಾಘಿಸುತ್ತಿದ್ದಾರೆ. ಒಡಿಶಾದ ಸುಂದರ್‌ಗಢದ ಮಹಿಳೆಯ ಪ್ರೀತಿಯ ಕಂಡು ಭಾವುಕರಾಗಿ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ಮೋದಿ ಕಾರ್ಯ ಮೆಚ್ಚಿ, 100 ರೂ. ಕಳುಹಿಸಿದ ಒಡಿಶಾ ಮಹಿಳೆ, ಮೋದಿ ಭಾವುಕ ಪೋಸ್ಟ್​
ಮಹಿಳೆ

Updated on: Oct 20, 2024 | 11:58 AM

ಪ್ರಧಾನಿ ಮೋದಿ ಕಾರ್ಯ ಮೆಚ್ಚಿ ಒಡಿಶಾದ ಮಹಿಳೆಯೊಬ್ಬರು 100 ರೂ. ಕಳುಹಿಸಿರುವ ಘಟನೆ ನಡೆದಿದೆ. ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಮೋದಿಯ ಕಾರ್ಯವನ್ನು ಹಲವು ಮಂದಿ ಶ್ಲಾಘಿಸುತ್ತಿದ್ದಾರೆ. ಒಡಿಶಾದ ಸುಂದರ್‌ಗಢದ ಮಹಿಳೆಯ ಪ್ರೀತಿಯ ಕಂಡು ಭಾವುಕರಾಗಿ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಜೈ ಪಾಂಡಾ, ಮಹಿಳೆಯ ಚಿತ್ರಗಳನ್ನು ಹಂಚಿಕೊಳ್ಳುವಾಗ, ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿ ಬುಡಕಟ್ಟು ಮಹಿಳೆಯನ್ನು ಭೇಟಿಯಾದರು. ಈ ಆದಿವಾಸಿ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಲು 100 ರೂಪಾಯಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
ಇದು ಅಗತ್ಯವಿಲ್ಲ ಎಂದು ಹೇಳಿದರೂ ಕೂಡ ಅವರು ನಮ್ಮ ಮಾತು ಕೇಳಲಿಲ್ಲ, ಬಳಿಕ ಆ ನೂರು ರೂ. ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಮೋದಿ ಭಾವುಕ ಟ್ವೀಟ್
ಇದು ಒಡಿಶಾ ಹಾಗೂ ಭಾರತದಲ್ಲಾಗುತ್ತಿರುವ ಬದಲಾವಣೆಯ ಪ್ರತಿಬಿಂಬವಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ಮಾಡಿರುವ ಟ್ವೀಟ್​ಗೆ ಮೋದಿ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ಆಶೀರ್ವದಿಸಿದ ಮಹಿಳಾ ಶಕ್ತಿಗೆ ನಾನು ತಲೆಬಾಗುತ್ತೇನೆ. ಈ ಆಶೀರ್ವಾದವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಿಲು ನನಗೆ ಶಕ್ತಿ ನೀಡುತ್ತದೆ ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us