ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಂವಿಧಾನವನ್ನು ಎತ್ತಿಹಿಡಿದಿದೆ ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಪತನ ಈ ಸಂವಿಧಾನ ದಿನಕ್ಕೆ ಅತ್ಯುತ್ತಮ ಉಡುಗೊರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲ್ಲದೇ ಬಹುಮತವಿಲ್ಲದೇ ಸರ್ಕಾರ ರಚಿಸಿ ಬಿಜೆಪಿ ಮುಖಭಂಗ ಅನುಭವಿಸಿದೆ ಎಂದು ಬಿಜೆಪಿಯನ್ನ ಕುಟುಕಿದ್ದಾರೆ.
ಡಾಬಾದಲ್ಲಿ ಮರಾಮಾರಿ
ಮಧ್ಯಪ್ರದೇಶದ ಇಂದೋರ್‌ನಲ್ಲಿ ಡಾಬಾ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಮರಾಮಾರಿ ನಡೆದಿದೆ. ದೊಣ್ಣೆಗಳೊಂದಿಗೆ ಬಂದ ಗ್ರಾಹಕರು ಡಾಬಾ ಸಿಬ್ಬಂದಿ ಮತ್ತು ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ. ಮೊದಲೇ ಡಾಬಾ ಸಿಬ್ಬಂದಿ ಮತ್ತು ಗ್ರಾಹಕರು ನಡುವೆ ಕಿರಿಕ್ ಆಗಿದ್ದು, ನಂತ್ರ ಗ್ರಾಹಕರು ದೊಣ್ಣೆಯೊಂದಿಗೆ ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ವಾಯುಗಡಿ ಉಲ್ಲಂಘನೆ
ಅಮೆರಿಕದ ವೈಟ್ ಹೌಸ್ ಇರುವ ನಿರ್ಬಂಧಿತ ಪ್ರದೇಶದಲ್ಲಿ ವಾಯು ಗಡಿ ಉಲ್ಲಂಘಿಸಿದ ಘಟನೆ ನಡೆದಿದೆ. ಫೈಟರ್ ಜೆಟ್ವೊಂದು ವೈಟ್ಹೌಸ್ ಮೇಲೆ ಹಾರಿ ಹೋಗಿದ್ದು ಭಾರಿ ಅನುಮಾನ ಸೃಷ್ಟಿಸಿದೆ. ಇದೀಗ ಅಮೆರಿಕದ ವೈಟ್ಹೌಸ್ನ್ನು ಒಂದು ದಿನದ ಮಟ್ಟಿಗೆ ಕ್ಲೋಸ್ ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಶ್ವಾನಕ್ಕೆ ಶ್ವೇತಭವನದ ಗೌರವ
ಐಸಿಸ್ ಸಂಸ್ಥಾಪಕ ಅಬುಬಕರ್ ಅಲ್ ಬಾಗ್ದಾದಿ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಗಾಯಗೊಂಡಿದ್ದ ‘ಕೊನಾನ್’ ಎಂಬ ಶ್ವಾನವನ್ನ ವೈಟ್ಹೌಸ್ಗೆ ಕರೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಕ ನೀಡಿ ಗೌರವಿಸಿದ್ರು. ಬಳಿಕ ಮಾತನಾಡಿದ ಟ್ರಂಪ್, ಕೊನಾನ್ ಶ್ವಾನವನ್ನ ಕೊಂಡಾಡಿದ್ರು.
ನಿನ್ನೆ ಗೂಳಿ ಓಟ ಜೋರು
ನಿನ್ನೆ ಷೇರು ಮಾರುಕಟ್ಟೆಯಲ್ಲಿ ಸರ್ವಕಾಲಿಕ ಗಿರಿಷ್ಟ ಮಟ್ಟದ ವಹಿವಾಟು ದಾಖಲಾಗಿದೆ. ಮುಂಬೈ ಷೇರುಪೇಟೆ ಬಿಎಸ್‌ಇ ಸೆನ್ಸಕ್ಸ್ 41.000 ಗಡಿ ದಾಟಿದೆ. ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸಕ್ಸ್ 218.80 ಅಂಶಗಳ ಏರಿಕೆ ಮೂಲಕ 41.000 ಸಾವಿರಕ್ಕೆ ಜಿಗಿಯಿತು.