ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಕಸಿತ ಭಾರತ್ ಸಂಕಲ್ಪ ಯಾತ್ರೆ (Viksit Bharat Sankalp Yatra)ಯನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನವೆಂಬರ್ 15 ರಂದು ಜಾರ್ಖಂಡ್ನ ಖುಂಟಿಯಲ್ಲಿ ಉದ್ಘಾಟಿಸಿದರು. ಅಂದಿನಿಂದ ಶುರುವಾದ ವಿಕಸಿತ ಭಾರತ್ ಸಂಕಲ್ಪ ಯಾತ್ರೆಯು ರಾಷ್ಟ್ರವ್ಯಾಪಿ ನಾಗರಿಕರೊಂದಿಗೆ ಸಂಪರ್ಕವನ್ನು ಬೆಳೆಸುವ ಪರಿವರ್ತಕ ಯಾತ್ರೆಯಾಗಿ ಹೊರಹೊಮ್ಮಿದೆ.
ಡಿಸೆಂಬರ್ 7, 2023 ರವರೆಗೆ, ಈ ಯಾತ್ರೆಯು ದೇಶಾದ್ಯಂತ 36,000 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ತಲುಪಿದ್ದು, ಮತ್ತು ಬರೊಬ್ಬರಿ 1 ಕೋಟಿಗೂ ಹೆಚ್ಚು ನಾಗರಿಕರು ಇದರಲ್ಲಿ ಭಾಗವಹಿಸಿದ್ದಾರೆ ಎಂದು ಎಂಇಐಟಿಐ ಅಭಿವೃದ್ಧಿಪಡಿಸಿದ ಕಸ್ಟಮೈಸ್ ಮಾಡಿದ ಪೋರ್ಟಲ್ನಲ್ಲಿ ಸೆರೆಹಿಡಿಯಲಾದ ಅಂಕಿ-ಅಂಶ ತಿಳಿಸಿದೆ. 37 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 12.07 ಲಕ್ಷ ಮತ್ತು ಗುಜರಾತ್ನಲ್ಲಿ 11.58 ಲಕ್ಷ ಜನರು ಭಾಗವಹಿಸಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲೂ ಪ್ರೋತ್ಸಾಹದಾಯಕ ಸ್ವಾಗತ ದೊರೆತಿದೆ. ಇಲ್ಲಿಯವರೆಗೆ 9 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಚಾಲ್ತಿ ನೀಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ವಿಶೇಷತೆಗಳು, ಅದರ ಪ್ರಯೋಜನಗಳು ಏನು?
ದಿನ ಕಳೆದಂತೆ ಹೆಚ್ಚು ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಈ ಸಂಕಲ್ಪ ಯಾತ್ರೆಯ ಮೊದಲ ವಾರದಲ್ಲಿ 5 ಲಕ್ಷ ನಾಗರಿಕರು ಭಾಗವಹಿಸಿದ್ದರೆ, ಕಳೆದ 10 ದಿನಗಳಲ್ಲಿ ದೇಶಾದ್ಯಂತ 77 ಲಕ್ಷಕ್ಕೂ ಹೆಚ್ಚು ಜನರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಕಡಿಮೆ ಅವಧಿಯಲ್ಲಿ, 700 ಕ್ಕೂ ಹೆಚ್ಚು ಸ್ಥಳಗಳನ್ನು ತಲುಪಿದೆ ಮತ್ತು ಒಟ್ಟು 79 ಲಕ್ಷ ವ್ಯಕ್ತಿಗಳು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ. ಈ ಅಭೂತಪೂರ್ವ ಪ್ರಯತ್ನದಲ್ಲಿ, ವ್ಯಾನ್ಗಳನ್ನು ಬಳಸಿಕೊಂಡು 2.60 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಮತ್ತು 3600 ಕ್ಕೂ ಅಧಿಕ ನಗರ, ಸ್ಥಳೀಯ ಸಂಸ್ಥೆಗಳನ್ನು ತಲುಪಿ, ಸರ್ಕಾರದ ಯೋಜನೆಗಳನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಲು ಜನರಿಗೆ ಕರೆ ನೀಡುತ್ತದೆ.
ಮಹಿಳಾ ಕೇಂದ್ರಿತ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಯಾತ್ರೆಯ ಕೇಂದ್ರ ಬಿಂದುವಾಗಿದ್ದು, 46,000 ಕ್ಕೂ ಹೆಚ್ಚು ಫಲಾನುಭವಿಗಳು ಪಿಎಂ ಉಜ್ವಲ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಆರೋಗ್ಯ ಶಿಬಿರಗಳು ಸಹ ದೊಡ್ಡ ಆಕರ್ಷಣೆ ಎಂದು ಸಾಬೀತಾಗಿದೆ ಮತ್ತು ಇಲ್ಲಿಯವರೆಗೆ 22 ಲಕ್ಷ ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಭಾಗವಾಗಿ ಪ್ರದರ್ಶಿಸಲಾದ ರೈತರಿಗಾಗಿ ಡ್ರೋನ್ ಪ್ರದರ್ಶನವು ಹೆಚ್ಚಿನ ಕುತೂಹಲವನ್ನು ಕೆರಳಿಸಿದೆ. 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ಗಳನ್ನು ಒದಗಿಸುವ ಮತ್ತು ಇಬ್ಬರು ಮಹಿಳಾ ಸದಸ್ಯರಿಗೆ ಅಗತ್ಯ ತರಬೇತಿ ನೀಡುವ ‘ಡ್ರೋನ್ ದೀದಿ ಯೋಜನೆ’ ಪ್ರಾರಂಭಿಸುವುದರೊಂದಿಗೆ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಡ್ರೋನ್ ಹಾರಾಟವನ್ನು ವೀಕ್ಷಿಸಲು ಮುಂದೆ ಬರುತ್ತಿದ್ದಾರೆ. SHG ಗಳು ಡ್ರೋನ್ ಸೇವೆಗಳನ್ನು ಶುಲ್ಕಕ್ಕೆ ಬಾಡಿಗೆಗೆ ನೀಡುತ್ತವೆ, ಇದು ಸ್ವಸಹಾಯ ಗುಂಪಿನ ಸದಸ್ಯರಿಗೆ ಮತ್ತೊಂದು ಆದಾಯದ ಹೊಳೆಯಾಗಿ ಕಾರ್ಯನಿರ್ವಹಿಸುತ್ತದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ