ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ(Sukhdev Singh Gogamedi) ಅವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸಲಾದ ಇಬ್ಬರು ಶೂಟರ್‌ಗಳು ಸೇರಿದಂತೆ ಮೂವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಮ್ಯಾಜಿಸ್ಟ್ರೇಟ್ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಪೊಲೀಸರು ಶನಿವಾರ ರಾತ್ರಿ ಚಂಡೀಗಢದಲ್ಲಿ ಸೆಕ್ಟರ್ 22 ರಿಂದ ಶೂಟರ್‌ಗಳಾದ ನಿತಿನ್ ಫೌಜಿ ಮತ್ತು ರೋಹಿತ್ ರಾಥೋಡ್ ಅವರ ಸಹಚರ ಉಧಮ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಜೈಪುರದ ಜಗತ್‌ಪುರ ಪ್ರದೇಶದಲ್ಲಿ ದಂಪತಿಯ ಬಾಡಿಗೆ ಫ್ಲಾಟ್‌ನಲ್ಲಿ ಡಿಸೆಂಬರ್ 5 ರಂದು ಹತ್ಯೆ ಮಾಡುವ ಮೊದಲು ಸುಮಾರು ಒಂದು ವಾರದವರೆಗೆ ಫೌಜಿಗೆ ಪೂಜಾ ಸೈನಿ ಮತ್ತು ಆಕೆಯ ಪತಿ ಮಹೇಂದ್ರ ಮೇಘವಾಲ್ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ ಎಂದು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಹೇಳಿದ್ದಾರೆ.
ಮೇಘವಾಲ್ ಅಲಿಯಾಸ್ ಸಮೀರ್ ಕೋಟಾ ಮೂಲದವನಾಗಿದ್ದು, ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಫೌಜಿ ನವೆಂಬರ್ 28 ರಂದು ಟ್ಯಾಕ್ಸಿಯಲ್ಲಿ ಜೈಪುರಕ್ಕೆ ಬಂದಿದ್ದರು ಮತ್ತು ಮೇಘವಾಲ್ ಅವರನ್ನು ಭೇಟಿಯಾದರು ಮತ್ತು ಅವರನ್ನು ಜಗತ್ಪುರದ ಫ್ಲಾಟ್‌ಗೆ ಕರೆದೊಯ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕೈಲಾಶ್ ಚಂದ್ರ ಬಿಷ್ಣೋಯ್ ಹೇಳಿದರು.
ಮತ್ತಷ್ಟು ಓದಿ: ಜೈಪುರದಲ್ಲಿ ಹಾಡಹಗಲೇ ಗುಂಡಿಕ್ಕಿ ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಹತ್ಯೆ
ಮೇಘವಾಲ್ ಮೂಲಕವೇ ಫೌಜಿ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ಜೊತೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೇಘವಾಲ್ ಅರ್ಧ ಡಜನ್‌ಗಿಂತಲೂ ಹೆಚ್ಚು ಪಿಸ್ತೂಲ್‌ಗಳು ಮತ್ತು ಕಾರ್ಟ್ರಿಡ್ಜ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದರು.
ಮೇಘವಾಲ್ ಅವರ ಫ್ಲಾಟ್‌ನಿಂದ ಎಕೆ-47 ರೈಫಲ್‌ನ ಫೋಟೋವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಬಿಷ್ಣೋಯ್ ಹೇಳಿದ್ದಾರೆ.
ಈ ಫ್ಲಾಟ್‌ನಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ