
ಪ್ರೀತ್ಸೋದ್ ತಪ್ಪಾ? ಪ್ರೀತಿ ಎಂದರೆ ಸಾಕು ಮನೆಯಲ್ಲಿ ಒಂದು ದೊಡ್ಡ ರಣರಂಗವೆ ಆಗುತ್ತದೆ. ಪ್ರೀತಿ ಮಾಡುವುದಕ್ಕೆ ಕೆಲವೊಂದು ಮನೆಯಲ್ಲಿ ವಿರೋಧ ಇರುತ್ತದೆ, ಇನ್ನೂ ಕೆಲವು ಮನೆಗಳಲ್ಲಿ ಮಕ್ಕಳ ಖುಷಿ ನಮ್ಮ ಖುಷಿ ಎಂದು ಪ್ರೀತಿಗೆ ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ನಮ್ಮ ಪ್ರೀತಿಯನ್ನು ಒಪ್ಪದಿದ್ದಾಗ ಮನೆ ಬಿಟ್ಟು ಹೋಗುತ್ತಾರೆ. ಇಂತಹ ಅನೇಕ ಘಟನೆಗಳು ನಡೆದಿರುವುದನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು ಅಥವಾ ಕೇಳಿರಬಹುದು, ಮನೆಯಲ್ಲಿ ಪ್ರೀತಿ – ಪ್ರೇಮ ಎಂದರೆ ಸಾಕು ದೊಡ್ಡ ಯುದ್ಧವೇ ನಡೆದು ಹೋಗುತ್ತದೆ. ಇದೀಗ ಇಂತಹದೇ ಒಂದು ವೀಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದೆ. ಅಮ್ಮ ನನಗೆ ಬಾಯ್ ಫ್ರೆಂಡ್ ಇದ್ದಾನೆ ಎಂದು ಹೇಳಿದ ಮಗಳಿಗೆ ತಾಯಿ ಹೊಡೆದಿರುವ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ, ಈ ಬಗ್ಗೆ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು ಪ್ರೀತಿ ಮಾಡುವುದು ಸಹಜ ಆದರೆ ಅದನ್ನು ಸಮಾಧಾನದಿಂದ ಅವರಿಗೆ ತಿಳಿ ಹೇಳಬಹುದು. ಆದರೆ ಇಲ್ಲಿ ಆ ಹುಡುಗಿಗೆ ದೈಹಿವಾಗಿ ಮತ್ತು ಮಾನಸಿಕವಾಗಿ ನೋವು ನೀಡುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.
ಬಾಯ್ ಫ್ರೆಂಡ್ ಇದ್ದಾನೆ ಎಂಬ ಕಾರಣಕ್ಕೆ ತಾಯಿ ತನ್ನ ಮಗಳಿಗೆ ತಂದೆ ಮತ್ತು ಸಹೋದರನ ಮುಂದೆಯೇ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಒಬ್ಬ ತಾಯಿ ತನ್ನ ಮಗಳಿಗೆ ಹೀಗೆಲ್ಲ ಹೊಡೆಯುವುದು ಸರಿಯೇ, ಅಂತಹ ತಪ್ಪು ಏನು ಮಾಡಿದ್ದಾರೆ, ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ ಅಷ್ಟೇ, ಅದನ್ನು ನೀವು ಅವಳ ಜತೆಗೆ ಕೂತು ಬಗೆಹರಿಸಿಕೊಳ್ಳಬಹುದು, ಈ ರೀತಿ ಮಾಡುವುದು ಸರಿ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮಗಳು ಅಷ್ಟು ಅಳುತ್ತಿದ್ದರು, ಅಮ್ಮ ಹೊಡಿಬೇಡ ಅಂದರು ತಾಯಿ ನಿಲ್ಲಿಸದೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ಆದರೆ ಮಗಳ ಮಾತನ್ನು ತಾಯಿ ಕೇಳುವ ಪರಿಸ್ಥಿತಿಯಲ್ಲೇ ಇಲ್ಲ. ಎಷ್ಟು ಕೇಳಿಕೊಂಡರು ಬೀಡದೆ ತಾಯಿ ಕೊಣೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಾರೆ.
ಇದನ್ನೂ ಓದಿ: Viral Video: ‘ಪುಟ್ಟಿ, ನೀನು ಸ್ಪೈಡರ್ಮ್ಯಾನ್ನ ಮಗಳೇ? ವಂಡರ್ ವುಮನ್ನ ಮಗಳೇ?’
ಈ ವಿಡಿಯೋ ಅಪ್ಲೋಡ್ ಆದ ನಂತರ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಕ್ಕಾಗಿಯೇ ಹುಡುಗಿಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ, ಮಕ್ಕಳ ಹೇಳುವುದನ್ನು ಒಮ್ಮೆ ತಾಳ್ಮೆಯಿಂದ ಕೇಳಬೇಕು, ನಮ್ಮ ಭಾರತದಲ್ಲಿರುವ ಅನೇಕ ಪೋಷಕರಿಗೆ ಈ ವಿಚಾರದಲ್ಲಿ ತಾಳ್ಮೆ ಇರುವುದಿಲ್ಲ. ಒಂದು ಬಾರಿ ಅವಳು ಯಾರನ್ನೂ ಪ್ರೀತಿ ಮಾಡುತ್ತಿದ್ದಾಳೆ. ಯಾಕೆ? ಏನು? ಎಂಬುದನ್ನು ವಿಚಾರ ಮಾಡದೆ ಈ ರೀತಿ ವರ್ತನೆ ಮಾಡುವುದು ಸರಿಯಲ್ಲ ಎಂದು ಟ್ವಿಟರ್ನಲ್ಲಿ ಬಳಕೆದಾರರೊಬ್ಬರು ಹೇಳಿದ್ದಾರೆ.