ಸಿಬ್ಬಂದಿಯನ್ನು ಕಚ್ಚಿ, ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಮಹಿಳೆಯನ್ನು ಅಧಿಕಾರಿಗಳು ವಿಮಾನದಿಂದ ಕೆಳಗಿಳಿಸಿರುವ ಘಟನೆ ಪುಣೆಯ ಲೋಹ್ಗಾಂವ್ ಏರ್ಪೋರ್ಟ್ನಲ್ಲಿ ನಡೆದಿದೆ. ಆಕೆ ಇಬ್ಬರು ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದರು, ಜತೆಗೆ ಭದ್ರತಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿ, ಕೈ ಕಚ್ಚಿದ್ದರು.
ಇಂಡಿಗೋ ಏರ್ಲೈನ್ನ ಪುಣೆ-ದೆಹಲಿ ವಿಮಾನ (6E 5261) ಗೆ ಬೋರ್ಡಿಂಗ್ ನಡೆಯುತ್ತಿದ್ದಾಗ ಆಗಸ್ಟ್ 17 ರ ಶನಿವಾರ ಬೆಳಿಗ್ಗೆ 7.45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆರಂಭದಲ್ಲಿ, ಮಹಿಳೆ ತಮಗೆ ನಿಗದಿಪಡಿಸಿದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಸಿಬ್ಬಂದಿ ಮಧ್ಯೆ ಪ್ರವೇಶಿಸಿದ್ದರು.
ಒಬ್ಬರು ಸಿಐಎಸ್ಎಫ್ ಕಾನ್ಸ್ಟೆಬಲ್ಗಳಾದ ಪ್ರಿಯಾಂಕಾ ರೆಡ್ಡಿ ಮತ್ತು ಸೋನಿಕಾ ಪಾಲ್ ಅವರನ್ನು ಸಹ ಪರಿಸ್ಥಿತಿಯನ್ನು ನಿಯಂತ್ರಿಸಲು ಕರೆಸಲಾಯಿತು.
ವಾಗ್ವಾದದ ವೇಳೆ ಮಹಿಳೆ ಕಾನ್ಸ್ಟೆಬಲ್ ರೆಡ್ಡಿಗೆ ಕಪಾಳಮೋಕ್ಷ ಮಾಡಿ ಕೈ ಕಚ್ಚಿದ್ದಾಳೆ. ಆದರೆ, ಸಿಐಎಸ್ಎಫ್ ಸಿಬ್ಬಂದಿ ಮಹಿಳೆಯನ್ನು ಯಶಸ್ವಿಯಾಗಿ ನಿಯಂತ್ರಿಸಿ, ಆಕೆ ಮತ್ತು ಆಕೆಯ ಜತೆಗಿದ್ದ ಪತಿಯನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ. ನಂತರ ದಂಪತಿಯನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಲಾಯಿತು.
ಮತ್ತಷ್ಟು ಓದಿ: ಆಗಸದಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ
ಈ ಹಿಂದೆ ಇದೇ ರೀತಿಯ ಘಟನೆಯಲ್ಲಿ, ಸಿಬ್ಬಂದಿ ಮತ್ತು ಇತರ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಮಹಿಳೆಯನ್ನು ಲಕ್ನೋದಿಂದ ಮುಂಬೈಗೆ ಹೊರಟಿದ್ದ ಆಕಾಶ ಏರ್ ವಿಮಾನದಿಂದ ಕೆಳಗಿಳಿಸಲಾಗಿತ್ತು.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 504 ರ ಅಡಿಯಲ್ಲಿ (ಉದ್ದೇಶಪೂರ್ವಕವಾಗಿ ಅವಮಾನಿಸುವುದು ಅಥವಾ ಶಾಂತಿ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗವನ್ನು ಉಂಟುಮಾಡಲು ಪ್ರಚೋದಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ