ಟಿಆರ್​ಪಿ ಹಗರಣ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್​ಚಂದಾನಿ ಬಂಧನ

| Updated By: Skanda

Updated on: Dec 29, 2020 | 10:58 AM

ಹಂಸಾ ಸಂಶೋಧನಾ ಅಧಿಕಾರಿ ನಿತಿನ್ ದೇವಕರ್ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಅಕ್ಟೋಬರ್ 6 ರಂದು ಮುಂಬೈ ಪೊಲೀಸರು ಪ್ರಥಮ ತನಿಖೆ ಆರಂಭಿಸಿದ್ದರು.

ಟಿಆರ್​ಪಿ ಹಗರಣ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್​ಚಂದಾನಿ ಬಂಧನ
ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್​ಚಂದಾನಿ ಬಂಧನ.
Follow us on

ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್​ಪಿ) ಹಗರಣ  ಸಂಬಂಧಪಟ್ಟಂತೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್​ ಖನ್​ಚಂದಾನಿಯನ್ನು ಮುಂಬೈ ಪೊಲೀಸರು ಇಂದು ಬಂಧಿಸಿದ್ದಾರೆ.

ನಕಲಿ ಟಿವಿ ರೇಟಿಂಗ್ ಹಗರಣ ಅಕ್ಟೋಬರ್​ ಪ್ರಾರಂಭದಲ್ಲಿ ಬೆಳಕಿಗೆ ಬಂದಿದೆ. ಹಂಸ ಸಂಶೋಧನಾಧಿಕಾರಿ ನಿತಿನ್​ ದೇವಕರ್​ ನೀಡಿದ್ದ ದೂರಿನ ಅನ್ವಯ ಅ.6ರಂದು ಎಫ್​ಐಆರ್ ದಾಖಲಿಸಿದ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಖನ್​ಚಂದಾನಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾದ 13ನೇ ವ್ಯಕ್ತಿ.

ಟಿಆರ್​ಪಿಯನ್ನು ನಿರ್ಣಯಿಸುವ ರೇಟಿಂಗ್ ಏಜೆನ್ಸಿ ಬ್ರಾಡ್​ಕಾಸ್ಟ್​ ಆಡಿಯನ್ಸ್​ ರಿಸರ್ಚ್​ ಕೌನ್ಸಿಲ್​ (BARC) ಕೆಲವು ಆಯ್ದ ಮನೆಗಳಲ್ಲಿ ಮಾತ್ರ ರೇಟಿಂಗ್​ ಪಾಯಿಂಟ್​ಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಈ ಮೂಲಕ ಕೆಲವು ಚಾನಲ್​ಗಳು ನಕಲಿ ಟಿಆರ್​ಪಿ ನಂಬರ್ ತೋರಿಸುತ್ತಿವೆ ಎಂದು ನಿತಿನ್ ದೇವಕರ್ ದೂರಿನಲ್ಲಿ ಉಲ್ಲೇಖಿಸಿದ್ದರು.

ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥ ಬಂಧನ 

ಟಿಆರ್​ಪಿ ಹಗರಣದಲ್ಲಿ ಕಳೆದ ತಿಂಗಳು ರಿಪಬ್ಲಿಕ್ ಟಿವಿಯ ಡಿಸ್ಟ್ರಿಬ್ಯೂಶನ್ ಮುಖ್ಯಸ್ಥ ಘನ್​ಶ್ಯಾಮ್​ರನ್ನು ಬಂಧಿಸಲಾಗಿತ್ತು. ನಂತರ ಮುಂಬೈ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಯಾಗಿದ್ದರು. ಘನ್​ಶ್ಯಾಮ್​ಗೆ ವಿಚಾರಣೆ ವೇಳೆ ಪೊಲೀಸರು ಹಿಂಸೆ ನೀಡಿದ್ದಾರೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿತ್ತು.

ಟಿಆರ್​ಪಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಮೂರು ಚಾನೆಲ್​ಗಳಲ್ಲಿ ರಿಪಬ್ಲಿಕ್ ಟಿವಿಯೂ ಸೇರಿದೆ. ಒಂದಷ್ಟು ಮನೆಗಳಲ್ಲಿ ಸದಾ ರಿಪಬ್ಲಿಕ್ ಚಾನಲ್​ ಆನ್​ ಇರುವಂತೆ ಅವರಿಗೆ ತಿಂಗಳಿಗೆ ₹ 400-₹500 ಪಾವತಿಸಲಾಗುತ್ತಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ತಿಳಿಸಿದ್ದಾರೆ.

ಸಂಪಾದಕ ಅರ್ನಬ್ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ

 

Published On - 1:34 pm, Sun, 13 December 20