ವಾಟ್ಸಾಪ್ ಪುರಾವೆ: NDPS ನ್ಯಾಯಾಲಯವೇ ರಾಗಿಣಿ-ಸಂಜನಾ ಗ್ಯಾಂಗ್​ಗೆ ಸಿಹಿ ಸುದ್ದಿ ನೀಡಿತು! ಏನದು?

|

Updated on: Nov 20, 2020 | 4:47 PM

ಮುಂಬೈ: ಮಾದಕ ವಸ್ತುಗಳು ಜಪ್ತಿಯಾಗಿದ್ದರೆ, ಸಹ ಆರೋಪಿಗಳೊಂದಿಗೆ ನಡೆಸಿರುವ ವಾಟ್ಸಾಪ್ ಮೆಸೇಜ್​ಗಳನ್ನು ಪುರಾವೆಯಾಗಿ ಪರಿಗಣಿಸಿ, ಆರೋಪಿಯನ್ನು ಸೆರೆಮನೆಗೆ ಕಳಿಸಲು ಆಗುವುದಿಲ್ಲ ಎಂದು ಖುದ್ದು ಎನ್​ಡಿಪಿಎಸ್ (NDPS-Narcotic Drugs and Psychotropic Substances Court) ನ್ಯಾಯಾಲಯವೇ ಹೇಳಿದೆ. ಈ ಸಂಬಂಧ ಗುರುವಾರ ತೀರ್ಪು ನೀಡಿರುವ NDPS Court ನ್ಯಾಯಾಧೀಶ ಎಸ್.ಎಚ್.ಸತ್ಭಾಯ್, ಕಳೆದ ವಾರ ಪೊಲೀಸರು ಬಂಧಿಸಿದ್ದ ಆಸ್ಟ್ರೇಲಿಯಾದ ಆರ್ಕಿಟೆಕ್ಟ್ ಪೌಲ್ ಗೆರಾರ್ಡ್ ಬಾರ್ಟಲ್ಸ್​ಗೆ Paul Bartels ಜಾಮೀನು ಮಂಜೂರು ಮಾಡಿದರು. ಕೋರ್ಟ್ ಆದೇಶ ಕೇಳಿ ಕಿರುನಗೆ ಚೆಲ್ಲಿದೆ ರಾಗಿಣಿ-ಸಂಜನಾ […]

ವಾಟ್ಸಾಪ್ ಪುರಾವೆ: NDPS ನ್ಯಾಯಾಲಯವೇ ರಾಗಿಣಿ-ಸಂಜನಾ ಗ್ಯಾಂಗ್​ಗೆ ಸಿಹಿ ಸುದ್ದಿ ನೀಡಿತು! ಏನದು?
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಮಾದಕ ವಸ್ತುಗಳು ಜಪ್ತಿಯಾಗಿದ್ದರೆ, ಸಹ ಆರೋಪಿಗಳೊಂದಿಗೆ ನಡೆಸಿರುವ ವಾಟ್ಸಾಪ್ ಮೆಸೇಜ್​ಗಳನ್ನು ಪುರಾವೆಯಾಗಿ ಪರಿಗಣಿಸಿ, ಆರೋಪಿಯನ್ನು ಸೆರೆಮನೆಗೆ ಕಳಿಸಲು ಆಗುವುದಿಲ್ಲ ಎಂದು ಖುದ್ದು ಎನ್​ಡಿಪಿಎಸ್ (NDPS-Narcotic Drugs and Psychotropic Substances Court) ನ್ಯಾಯಾಲಯವೇ ಹೇಳಿದೆ.

ಈ ಸಂಬಂಧ ಗುರುವಾರ ತೀರ್ಪು ನೀಡಿರುವ NDPS Court ನ್ಯಾಯಾಧೀಶ ಎಸ್.ಎಚ್.ಸತ್ಭಾಯ್, ಕಳೆದ ವಾರ ಪೊಲೀಸರು ಬಂಧಿಸಿದ್ದ ಆಸ್ಟ್ರೇಲಿಯಾದ ಆರ್ಕಿಟೆಕ್ಟ್ ಪೌಲ್ ಗೆರಾರ್ಡ್ ಬಾರ್ಟಲ್ಸ್​ಗೆ Paul Bartels ಜಾಮೀನು ಮಂಜೂರು ಮಾಡಿದರು.

ಕೋರ್ಟ್ ಆದೇಶ ಕೇಳಿ ಕಿರುನಗೆ ಚೆಲ್ಲಿದೆ ರಾಗಿಣಿ-ಸಂಜನಾ ಗ್ಯಾಂಗ್​
ಇದನ್ನು ಕೇಳಿ, ಪರಪ್ಪನ ಅಗ್ರಹಾರದಲ್ಲಿರುವ ನಟಿಮಣಿಯರಾದ ರಾಗಿಣಿ-ಸಂಜನಾ ಗ್ಯಾಂಗ್​ಗೆ ಕಿರುನಗೆ ಚೆಲ್ಲಿದೆ. ಯಾವ ಸಿಸಿಬಿಯವರು ತಮ್ಮನ್ನು ಬರೀ ವಾಟ್ಸಾಪ್​ ಮೆಸೇಜ್​ಗಳನ್ನೇ ಆಧರಿಸಿ ತಮ್ಮನ್ನು ಪರಪ್ಪನ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೋ ಅವರಿಗೆ ಈ ಕೋರ್ಟ್​ ಆರ್ಡರ್​​ ತೋರಿಸಿ, ಅದೇ NDPS ನ್ಯಾಯಾಲಯದಲ್ಲಿ ಜಾಮೀನು ಪಡೆಯಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ. ಆದ್ರೆ ಇದರಾಚೆ.. ಬರೀ ವಾಟ್ಸಾಪ್​ ಮೆಸೇಜ್​ಗಳಷ್ಟೇ ಅಲ್ಲ; ಇನ್ನೂ ಇದೆ ನಿಮ್ಮ ‘ಸರಕು’ ಎಂದು ನ್ಯಾಯಾಲಯದೆದುರು ಸಿಸಿಬಿ ಸಾಬೀತುಪಡಿಸಿದರೆ ಅಂತಿಮ ನಗೆ ಸಿಸಿಬಿಯದ್ದೇ ಆಗುತ್ತದೆ.

ಏನಿದು.. ಪೌಲ್ ಗೆರಾರ್ಡ್ ಪ್ರಕರಣ?
ಕಳೆದ 8 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಬಾರ್ಟಲ್ಸ್ ಅವರನ್ನು ಮಾದಕ ವಸ್ತುಗಳ ದಾಸ್ತಾನು ಮತ್ತು ಬಳಕೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುಗಳನ್ನು ಜಪ್ತಿ ಮಾಡಲು ಎನ್​ಸಿಬಿ (NCB-Narcotics Control Bureau) ಅಧಿಕಾರಿಗಳು ವಿಫಲರಾಗಿದ್ದರು. ಆದರೆ ವಾಟ್ಸಾಪ್ ಚಾಟ್ನಲ್ಲಿ ಆರೋಪಿಯು ಮತ್ತೊಬ್ಬ ವ್ಯಕ್ತಿಯೊಂದಿಗೆ ಡ್ರಗ್ಸ್ ಬಗ್ಗೆ ಚರ್ಚಿಸಿದ್ದು ಪತ್ತೆಯಾಗಿದೆ ಎಂದು ಹೇಳಿದ್ದರು.

‘ಆರೋಪಿಯು ಡ್ರಗ್ಸ್ ಪೆಡ್ಲರ್/ಸರಬರಾಜುದಾರನ ರೀತಿಯಲ್ಲಿ ಕೆಲವರೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಎಂದು ನೀವು ಈ ಮೆಸೇಜ್ಗಳನ್ನು ಆಧರಿಸಿ ಹೇಳುತ್ತಿದ್ದೀರಿ. ಆದರೆ ಈ ಹಂತದಲ್ಲಿ ಕೇವಲ ಮೆಸೇಜ್ಗಳನ್ನು ಆಧರಿಸಿ, ಆರೋಪಿಯನ್ನು ಡ್ರಗ್ಸ್ ಪೆಡ್ಲರ್/ಸರಬರಾಜುದಾರ ಎನ್ನಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿಯಾದರೂ ಎನ್ಸಿಬಿ ತನ್ನ ವಾದಕ್ಕೆ ಪೂರಕವಾದ ವಸ್ತುಗಳನ್ನು ಜಪ್ತಿ ಮಾಡಲು ಸಾಧ್ಯವಾದರೆ ಪ್ರಕರಣ ಮತ್ತೊಂದು ತಿರುವು ಪಡೆಯುತ್ತದೆ‘ ಎಂದು ನ್ಯಾಯಾಧೀಶರು ಹೇಳಿದರು.

‘ಆರೋಪ ದೃಢಪಡಿಸುವ ಗಟ್ಟಿಯಾದ ಪುರಾವೆಗಳು ಇಲ್ಲದಿದ್ದಾಗ, ಆರೋಪಿಯಿಂದ ಯಾವುದೇ ಆಕ್ಷೇಪಾರ್ಹ ವಸ್ತುವನ್ನು ಜಪ್ತಿ ಮಾಡಿಲ್ಲ ಅಥವಾ ಆರೋಪಿಯ ಬಳಿ ಯಾವುದೇ ಆಕ್ಷೇಪಾರ್ಹ ವಸ್ತು ಇರಲಿಲ್ಲ ಎಂಬ ಸಂದರ್ಭದಲ್ಲಿ, ಸಹ ಆರೋಪಿಯ ಹೇಳಿಕೆಗಳು ಮತ್ತು ವಾಟ್ಸಾಪ್ ಮೆಸೇಜ್ಗಳನ್ನು ಆಧಾರವಾಗಿ ಪರಿಗಣಿಸಿ ಯಾರೊಬ್ಬರನ್ನೂ ಡ್ರಗ್ಸ್ ಪೆಡ್ಲರ್/ಸರಬರಾಜುದಾರ ಎಂದು ಪರಿಗಣಿಸಲು ಆಗುವುದಿಲ್ಲ. ವಾಟ್ಸಾಪ್ ಮೆಸೇಜ್ಗಳನ್ನು ಆಧಾರವಾಗಿಟ್ಟುಕೊಂಡು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಜಾಮೀನು ಪಡೆಯಲು ಬಾರ್ಟಲ್ಸ್ ₹ 1 ಲಕ್ಷ ವೈಯಕ್ತಿಕ ಬಾಂಡ್ ನೀಡಬೇಕು, ಪಾಸ್ಪೋರ್ಟ್ ಮರಳಿಸಬೇಕು ಮತ್ತು ಮುಂಬೈ ಬಿಟ್ಟು ತೆರಳಬಾರದು ಎಂಬ ಇದೇ ವೇಳೆ ನ್ಯಾಯಾಲಯವು ಷರತ್ತುಗಳನ್ನು ವಿಧಿಸಿದೆ.