ಪಾಕಿಸ್ತಾನದ ಕರಾಚಿ ಭಾರತಕ್ಕೆ ಸೇರಬೇಕು ಎಂದ ದೇವೇಂದ್ರ ಫಡ್ನವೀಸ್​!

ಮುಂಬೈ:ಅತ್ತ ಪಾಕಿಸ್ತಾನವು ಕಾಶ್ಮೀರವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದರೆ ಇತ್ತ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರಾಚಿಯನ್ನೂ ಭಾರತಕ್ಕೆ ಸೇರಿಸುವ ಮಾತನಾಡಿದ್ದಾರೆ. ನಾವು ಅಖಂಡ ಭಾರತ ನಿರ್ಮಾಣದಲ್ಲಿ ನಂಬಿಕೆ ಇಟ್ಟಿದ್ದೇವೆ. ಮುಂದೊಂದು ದಿನ ಕರಾಚಿಯೂ ಭಾರತದ ಒಂದು ಭಾಗವಾಗುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ. ಇತ್ತೀಚೆಗೆ ಶಿವಸೇನೆ ಕಾರ್ಯಕರ್ತರೊಬ್ಬರು ಸ್ವೀಟ್​ ಅಂಗಡಿಯೊಂದರ ಮಾಲೀಕನ ಬಳಿ, ನಿಮ್ಮ ಶಾಪ್​​ಗೆ ಇಟ್ಟ ಕರಾಚಿ ಸ್ವೀಟ್ಸ್​ ಎಂಬ ಹೆಸರಿನಲ್ಲಿ ಕರಾಚಿ ಎಂಬ ಶಬ್ದವನ್ನು ತೆಗೆಯಿರಿ ಎಂದು ಹೇಳಿದ್ದರು. ಅದರ ಬಗ್ಗೆ […]

ಪಾಕಿಸ್ತಾನದ ಕರಾಚಿ ಭಾರತಕ್ಕೆ ಸೇರಬೇಕು ಎಂದ ದೇವೇಂದ್ರ ಫಡ್ನವೀಸ್​!
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​

Updated on: Nov 21, 2020 | 12:45 PM

ಮುಂಬೈ:ಅತ್ತ ಪಾಕಿಸ್ತಾನವು ಕಾಶ್ಮೀರವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದರೆ ಇತ್ತ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರಾಚಿಯನ್ನೂ ಭಾರತಕ್ಕೆ ಸೇರಿಸುವ ಮಾತನಾಡಿದ್ದಾರೆ.

ನಾವು ಅಖಂಡ ಭಾರತ ನಿರ್ಮಾಣದಲ್ಲಿ ನಂಬಿಕೆ ಇಟ್ಟಿದ್ದೇವೆ. ಮುಂದೊಂದು ದಿನ ಕರಾಚಿಯೂ ಭಾರತದ ಒಂದು ಭಾಗವಾಗುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ.

ಇತ್ತೀಚೆಗೆ ಶಿವಸೇನೆ ಕಾರ್ಯಕರ್ತರೊಬ್ಬರು ಸ್ವೀಟ್​ ಅಂಗಡಿಯೊಂದರ ಮಾಲೀಕನ ಬಳಿ, ನಿಮ್ಮ ಶಾಪ್​​ಗೆ ಇಟ್ಟ ಕರಾಚಿ ಸ್ವೀಟ್ಸ್​ ಎಂಬ ಹೆಸರಿನಲ್ಲಿ ಕರಾಚಿ ಎಂಬ ಶಬ್ದವನ್ನು ತೆಗೆಯಿರಿ ಎಂದು ಹೇಳಿದ್ದರು. ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವೇಂದ್ರ ಫಡ್ನವೀಸ್​ ಈ ಹೇಳಿಕೆ ನೀಡಿದ್ದಾರೆ.

ಕರಾಚಿ ಸ್ವೀಟ್ಸ್​ ಆ್ಯಂಡ್​ ಕರಾಚಿ ಬೇಕರಿ ಎಂಬ ಅಂಗಡಿ ಮುಂಬೈನಲ್ಲಿ ಕಳೆದ 60 ವರ್ಷಗಳಿಂದಲೂ ಇದೆ. ಆದರೆ ಕೆಲವು ದಿನಗಳ ಹಿಂದೆ ಶಿವಸೇನೆ ಕಾರ್ಯಕರ್ತ ನಿತಿನ್​ ನಂದಗಾಂವ್ಕರ್​ ಎಂಬುವರು ಹೆಸರು ಬದಲಿಸುವಂತೆ ಹೇಳಿದ್ದರು. ಆದರೆ ಶಿವಸೇನೆ, ನಿತಿನ್​ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಅದು ನಿತಿನ್​ ಅವರ ವೈಯಕ್ತಿಕ ಅಭಿಪ್ರಾಯ. ನಮಗೂ-ಅದಕ್ಕೂ ಸಂಬಂಧವಿಲ್ಲ ಎಂದಿತ್ತು.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us