ಸ್ವಂತ ಪಕ್ಷದಿಂದಲೇ ಅವಮಾನ ಎದುರಿಸುತ್ತಿದ್ದೇನೆ; ಇಂಡಿಯಾ ಬಣದ ನಾಯಕರಿಗೆ ಸ್ವಾತಿ ಮಲಿವಾಲ್ ಪತ್ರ

|

Updated on: Jun 18, 2024 | 7:09 PM

ಕಳೆದ ಒಂದು ತಿಂಗಳಿನಿಂದ ನಾನು ನ್ಯಾಯಕ್ಕಾಗಿ ಹೋರಾಡುವಾಗ ನೋವನ್ನು ಅನುಭವಿಸುತ್ತಿದ್ದೇನೆ. ನನ್ನನ್ನು ಬೇರೆಯಾಗಿ ನೋಡಲಾಗುತ್ತಿದೆ. ಈ ಸಂಬಂಧಿತ ಸಮಸ್ಯೆಯನ್ನು ಚರ್ಚಿಸಲು ನಾನು ನಿಮ್ಮ ಸಮಯವನ್ನು ಕೇಳುತ್ತಿದ್ದೇನೆ ಎಂದು ರಾಜ್ಯಸಭಾ ಸಂಸದ ರಾಹುಲ್ ಗಾಂಧಿ ಮತ್ತು ಪವಾರ್ ಅವರಿಗೆ ಬರೆದ ಪತ್ರವನ್ನು ಸ್ವಾತಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಸ್ವಂತ ಪಕ್ಷದಿಂದಲೇ ಅವಮಾನ ಎದುರಿಸುತ್ತಿದ್ದೇನೆ; ಇಂಡಿಯಾ ಬಣದ ನಾಯಕರಿಗೆ ಸ್ವಾತಿ ಮಲಿವಾಲ್ ಪತ್ರ
ಸ್ವಾತಿ ಮಲಿವಾಲ್
Follow us on

ದೆಹಲಿ ಜೂನ್ 18: ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆಪ್ತ ಬಿಭವ್ ಕುಮಾರ್ (Bibhav Kumar) ತನ್ನ ಮೇಲೆ ನಡೆಸಿದ ಹಲ್ಲೆಯ ಕುರಿತು ಚರ್ಚಿಸಲು ಸಮಯ ಕೋರಿ ಪ್ರತಿಪಕ್ಷ ಇಂಡಿಯಾ ಬ್ಲಾಕ್ ನಾಯಕರಿಗೆ ಪತ್ರ ಬರೆದಿದ್ದಾರೆ. ನಿಂದನೆಯ ವಿರುದ್ಧ ಮಾತನಾಡಿದ್ದಕ್ಕಾಗಿ ತನ್ನದೇ ಪಕ್ಷವೇ ನನ್ನನ್ನು ಅವಮಾನಿಸುತ್ತಿದೆ ಎಂದು ಮಲಿವಾಲ್ ಹೇಳಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರಂತಹ ವಿರೋಧ ಪಕ್ಷದ ನಾಯಕರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಮಲಿವಾಲ್ ಅವರು ಬಿಭವ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಆಮ್ ಆದ್ಮಿ ಪಕ್ಷ  ಸಂತ್ರಸ್ತೆಯ ಅವಮಾನ ಮತ್ತು ಚಾರಿತ್ರ್ಯವಧೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಬೆಂಬಲವನ್ನು ನೀಡುವ ಬದಲು ಅವರು, ನನ್ನ ಚಾರಿತ್ರ್ಯವಧೆಯಲ್ಲಿ ತೊಡಗಿದ್ದಾರೆ. ನಾನು ನನ್ನ ಸ್ವಂತ ಪಕ್ಷದ ನಾಯಕರು ಮತ್ತು ಸ್ವಯಂಸೇವಕರಿಂದ ಅವಮಾನ ಎದುರಿಸುತ್ತಿದ್ದೇನೆ ಎಂದು ಮಲಿವಾಲ್ ಅವರು ಇಂಡಿಯಾ ಬ್ಲಾಕ್ ನಾಯಕರಿಗೆ ಪತ್ರ ಬರೆದಿದ್ದು ಈ ವಿಷಯವನ್ನು ಚರ್ಚಿಸಲು ಸಮಯ ಕೋರಿದ್ದಾರೆ.

“ಕಳೆದ ಒಂದು ತಿಂಗಳಿನಿಂದ ನಾನು ನ್ಯಾಯಕ್ಕಾಗಿ ಹೋರಾಡುವಾಗ ನೋವನ್ನು ಅನುಭವಿಸುತ್ತಿದ್ದೇನೆ. ನನ್ನನ್ನು ಬೇರೆಯಾಗಿ ನೋಡಲಾಗುತ್ತಿದೆ. ಈ ಸಂಬಂಧಿತ ಸಮಸ್ಯೆಯನ್ನು ಚರ್ಚಿಸಲು ನಾನು ನಿಮ್ಮ ಸಮಯವನ್ನು ಕೇಳುತ್ತಿದ್ದೇನೆ ಎಂದು ರಾಜ್ಯಸಭಾ ಸಂಸದ ರಾಹುಲ್ ಗಾಂಧಿ ಮತ್ತು ಪವಾರ್ ಅವರಿಗೆ ಬರೆದ ಪತ್ರವನ್ನು ಸ್ವಾತಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ನಾನು ಕಳೆದ 18 ವರ್ಷಗಳಿಂದ ಜನರ ನಡುವೆ ಕೆಲಸ ಮಾಡಿದ್ದೇನೆ. 9 ವರ್ಷಗಳಲ್ಲಿ ಮಹಿಳಾ ಆಯೋಗದಲ್ಲಿ 1.7 ಲಕ್ಷ ಪ್ರಕರಣಗಳನ್ನು ಆಲಿಸಿದ್ದೇನೆ. ಯಾರಿಗೂ ಹೆದರದೆ, ಯಾರಿಗೂ ತಲೆಬಾಗದೆ ಮಹಿಳಾ ಆಯೋಗವನ್ನು ಅತ್ಯಂತ ಉನ್ನತ ಸ್ಥಾನದಲ್ಲಿ ನಿಲ್ಲಿಸಿದ್ದೇನೆ. ಆದರೆ ಮುಖ್ಯಮಂತ್ರಿಗಳ ಮನೆಯಲ್ಲಿ ಮೊದಲು ನನಗೆ ಕೆಟ್ಟದಾಗಿ ಥಳಿಸಿ, ನಂತರ ನನ್ನ ಚಾರಿತ್ರ್ಯಕ್ಕೆ ಚ್ಯುತಿ ತಂದಿರುವುದು ತುಂಬಾ ದುಃಖಕರವಾಗಿದೆ.

ಇಂದು, ನಾನು ಈ ವಿಷಯದ ಬಗ್ಗೆ ಇಂಡಿಯಾ ಮೈತ್ರಿಕೂಟದ ಎಲ್ಲಾ ದೊಡ್ಡ ನಾಯಕರಿಗೆ ಪತ್ರ ಬರೆದಿದ್ದೇನೆ. ನಾನು ಎಲ್ಲರಿಗೂ ಅಪಾಯಿಂಟ್ಮೆಂಟ್ ಕೇಳಿದ್ದೇನೆ” ಎಂದು ಪತ್ರದ ಪ್ರತಿಯನ್ನು ಹಂಚಿಕೊಳ್ಳುವಾಗ ಮಲಿವಾಲ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ ಹೆದರುವುದಿಲ್ಲ; ಭಾರತದೊಂದಿಗಿನ ಬಾಂಧವ್ಯದ ಬಗ್ಗೆ ಚೀನಾಕ್ಕೆ ತೈವಾನ್ ತಿರುಗೇಟು

ಕಳೆದ ವಾರ, ದೆಹಲಿಯ ತಿಜ್ ಹಜಾರಿ ನ್ಯಾಯಾಲಯವು ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಜೂನ್ 22 ರವರೆಗೆ ವಿಸ್ತರಿಸಿತು. ಈ ತಿಂಗಳ ಆರಂಭದಲ್ಲಿ ಅವರ ಎರಡನೇ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.
ಮೇ 16 ರಂದು ಕುಮಾರ್ ವಿರುದ್ಧ ಮಲಿವಾಲ್ ಅವರು ದೂರು ದಾಖಲಿಸಿದ್ದಾರೆ. ನಾನು ಮುಖ್ಯಮಂತ್ರಿಯನ್ನು ಭೇಟಿಯಾಗಲು ಮನವಿ ಮಾಡಿದಾಗ ದೆಹಲಿಯ ಕೇಜ್ರಿವಾಲ್ ಅವರ ನಿವಾಸದಲ್ಲೇ ಅವರ ಆಪ್ತ ನನಗೆ ಕಪಾಳಮೋಕ್ಷ ಮಾಡಿ ಒದ್ದು, ಥಳಿಸಿ ನಿಂದಿಸಿದರು ಎಂದು ಮಲಿವಾಲ್ ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ