ಕಾಂಗ್ರೆಸ್ ಪಕ್ಷ ಸೇರಲು ಪ್ರಶಾಂತ್ ಕಿಶೋರ್​ ಪ್ಲ್ಯಾನ್​?-ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಹೊರಬಿತ್ತು ಅಚ್ಚರಿಯ ವಿಚಾರ

| Updated By: Lakshmi Hegde

Updated on: Jul 29, 2021 | 4:49 PM

ಇತ್ತೀಚೆಗಷ್ಟೇ ಪ್ರಶಾಂತ್​ ಕಿಶೋರ್ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಭೇಟಿ ಮಹತ್ವ ಪಡೆದುಕೊಂಡಿತ್ತು.

ಕಾಂಗ್ರೆಸ್ ಪಕ್ಷ ಸೇರಲು ಪ್ರಶಾಂತ್ ಕಿಶೋರ್​ ಪ್ಲ್ಯಾನ್​?-ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಹೊರಬಿತ್ತು ಅಚ್ಚರಿಯ ವಿಚಾರ
ಪ್ರಶಾಂತ್​ ಕಿಶೋರ್​
Follow us on

ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್​ ಕಿಶೋರ್ (Prashant Kishor)​ ಅವರು ಕಾಂಗ್ರೆಸ್ ಸೇರಲಿದ್ದಾರೆ..ಹೀಗೊಂದು ಸುದ್ದಿ ಈಗ ಭರ್ಜರಿ ಹರಿದಾಡುತ್ತಿದೆ. ಇನ್ನು ಮೂಲಗಳು ಹೇಳುವ ಪ್ರಕಾರ ಪ್ರಶಾಂತ್​ ಕಿಶೋರ್​ ಅವರು ಕಾಂಗ್ರೆಸ್(Congress)​ನ ಸಿದ್ಧಾಂತದ ಯೋಜನೆಗಳಿಗೆ ಹೊಂದಿಕೊಳ್ಳುತ್ತಾರಾ ಎಂಬ ಬಗ್ಗೆ ಚರ್ಚಿಸಲು ವಾರದ ಹಿಂದೆ ರಾಹುಲ್​ ಗಾಂಧಿ (Rahul Gandhi) ಕಾಂಗ್ರೆಸ್​ ನಾಯಕರ ಸಭೆ ಕರೆದಿದ್ದರು. ಜುಲೈ 22ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರಾದ ಕಮಲನಾಥ್​, ಮಲ್ಲಿಕಾರ್ಜುನ ಖರ್ಗೆ, ಎ.ಕೆ.ಅಂಥೋನಿ, ಅಜಯ್ ಮೇಕನ್​, ಆನಂದ್​ ಶರ್ಮಾ, ಹರೀಶ್​ ರಾವತ್, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್​ ಇತರರು ಪಾಲ್ಗೊಂಡಿದ್ದರು. ಅದರಲ್ಲಿ ರಾಹುಲ್​ ಗಾಂಧಿ ತಮ್ಮ ಮತ್ತು ಪ್ರಶಾಂತ್ ಕಿಶೋರ್ ಭೇಟಿಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಪ್ರಶಾಂತ್​ ಕಿಶೋರ್​ ಕಾಂಗ್ರೆಸ್​ ಬರುವ ಯೋಜನೆ ಹಾಕಿದ್ದಾರೆ ಎಂಬುದನ್ನೂ ಚರ್ಚಿಸಿದ್ದಾರೆ ಎನ್ನಲಾಗಿದೆ.

ಪ್ರಶಾಂತ್​ ಕಿಶೋರ್​ ಪಕ್ಷದಿಂದ ಹೊರಗೆ ಇದ್ದು, ಕಾಂಗ್ರೆಸ್​ಗೆ ಸಲಹೆ ನೀಡುವ ಬದಲು, ಕಾಂಗ್ರೆಸ್​ಗೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಸಭೆಯಲ್ಲಿ ರಾಹುಲ್ ಗಾಂಧಿ ತಿಳಿಸಿದರು. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು. ಪ್ರಶಾಂತ್ ಕಿಶೋರ್​ ಕಾಂಗ್ರೆಸ್​ ಸೇರುವುದರಿಂದ ಉಂಟಾಗುವ ಸಾಧಕ-ಬಾಧಕಗಳ ಕುರಿತು ಸಮಗ್ರವಾಗಿ ಸಭೆಯಲ್ಲಿ ಮಾತನಾಡಲಾಗಿದೆ ಎಂದು ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಇತ್ತೀಚೆಗಷ್ಟೇ ಪ್ರಶಾಂತ್​ ಕಿಶೋರ್ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಭೇಟಿ ಮಹತ್ವ ಪಡೆದುಕೊಂಡಿತ್ತು. ಲೋಕಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್​ನ್ನು ಪುನರುಜ್ಜೀವನಗೊಳಿಸಲು ಕಾರ್ಯತಂತ್ರ ಹೆಣೆಯುವ ಸಲುವಾಗಿ ಈ ಭೇಟಿ ನಡೆದಿತ್ತು ಎಂದೇ ಹೇಳಲಾಗಿತ್ತು. ಆದರೆ ಪ್ರಶಾಂತ್ ಕಿಶೋರ್ ಒಂದು ಹೆಜ್ಜೆ ಮುಂದೆ ಹೋಗಿ, ಕಾಂಗ್ರೆಸ್​ಗೇ ಸೇರುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸ್ವತಂತ್ರ, ಪ್ರಜಾಪ್ರಭುತ್ವ ಮತ್ತು ಸ್ಥಿರ ಆಡಳಿತದಿಂದ ಕೂಡಿದ ಅಫ್ಘಾನಿಸ್ತಾನವನ್ನು ನೋಡಲು ಜಗತ್ತು ಬಯಸುತ್ತಿದೆ: ಜೈಶಂಕರ್

Will Prashant Kishor Join to Congress says Source