Village of Widows : ಇದು ವಿಧವೆಯರ ಗ್ರಾಮ -ಇಲ್ಲಿ ವಿವಾಹಿತ ಪುರುಷರು ಹೆಚ್ಚಾಗಿ ಅಕಾಲಿಕವಾಗಿ ಸಾಯುತ್ತಾರೆ.. ಯಾಕೆ ಗೊತ್ತಾ?

|

Updated on: Jul 29, 2023 | 7:35 PM

ರಾಜಸ್ಥಾನದ ಬುಂದಿ ಜಿಲ್ಲೆಯ ಬುಧಪುರ ಗ್ರಾಮವನ್ನು ವಿಧವೆಯರ ಗ್ರಾಮ ಎಂದು ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಅನೇಕ ಮಹಿಳೆಯರು ತಾವು ಜೀವಂತವಾಗಿರುವಾಗಲೇ ತಮ್ಮ ಗಂಡನನ್ನು ಕಳೆದುಕೊಳ್ಳುತ್ತಾರೆ

Village of Widows : ಇದು ವಿಧವೆಯರ ಗ್ರಾಮ -ಇಲ್ಲಿ ವಿವಾಹಿತ ಪುರುಷರು ಹೆಚ್ಚಾಗಿ ಅಕಾಲಿಕವಾಗಿ ಸಾಯುತ್ತಾರೆ.. ಯಾಕೆ ಗೊತ್ತಾ?
ಇದು ವಿಧವೆಯರ ಗ್ರಾಮ -ಇಲ್ಲಿ ವಿವಾಹಿತ ಪುರುಷರು ಹೆಚ್ಚಾಗಿ ಸಾಯುತ್ತಾರೆ.. ಯಾಕೆ ಗೊತ್ತಾ?
Follow us on

Village of Widows : ಭಾರತದಲ್ಲಿ ವಿಧವೆಯರ ಗ್ರಾಮ ಎಂಬುದೊಂದಿದೆ. ರಾಜಸ್ಥಾನದ ಬುಂದಿ ಜಿಲ್ಲೆಯ ಒಂದು ಗ್ರಾಮವನ್ನು ವಿಧವೆಯರ ಗ್ರಾಮ ಎಂದು ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಅನೇಕ ಮಹಿಳೆಯರು ತಾವು ಜೀವಂತವಾಗಿರುವಾಗಲೇ ತಮ್ಮ ಗಂಡನನ್ನು ಕಳೆದುಕೊಳ್ಳುತ್ತಾರೆ (death of men). ಈ ಎಲ್ಲಾ ಮಹಿಳೆಯರದು ಹೋರಾಟದ ಬದುಕೇ ಆಗಿದೆ. ರಾಜಸ್ಥಾನ (rajasthan) ರಾಜ್ಯದ ಬುಂದಿ ಜಿಲ್ಲೆಯ ಈ ಗ್ರಾಮವು ಪುರುಷರಲ್ಲಿ ಅತಿ ಹೆಚ್ಚು ಅಕಾಲಿಕ ಮರಣವನ್ನು ಹೊಂದಿದೆ. ಈ ಗ್ರಾಮದ ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಜೀವನ್ಮರಣದ ಹೋರಾಟ ನಡೆಸುತ್ತಿರುತ್ತಾರೆ. ದಿನಕ್ಕೆ 10 ಗಂಟೆಗಳ ಕಾಲ ಅವರೆಲ್ಲರೂ ಮರಳು ಅಗೆಯುವ ಮೂಲಕ ಜೀವನ ಸಾಗಿಸುತ್ತಾರೆ.

ರಾಜಸ್ಥಾನ ರಾಜ್ಯದ ಬುಂದಿ ಜಿಲ್ಲೆಯ ಬುಧಪುರ ಗ್ರಾಮವನ್ನು (bodhpur village) ವಿಧವೆ ಗ್ರಾಮ ಎಂದೂ ಕರೆಯುತ್ತಾರೆ. ಈ ಗ್ರಾಮದಲ್ಲಿ ವಾಸಿಸುವ ವಿಧವೆಯರ ಜೀವನವು ಹೋರಾಟದಿಂದ ತುಂಬಿದೆ. ಈ ಗ್ರಾಮದಲ್ಲಿ ಅನೇಕ ಮಹಿಳೆಯರು ತಮ್ಮ ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಗ್ರಾಮವು ಹೆಚ್ಚಿನ ಅಕಾಲಿಕ ಮರಣ ಪ್ರಮಾಣವನ್ನು ಹೊಂದಿದೆ. ಈ ಗ್ರಾಮದಲ್ಲಿ ಪುರುಷರ ಅಕಾಲಿಕ ಮರಣಕ್ಕೆ ನಿಜವಾದ ಕಾರಣ ಏನು ಎಂದು ಹಲವರು ಆಶ್ಚರ್ಯ ಪಡುತ್ತಾರೆ.

ಇದು ವಿಧವೆಯರ ಹಳ್ಳಿ – ಪುರುಷರಲ್ಲಿ ಅಕಾಲಿಕ ಮರಣಕ್ಕೆ ಕಾರಣವೇನು?

ಈ ಗ್ರಾಮದ ಜನರ ಅಕಾಲಿಕ ಸಾವಿಗೆ ಮುಖ್ಯ ಕಾರಣ ಈ ಭಾಗದ ಗಣಿಗಳು. ಅಲ್ಲಿ ಧೂಳಿನ ಕಣಗಳು ಗಾಳಿಯಲ್ಲಿ ಕರಗಿ ಜನರ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ. ಈ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಪುರುಷರ ಸಾವಿಗೆ ಗಣಿಗಾರಿಕೆಯೇ ಕಾರಣ ಎಂದು ಹಲವು ವರದಿಗಳು ಹೇಳಿವೆ. ಇಲ್ಲಿನ ಗಣಿಗಳಲ್ಲಿ ಕೆಲಸ ಮಾಡುವ ಪುರುಷರಿಗೆ ಸಿಲಿಕೋಸಿಸ್ ಎಂಬ ಮಾರಕ ರೋಗ ಬರುತ್ತದೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಹೆಚ್ಚಿನ ಸಂಖ್ಯೆಯ ರೋಗಿಗಳು ಸಾವನ್ನಪ್ಪುತ್ತಿದ್ದಾರೆ.

ಮರಳು ಬ್ಲಾಸ್ಟಿಂಗ್ ಕೆಲಸ

ಗಂಡ ಸತ್ತ ಮೇಲೂ ಇಲ್ಲಿನ ಹೆಂಗಸರೆಲ್ಲ ಗಣಿ ಕೆಲಸ ಮಾಡಿ ಮಕ್ಕಳನ್ನು ಸಾಕಬೇಕು. ಬುಧಪುರದಲ್ಲಿ ಮರಳುಗಲ್ಲು ಪುಡಿ ಮಾಡುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ. ಈ ಕೆಲಸದ ಸಮಯದಲ್ಲಿ ಬಿಡುಗಡೆಯಾಗುವ ಸಿಲಿಕಾ ಧೂಳು ಅವರ ಶ್ವಾಸಕೋಶದಲ್ಲಿ ಸೋಂಕನ್ನು ಉಂಟುಮಾಡುತ್ತದೆ. ದುರದೃಷ್ಟವಶಾತ್, ಇವರು ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಗಣಿ ಕೆಲಸ ಮಾಡಿ ಗಂಡನನ್ನು ಕಳೆದುಕೊಂಡ ಅನೇಕ ಮಹಿಳೆಯರು ಈ ಗ್ರಾಮದಲ್ಲಿದ್ದಾರೆ.