Bhole Baba: ಹಾಥರಸ್ ಕಾಲ್ತುಳಿತ: ಸತ್ಸಂಗ ನಡೆಸುತ್ತಿದ್ದ ಭೋಲೆ ಬಾಬಾ ಯಾರು?

|

Updated on: Jul 02, 2024 | 8:50 PM

ಉತ್ತರ ಪ್ರದೇಶ ಪೊಲೀಸ್‌ನ ಸ್ಥಳೀಯ ಗುಪ್ತಚರ ಘಟಕವನ್ನು ತೊರೆದ ನಂತರ, ಅಲಿಘರ್ ವಿಭಾಗದ ಕಾಸ್‌ಗಂಜ್ ಜಿಲ್ಲೆಯ ಹಳ್ಳಿಯೊಂದರಿಂದ ಬಂದ ಭೋಲೇ ಬಾಬಾ ಧರ್ಮೋಪದೇಶವನ್ನು ನೀಡಲು ಮತ್ತು 'ಸತ್ಸಂಗ'ವನ್ನು ಆಯೋಜಿಸಲು ಪ್ರಾರಂಭಿಸಿದರು. ‘ನಾರಾಯಣ್ ಸಕಾರ್ ಹರಿ’ ಎಂದು ಸಂಬೋಧಿಸಲು ಇಷ್ಟಪಡುವ ಬಾಬಾ ಅವರ ಜನಪ್ರಿಯತೆ ಕಾಲಾನಂತರದಲ್ಲಿ ಬೆಳೆಯಿತು. ಅವರ ಅನುಯಾಯಿಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು.

Bhole Baba: ಹಾಥರಸ್ ಕಾಲ್ತುಳಿತ: ಸತ್ಸಂಗ ನಡೆಸುತ್ತಿದ್ದ ಭೋಲೆ ಬಾಬಾ ಯಾರು?
ಭೋಲೇ ಬಾಬಾ
Follow us on

ಹಾಥರಸ್ ಜುಲೈ 02: ಉತ್ತರ ಪ್ರದೇಶದ (Uttar pradesh) ಹಾಥರಸ್​​​ನಲ್ಲಿ (Hathras stampede) ಮಂಗಳವಾರ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 107 ಮಂದಿ ಸಾವಿಗೀಡಾಗಿದ್ದಾರೆ. ಬೋಧಕ ಭೋಲೆ ಬಾಬಾ(Bhole Baba) ಅವರ ಸತ್ಸಂಗ ಮುಗಿಸಿ ಜನರು ಹೊರಡುವ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತದೆ. ಅಂದಹಾಗೆ ಇಷ್ಟೊಂದು ಜನರು ಜಮಾಯಿಸಲು ಕಾರಣವಾದ ಸತ್ಸಂಗ ನಡೆಸುತ್ತಿದ್ದ ಭೋಲೇ ಬಾಬಾ ಯಾರು? ಎಂದು ಹುಡುಕಾಡಿದಾಗ ಸಿಕ್ಕಿದ ಮಾಹಿತಿ ಏನೆಂದರೆ  ಭೋಲೇ ಬಾಬಾ ‘ಬಾಬಾ’ ಆಗುವ ಮುನ್ನ 18 ವರ್ಷಗಳ ಕಾಲ ರಾಜ್ಯ ಪೊಲೀಸರೊಂದಿಗೆ ಕೆಲಸ ಮಾಡಿದ್ದರು.

ಉತ್ತರ ಪ್ರದೇಶ ಪೊಲೀಸ್‌ನ ಸ್ಥಳೀಯ ಗುಪ್ತಚರ ಘಟಕವನ್ನು ತೊರೆದ ನಂತರ, ಅಲಿಘರ್ ವಿಭಾಗದ ಕಾಸ್‌ಗಂಜ್ ಜಿಲ್ಲೆಯ ಹಳ್ಳಿಯೊಂದರಿಂದ ಬಂದ ಬಾಬಾ ಧರ್ಮೋಪದೇಶವನ್ನು ನೀಡಲು ಮತ್ತು ‘ಸತ್ಸಂಗ’ವನ್ನು ಆಯೋಜಿಸಲು ಪ್ರಾರಂಭಿಸಿದರು. ‘ನಾರಾಯಣ್ ಸಕಾರ್ ಹರಿ’ ಎಂದು ಸಂಬೋಧಿಸಲು ಇಷ್ಟಪಡುವ ಬಾಬಾ ಅವರ ಜನಪ್ರಿಯತೆ ಕಾಲಾನಂತರದಲ್ಲಿ ಬೆಳೆಯಿತು. ಅವರ ಅನುಯಾಯಿಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು.

‘ಸಾಕಾರ್ ವಿಶ್ವ ಹರಿ ಬಾಬಾ’ ಎಂದು ಹೆಚ್ಚು ಜನಪ್ರಿಯರಾಗಿರುವ ಬಾಬಾ ಅವರು ಸಾರ್ವಜನಿಕವಾಗಿ ಬಿಳಿ ಬಟ್ಟೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಧರ್ಮೋಪದೇಶಗಳಲ್ಲಿ ಅವರ ಪತ್ನಿಯೂ ಇರುತ್ತಾರೆ,  ಅವರ ಅನುಯಾಯಿಗಳು ಹೆಚ್ಚಾಗಿ ಬ್ರಜ್ ಪ್ರದೇಶದ ಆಗ್ರಾ ಮತ್ತು ಅಲಿಘರ್ ವಿಭಾಗಕ್ಕೆ ಸೇರಿದ ಕೆಳಮಟ್ಟದ ಆರ್ಥಿಕ ಸ್ತರದ ಜನರಾಗಿದ್ದಾರೆ.

ಯಾವುದೇ ‘ಗುರು’ಗಳ ಅನುಯಾಯಿ ಅಲ್ಲ ಎಂದು ನಂಬಿರುವ ಬಾಬಾ ಅವರು ಸರ್ವಶಕ್ತನಿಂದ ನೇರವಾಗಿ ಬೋಧಿಸಲ್ಪಟ್ಟಿದ್ದಾರೆಂದು ಹೇಳಿಕೊಳ್ಳುತ್ತಾರೆ. ಅವರು ಫೇಸ್ ಬುಕ್ ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಎನ್ನಲಾಗಿದೆ. ಮಂಗಳವಾರದಂದು ಹೆಚ್ಚಾಗಿ ಆಯೋಜಿಸಲಾಗುವ ಅವರ ‘ಸತ್ಸಂಗ’ದಲ್ಲಿ ವಿವಿಧ ಸಂಸದರು ಮತ್ತು ಶಾಸಕರು ಭಾಗವಹಿಸಿದ್ದರು ಎಂದು ನಂಬಲಾಗಿದೆ.
ಅವರ ಜನಪ್ರಿಯತೆಯ ಹೊರತಾಗಿಯೂ, ಮಾಧ್ಯಮವನ್ನು ‘ಸತ್ಸಂಗ’ದಿಂದ ದೂರವಿಡಲಾಯಿತು. ಅವರಿಗೆ ಎಷ್ಟು ವಯಸ್ಸು ಎಂಬುದು ನಿಖರವಾಗಿ ಗೊತ್ತಿಲ್ಲ, ಆದರೆ ಐವತ್ತರ ಆಸುಪಾಸು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Hathras stampede: ಹಾಥರಸ್ ಕಾಲ್ತುಳಿತ:107 ಮಂದಿ ಸಾವು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಮೋದಿ ಭರವಸೆ

ಬಾಬಾ ಅವರ ಭಕ್ತರು, ಗುಲಾಬಿ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಮತ್ತು ಬಿಳಿ ಟೋಪಿಗಳನ್ನು ಧರಿಸಿ ಅವರ ಸಭೆಗಳಲ್ಲಿ ಟ್ರಾಫಿಕ್ ಮತ್ತು ಆಂತರಿಕ ವ್ಯವಸ್ಥೆಗಳನ್ನು ನಿರ್ವಹಿಸುವುದನ್ನು ಕಾಣಬಹುದು.

ಮಂಗಳವಾರ ಮಧ್ಯಾಹ್ನ ‘ಸತ್ಸಂಗ’ ಮುಗಿದ ನಂತರ ಅವರ ಮಹಿಳಾ ಭಕ್ತರು ಸ್ಥಳದಿಂದ ಹೊರಗೆ ಬಂದ ನಂತರ ಕಾಲ್ತುಳಿತವು ಪ್ರಾರಂಭವಾಯಿತು ಎಂದು ಆರಂಭಿಕ ವರದಿಗಳು ಸೂಚಿಸಿವೆ. ಬಿಸಿ ಮತ್ತು ಆರ್ದ್ರ ವಾತಾವರಣದಿಂದಾಗಿ ಆವರಣದಲ್ಲಿ ಕೆಲವರು ಉಸಿರುಗಟ್ಟಿದ ಅನುಭವವಾಯಿತು. ‘ಸತ್ಸಂಗ’ ಮುಗಿದಾಗ, ಆವರಣದೊಳಗಿದ್ದವರು ಹೊರಕ್ಕೆ ಧಾವಿಸಿದರು, ಇದರ ಪರಿಣಾಮವಾಗಿ ಕಾಲ್ತುಳಿತ ಸಂಭವಿಸಿ ಹೆಚ್ಚಿನ ಮಕ್ಕಳು ಮತ್ತು ಮಹಿಳೆಯರು ಸಾವಿಗೀಡಾದರು ಎನ್ನಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ