ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಹಲವು ಅಡೆತಡೆಗಳ ಮಧ್ಯೆಯೂ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಈ ಗೆಲುವಿನ ಬಗ್ಗೆ ಮನ್-ಕಿ-ಬಾತ್ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಟೀಂ ಇಂಡಿಯಾವನ್ನು ಹೊಗಳಿದ್ದಾರೆ. ಮೋದಿ ಅವರ ಮಾತಿಗೆ ಕ್ರಿಕೆಟ್ ಕೋಚ್ ರವಿ ಶಾಸ್ತ್ರಿ ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಮನ್ ಕಿ ಬಾತ್ನಲ್ಲಿ ಮಾತನಾಡಿದ್ದ ಮೋದಿ, ಈ ತಿಂಗಳು ಕ್ರಿಕೆಟ್ನಿಂದ ನಾವು ಒಳ್ಳೆಯ ಸುದ್ದಿ ಪಡೆದಿದ್ದೇವೆ. ನಮ್ಮ ಕ್ರಿಕೆಟ್ ತಂಡವು ಆರಂಭಿಕ ತೊಂದರೆ ಅನುಭವಿಸಿತ್ತು. ನಂತರ ಉತ್ತಮ ಕಂಬ್ಯಾಕ್ ಮಾಡಿ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿತು. ತಂಡದ ಪರಿಶ್ರಮ ಪ್ರೇರೆಪಿಸುವಂತಿದೆ ಎಂದಿದ್ದರು.
ಮೋದಿ ಮನ್-ಕಿ-ಬಾತ್ನಲ್ಲಿ ಆಡಿದ ಮಾತನ್ನು ಪಿಎಂಒ ಇಂಡಿಯಾ ಟ್ವೀಟ್ ಮಾಡಿತ್ತು. ಈ ಟ್ವೀಟ್ ಅನ್ನು ರೀಟ್ವಿಟ್ ಮಾಡಿರುವ ರವಿಶಾಸ್ತ್ರಿ, ನಿಮ್ಮ ಶಬ್ದಗಳು ಟೀಂ ಇಂಡಿಯಾವನ್ನು ಮತ್ತಷ್ಟು ಬಲಗೊಳಿಸಿದೆ ಎಂದು ಬರೆದುಕೊಂಡಿದ್ದಾರೆ.
Thank you, Sir. Your kind words will further strengthen #TeamIndia and ??’s resolve to perform under pressure and in trying circumstances. Jai Hind ! https://t.co/yQQN9nh8Ab
— Ravi Shastri (@RaviShastriOfc) January 31, 2021
ವಿರಾಟ್ ಕೊಹ್ಲಿ ಕೂಡ ಇದನ್ನು ರೀಟ್ವಿಟ್ ಮಾಡಿದ್ದು, ಭಾರತದ ಬಾವುಟ ಹಾಕಿದ್ದಾರೆ.
— Virat Kohli (@imVkohli) January 31, 2021
Thank you for your words of encouragement Shri @narendramodi Ji ? It’s always an honour to represent our country, we hope to continue inspiring more Indians as we move forward ?? https://t.co/8vxfrU3N4v
— Ajinkya Rahane (@ajinkyarahane88) January 31, 2021
ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಅಪಮಾನವಾಗಿದೆ: ಮನ್ ಕೀ ಬಾತ್ನಲ್ಲಿ ನರೇಂದ್ರ ಮೋದಿ ಬೇಸರ