ಮಾಯಾಂಗನೆಯ ಮೆಸೇಜ್​ಗೆ ಮಾರು ಹೋದವನು ಕಳಕೊಂಡ ಹಣವೆಷ್ಟು ಗೊತ್ತಾ?

ಮಹಾ ವಂಚಕಿಯೊಬ್ಬಳು 60 ವರ್ಷದ ವ್ಯಕ್ತಿಯನ್ನು ಯಾಮಾರಿಸಿದ್ದಾಳೆ. ಅದೂ ತಾಮು ಅಮೆರಿಕ ಸೈನ್ಯದ ಭಯೋತ್ಪಾದನಾ ವಿರೋಧಿ ವಿಭಾಗದ ಅಧಿಕಾರಿಯೆಂದು ನಂಬಿಸಿ. ಈ ಬಾಬತ್ತಿನಲ್ಲಿ ಬರೋಬ್ಬರಿ 1.24 ಕೋಟಿ ರೂಗಳನ್ನು ಮಹಿಳೆ ವಂಚಿಸಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ! ಚಕ್ಕರ್‌ಪುರ ಗ್ರಾಮದ ಮಾರುತಿ ವಿಹಾರ್​ನ ನಿವಾಸಿಯಾಗಿರುವ ಧೀರೇಂದ್ರ ಕುಮಾರ್ ಮೋಸ ಹೋಗಿರುವ ವ್ಯಕ್ತಿ. ತಾನು US Army ಭಯೋತ್ಪಾದನಾ ನಿಗ್ರಹ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆ ಧಿರೇಂದ್ರ ಕುಮಾರ್​ನನ್ನು ಪರಿಚಯ ಮಾಡಿಕೊಂಡಿದ್ದಾಳೆ. ಭಾರತದಲ್ಲಿ ಔಷಧ ಕಂಪನಿಯನ್ನು ತೆರೆಯಲು ಬಯಸಿರುವುದಾಗಿ […]

ಮಾಯಾಂಗನೆಯ ಮೆಸೇಜ್​ಗೆ ಮಾರು ಹೋದವನು ಕಳಕೊಂಡ ಹಣವೆಷ್ಟು ಗೊತ್ತಾ?
ಶೇ 16,000ದಷ್ಟು ಏರಿಕೆ
ಸಾಧು ಶ್ರೀನಾಥ್​

Updated on: Sep 16, 2020 | 5:13 PM

ಮಹಾ ವಂಚಕಿಯೊಬ್ಬಳು 60 ವರ್ಷದ ವ್ಯಕ್ತಿಯನ್ನು ಯಾಮಾರಿಸಿದ್ದಾಳೆ. ಅದೂ ತಾಮು ಅಮೆರಿಕ ಸೈನ್ಯದ ಭಯೋತ್ಪಾದನಾ ವಿರೋಧಿ ವಿಭಾಗದ ಅಧಿಕಾರಿಯೆಂದು ನಂಬಿಸಿ. ಈ ಬಾಬತ್ತಿನಲ್ಲಿ ಬರೋಬ್ಬರಿ 1.24 ಕೋಟಿ ರೂಗಳನ್ನು ಮಹಿಳೆ ವಂಚಿಸಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ!

ಚಕ್ಕರ್‌ಪುರ ಗ್ರಾಮದ ಮಾರುತಿ ವಿಹಾರ್​ನ ನಿವಾಸಿಯಾಗಿರುವ ಧೀರೇಂದ್ರ ಕುಮಾರ್ ಮೋಸ ಹೋಗಿರುವ ವ್ಯಕ್ತಿ. ತಾನು US Army ಭಯೋತ್ಪಾದನಾ ನಿಗ್ರಹ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆ ಧಿರೇಂದ್ರ ಕುಮಾರ್​ನನ್ನು ಪರಿಚಯ ಮಾಡಿಕೊಂಡಿದ್ದಾಳೆ.

ಭಾರತದಲ್ಲಿ ಔಷಧ ಕಂಪನಿಯನ್ನು ತೆರೆಯಲು ಬಯಸಿರುವುದಾಗಿ ಮಹಿಳೆ ಧೀರೇಂದ್ರ ಕುಮಾರ್ ಬಳಿ ಹೇಳಿದ್ದಾಳೆ. ಜೊತೆಗೆ ಕಂಪನಿ ತೆರೆಯಲು ಸುಮಾರು 7.8 ಮಿಲಿಯನ್ ಡಾಲರ್​ಗಳನ್ನು ನನಗೆ ಕಳುಹಿಸುವುದಾಗಿ ಹೇಳಿದ್ದಳು ಎಂದು ಧಿರೇಂದ್ರ ಕುಮಾರ್ ತಿಳಿಸಿದ್ದಾರೆ.

ನಂತರ, ಜೂನ್ 19 ರಿಂದ ಜುಲೈ 17 ರವರೆಗೆ ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಧಿರೇಂದ್ರ ಕುಮಾರ್​ಗೆ ಕರೆ ಮಾಡಿ ನಾನು ಅಮೆರಿಕದಿಂದ ಪಾರ್ಸಲ್ ಬಾಕ್ಸ್​ ಒಂದನ್ನು ಪಡೆದುಕೊಂಡಿದ್ದೇನೆ ಮತ್ತು ಅದನ್ನು ಪಡೆಯಲು ನೀವು ಹಣವನ್ನು ಠೇವಣಿ ಇಡಬೇಕು ಎಂದು ಹೇಳಿದ್ದಾನೆ.

ತಾನು ಮೋಸ ಹೋಗುತ್ತಿರುವುದನ್ನು ಅರಿಯದ ಧಿರೇಂದ್ರ ಕುಮಾರ್ ನಂತರ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಅಷ್ಟೂ ಹಣವನ್ನು ಜಮಾ ಮಾಡಿದ್ದಾರೆ. ಹಣ ತಲುಪಿದ ನಂತರ ಸಂಬಂಧಪಟ್ಟವರಿಂದ ಯಾವುದೆ ಕರೆ ಬಾರದಿದ್ದಾಗ ಧೀರೇಂದ್ರ ಕುಮಾರ್​ಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Published On - 4:57 pm, Wed, 16 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us