ರಾಜಸ್ಥಾನದಲ್ಲಿ ಕೋತಿಯ ದಾಳಿಯಿಂದ ಟೆರೇಸಿನಲ್ಲಿ ಬಟ್ಟೆ ಒಣಗಿಸುತ್ತಿದ್ದ ಮಹಿಳೆ ಸಾವು

ರಾಜಸ್ಥಾನದ ಕೋಟದಲ್ಲಿ ನಡೆದ ಕೋತಿಯ ದಾಳಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಬಟ್ಟೆ ಒಣಗಿಸಲು ಮನೆಯ ಟೆರೇಸಿಗೆ ಹೋಗಿದ್ದಾಗ ಒಂದು ಕೋತಿ ಆಕೆಯ ಮೇಲೆ ಹಾರಿ ಆಕೆಯ ಭುಜದ ಮೇಲೆ ಕುಳಿತಿತು. ನಂತರ ಅದು ಆಕೆಯ ಬೆನ್ನು ಮತ್ತು ಮುಖದ ಮೇಲೆ ದಾಳಿ ಮಾಡಿದೆ. ಆಕೆಯ ಕಿರುಚಾಟ ಕೇಳಿ, ಕುಟುಂಬ ಸದಸ್ಯರು ಟೆರೇಸಿಗೆ ಹೋದಾಗ ಆಕೆ ಪ್ರಜ್ಞಾಹೀನಳಾಗಿರುವುದನ್ನು ಕಂಡರು. ಕೋತಿಗಳನ್ನು ಓಡಿಸಿದ ನಂತರ, ಕುಟುಂಬವು ಪ್ರದೀಪ್ ಭಟ್ ಅವರ ಪತ್ನಿ 28 ವರ್ಷದ ರೇಣು ಭಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ರಾಜಸ್ಥಾನದಲ್ಲಿ ಕೋತಿಯ ದಾಳಿಯಿಂದ ಟೆರೇಸಿನಲ್ಲಿ ಬಟ್ಟೆ ಒಣಗಿಸುತ್ತಿದ್ದ ಮಹಿಳೆ ಸಾವು
ರೇಣು ಭಟ್

Updated on: Nov 17, 2026 | 4:49 PM

ಕೋಟಾ, ನವೆಂಬರ್ 17: ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ತಮ್ಮ ಮನೆಯ ಟೆರೇಸ್ ಮೇಲೆ ಕೋತಿ ದಾಳಿ ನಡೆಸಿದ ಪರಿಣಾಮವಾಗಿ ತೀವ್ರ ಆಘಾತದಿಂದ ಹೃದಯಸ್ತಂಭನಕ್ಕೆ ಒಳಗಾಗಿ 28 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕನ್ಸುವಾ ಪ್ರದೇಶದ ನಿವಾಸಿ ರೇಣು ಭಟ್ ಎಂದು ಗುರುತಿಸಲಾಗಿದೆ. ಅವರು ಬಟ್ಟೆ ಒಣಗಿಸಲು ಮನೆಯ ಟೆರೇಸ್‌ಗೆ ಹೋಗಿದ್ದ ವೇಳೆ ಮಂಗ ಏಕಾಏಕಿ ದಾಳಿ ನಡೆಸಿದೆ.

ಈ ಘಟನೆ ಭಾನುವಾರ ಮಧ್ಯಾಹ್ನ ಉದ್ಯೋಗ್ ನಗರ ಪೊಲೀಸ್ ಠಾಣೆ ಪ್ರದೇಶದ ಜಗಾನ್ ನೆರೆಹೊರೆಯಲ್ಲಿ ಸಂಭವಿಸಿದೆ. ಕನ್ಸುವಾ ಪ್ರದೇಶದ ಜಗಾನ್ ನೆರೆಹೊರೆಯ ನಿವಾಸಿ ರೇಣು ಭಟ್, ಬಟ್ಟೆಗಳನ್ನು ಒಣಗಿಸಲು ಟೆರೇಸ್ ಮೇಲೆ ಹೋಗಿದ್ದರು. ಆಗ ಇದ್ದಕ್ಕಿದ್ದಂತೆ, ಮಂಗಗಳ ಗುಂಪು ಬಂದಿತು. ಅದರಲ್ಲಿ ಒಂದು ಕೋತಿ ತನ್ನ ಉಗುರುಗಳಿಂದ ಆಕೆಯ ಮುಖ ಮತ್ತು ಬೆನ್ನಿಗೆ ಹೊಡೆದಿತ್ತು. ಆಗ ಆ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕೋಲನ್ನು ಎತ್ತಿಕೊಂಡಳು. ಆದರೆ, ಕೋತಿ ಆಕೆಯ ಹೆಗಲ ಮೇಲೆ ಹತ್ತಿ ಮುಖ ಮತ್ತು ಬೆನ್ನನ್ನು ಪರಚಿತು. ಈ ಹಠಾತ್ ದಾಳಿಯಿಂದ ಆ ಮಹಿಳೆ ಭಯಭೀತಳಾಗಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಳು. “ರೇಣುವಿನ ಕಿರುಚಾಟ ಕೇಳಿ ನಾವು ಟೆರೇಸ್ ತಲುಪಿದೆವು. ರೇಣು ನೆಲದ ಮೇಲೆ ಬಿದ್ದಿದ್ದಳು. ಆಕೆಯ ಮುಖ ಮತ್ತು ಬೆನ್ನಿನ ಮೇಲೆ ಕೋತಿಯ ಉಗುರುಗಳ ಗುರುತುಗಳಿದ್ದವು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು” ಎಂದು ಕುಟುಂಬಸ್ಥರು ಹೇಳಿದ್ದಾರೆ.

Loading...

ಇದನ್ನೂ ಓದಿ: Video: ಸಲೂನ್ ಶಾಪ್‌ಗೆ ತೆರಳಿ ಮಸಾಜ್ ಮಾಡಿಸಿಕೊಂಡ ಕೋತಿ, ವೈರಲ್‌ ಆಯ್ತು ದೃಶ್ಯ

2018ರಲ್ಲಿ ಪ್ರದೀಪ್ ಭಟ್ ಅವರನ್ನು ವಿವಾಹವಾಗಿದ್ದ ರೇಣು ಅವರಿಗೆ ಒಬ್ಬಳು ಪುಟ್ಟ ಮಗಳಿದ್ದಾಳೆ. ಆ ಪ್ರದೇಶದಲ್ಲಿ ಮಂಗಗಳ ಹಾವಳಿ ತೀವ್ರವಾಗಿದ್ದು, ಪದೇ ಪದೇ ದೂರು ನೀಡಿದರೂ ಸರ್ಕಾರ ಅದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಕುಟುಂಬದ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸ್ಥಳೀಯ ಕೌನ್ಸಿಲರ್ ಸಪ್ನಾ ಬರ್ಟ್ ಅವರು ಈ ಸಾವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಮಂಗಗಳನ್ನು ಸೆರೆಹಿಡಿಯಲು ತಕ್ಷಣವೇ ಕಾರ್ಯಾಚರಣೆ ಆರಂಭಿಸುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us