ಭಾರತದಲ್ಲಿ ಯಾರು ಅಮ್ಮನ ಅಜ್ಜನ ಸರ್​​ನೇಮ್​​ ಬಳಸುತ್ತಾರೆ?: ನೆಹರು ಉಪನಾಮ ಬಗ್ಗೆ ಮೋದಿ ಪ್ರಶ್ನೆಗೆ ಕಾಂಗ್ರೆಸ್ ಪ್ರತಿಕ್ರಿಯೆ

|

Updated on: Feb 10, 2023 | 9:37 PM

ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರಿಗೆ ಭಾರತದ ಸಂಸ್ಕೃತಿ ಗೊತ್ತಿಲ್ಲ ಅಥವಾ ಅರ್ಥವಾಗುವುದಿಲ್ಲ. ಅವರು ಹೀಗೆ ಮಾತನಾಡುತ್ತಾರೆ. ನೀವು ದೇಶದ ಯಾವುದೇ ವ್ಯಕ್ತಿಯನ್ನು ಕೇಳಿ, ಯಾರು ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆ? ಎಂದು ಸುರ್ಜೇವಾಲಾ ಕೇಳಿದ್ದಾರೆ

ಭಾರತದಲ್ಲಿ ಯಾರು ಅಮ್ಮನ ಅಜ್ಜನ ಸರ್​​ನೇಮ್​​ ಬಳಸುತ್ತಾರೆ?: ನೆಹರು ಉಪನಾಮ ಬಗ್ಗೆ ಮೋದಿ ಪ್ರಶ್ನೆಗೆ ಕಾಂಗ್ರೆಸ್ ಪ್ರತಿಕ್ರಿಯೆ
ರಣದೀಪ್ ಸುರ್ಜೇವಾಲ- ನರೇಂದ್ರ ಮೋದಿ
Follow us on

ದೆಹಲಿ: ಗಾಂಧಿ ಕುಟುಂಬ ನೆಹರು ಸರ್​​ನೇಮ್ (Surname) ಯಾಕೆ ಬಳಸುತ್ತಿಲ್ಲ? ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್(Congress), ಭಾರತದಲ್ಲಿ ಯಾರು ತಮ್ಮ ತಾಯಿಯ ಅಜ್ಜನ ಸರ್​​ನೇಮ್ ಬಳಸುತ್ತಾರೆ? ಮೋದಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಸಾಮಾನ್ಯ ತಿಳುವಳಿಕೆ ಇಲ್ಲ ಎಂದು ಹೇಳಿದೆ. ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ನೆಹರು ಸರ್​​ನೇಮ್ ಬಳಸುವುದಕ್ಕೆ ಗಾಂಧಿಗಳು ಏಕೆ ನಾಚಿಕೆಪಡುತ್ತಾರೆ ಎಂದು ಕೇಳಿದ್ದರು. ಇದಾಗಿ ಒಂದು ದಿನದ ನಂತರ ಪ್ರತಿಕ್ರಿಯಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ “ದೇವರು ಮಾತ್ರ ದೇಶವನ್ನು ಕಾಪಾಡಬಲ್ಲರು” ಎಂದಿದ್ದಾರೆ.

“ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರಿಗೆ ಭಾರತದ ಸಂಸ್ಕೃತಿ ಗೊತ್ತಿಲ್ಲ ಅಥವಾ ಅರ್ಥವಾಗುವುದಿಲ್ಲ. ಅವರು ಹೀಗೆ ಮಾತನಾಡುತ್ತಾರೆ. ನೀವು ದೇಶದ ಯಾವುದೇ ವ್ಯಕ್ತಿಯನ್ನು ಕೇಳಿ, ಯಾರು ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆ? ಎಂದು ಸುರ್ಜೇವಾಲಾ ಕೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುರ್ಜೇವಾಲಾ ಮಾತನಾಡಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ದಾವೂದಿ ಬೋಹ್ರಾ ಮುಸ್ಲಿಮರ ಶಿಕ್ಷಣ ಸಂಸ್ಥೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

“ಭಾರತದ ಸಂಸ್ಕೃತಿಯ ಬಗ್ಗೆ ಈ ಸಾಮಾನ್ಯ  ತಿಳುವಳಿಕೆಯೂ ಅವರಿಗೆ ಇಲ್ಲದಿದ್ದರೆ, ದೇವರು ಮಾತ್ರ ಈ ದೇಶವನ್ನು ಉಳಿಸಬಲ್ಲನು” ಎಂದಿದ್ದಾರೆ ಸುರ್ಜೆವಾಲಾ.


ಗುರುವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ರಾಷ್ಟ್ರ ನಿರ್ಮಾಣದಲ್ಲಿ ಜವಾಹರಲಾಲ್ ನೆಹರು ಅವರ ಪ್ರಯತ್ನಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಟೀಕಿಸಿದ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ನೆಹರು ಅವರ ಹೆಸರನ್ನು ನಾವು ಬಿಟ್ಟುಬಿಟ್ಟಿದ್ದರೆ, ಅವರು ದೇಶದ ಮೊದಲ ಪ್ರಧಾನಿಯಾಗಿರುವುದರಿಂದ ನಾವು ನಮ್ಮ ತಪ್ಪನ್ನು ಸರಿಪಡಿಸುತ್ತೇವೆ. ಆದರೆ ಅವರ ಕುಲದ ಯಾರಾದರೂ ನೆಹರೂ ಉಪನಾಮವನ್ನು ಇಡಲು ಏಕೆ ಹೆದರುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ? ನೆಹರು ಉಪನಾಮವನ್ನು ಹೊಂದಲು ನಾಚಿಕೆಯೇಕೆ? ಅಂಥಾ ನಾಚಿಕೆಗೇಡು ಏನಿದೆ? ಅಂತಹ ಮಹಾನ್ ವ್ಯಕ್ತಿತ್ವವನ್ನು ಸ್ವೀಕರಿಸಲು ಕುಟುಂಬ ಸಿದ್ಧವಿಲ್ಲದಿರುವಾಗ ನೀವು ನಮ್ಮನ್ನು ಏಕೆ ಪ್ರಶ್ನಿಸುತ್ತೀರಿ ಎಂದು ಮೋದಿ ಕೇಳಿದ್ದರು.

ಕಾಂಗ್ರೆಸ್ಸೇತರ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳನ್ನು ಉರುಳಿಸಲು ನೆಹರೂ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನದ 356 ನೇ ವಿಧಿಯನ್ನು ಪದೇ ಪದೇ ಬಳಸುತ್ತಿದ್ದಾರೆ ಎಂದು ಪ್ರಧಾನಿ ಟೀಕಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ