ಸೆಪ್ಟಿಕ್ ಟ್ಯಾಂಕ್ ಒಳಗೆ ಕಬ್ಬಿಣದ ಟ್ರಂಕ್​ನಲ್ಲಿ ಮಹಿಳೆಯ ಶವ ಪತ್ತೆ

ಸೆಪ್ಟಿಕ್ ಟ್ಯಾಂಕ್​​ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಭೋಪಾಲ್​​ನಲ್ಲಿ ನಡೆದಿದೆ. ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಎಸೆಯಲಾಗಿದ್ದ ಕಬ್ಬಿಣದ ಟ್ರಂಕ್‌ನೊಳಗೆ ಶವವನ್ನು ಮರೆಮಾಡಲಾಗಿತ್ತು. ಈ ಪ್ರದೇಶವು ನಿರ್ಜನವಾಗಿದ್ದು, ಅಪರಾಧ(Crime)ವನ್ನು ಮರೆಮಾಡಲು ಈ ಸ್ಥಳವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಸೆಪ್ಟಿಕ್ ಟ್ಯಾಂಕ್ ಒಳಗೆ ಕಬ್ಬಿಣದ ಟ್ರಂಕ್​ನಲ್ಲಿ ಮಹಿಳೆಯ ಶವ ಪತ್ತೆ
ಟ್ಯಾಂಕ್
Image Credit source: India Today

Updated on: Feb 13, 2026 | 11:02 AM

ಭೋಪಾಲ್, ಫೆಬ್ರವರಿ 13: ಸೆಪ್ಟಿಕ್ ಟ್ಯಾಂಕ್ ಒಳಗೆ ಕಬ್ಬಿಣದ ಟ್ರಂಕ್​​ನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ. ಭೋಪಾಲ್​​ನ ಕಮಲ್​ ನಗರದಲ್ಲಿ ಈ ಘಟನೆ ನಡೆದಿದೆ. ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಎಸೆಯಲಾಗಿದ್ದ ಕಬ್ಬಿಣದ ಟ್ರಂಕ್‌ನೊಳಗೆ ಶವವನ್ನು ಮರೆಮಾಡಲಾಗಿತ್ತು. ಈ ಪ್ರದೇಶವು ನಿರ್ಜನವಾಗಿದ್ದು, ಅಪರಾಧ(Crime)ವನ್ನು ಮರೆಮಾಡಲು ಈ ಸ್ಥಳವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಶವವು ಸುಮಾರು ಮೂರರಿಂದ ನಾಲ್ಕು ದಿನಗಳಷ್ಟು ಹಳೆಯದಾಗಿರಬಹುದು. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಆಕೆಯ ಕೈಗಳ ಮೇಲಿನ ಹಚ್ಚೆಗಳ ಮೂಲಕ ಆಕೆಯನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ.

ಮಹಿಳೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಸೆಪ್ಟಿಕ್ ಟ್ಯಾಂಕ್‌ಗೆ ಎಸೆಯುವ ಮೊದಲು ಟ್ರಂಕ್‌ನಲ್ಲಿ ತುಂಬಿಸಲಾಗಿದೆ. ಸ್ಥಳದಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ವಿಧಿವಿಜ್ಞಾನ ತಂಡಗಳು ಸ್ಥಳವನ್ನು ಪರಿಶೀಲಿಸಿದವು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಬಲಿಪಶುವಿನ ಗುರುತು ಮತ್ತು ಶಂಕಿತ ಅಪರಾಧಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.

ಮತ್ತಷ್ಟು ಓದಿ: ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ

ಮತ್ತೊಂದು ಘಟನೆ
ಸೆಪ್ಟಿಕ್ ಟ್ಯಾಂಕ್​​ನಲ್ಲಿ ತಲೆಬುರುಡೆ ಪತ್ತೆ
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಘಟನೆ ಇದು. ಆಗಸ್ಟ್​ 20ರಂದು ಪ್ರಿನ್ಸ್​ ಎಂಬುವವರು ಏಕಾಏಕಿ ನಾಪತ್ತೆಯಾಗಿದ್ದರು. ಅವರು ಕಾಣೆಯಾಗಿದ್ದಾರೆಂದು ಪತ್ನಿ ತುಳಸಿ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಕಾರಣ ಸದ್ದಿಲ್ಲದೆ ಪ್ರಕರಣದ ವಿಚಾರಣೆ ಅಂತ್ಯ ಕಂಡಿತ್ತು. ಆದರೆ ಕುಟುಂಬದವರಿಗೆ ಮಾತ್ರ ಅನುಮಾನ ಹಾಗೇ ಮುಂದುವರೆದಿತ್ತು.

ಸೆಪ್ಟಿಕ್ ಟ್ಯಾಂಕ್​​ನಲ್ಲಿ ಸಿಕ್ಕ ತಲೆ ಬುರುಡೆ, ಮೂಳೆಗಳು ಬೇರೆಯದೇ ಕಥೆಯನ್ನು ಹೇಳಿವೆ. ಪ್ರೇಮ, ಮದುವೆ, ದ್ರೋಹದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿವೆ. ಮಧ್ಯಪ್ರದೇಶದ ದಿಯೋರಿ ನಗರದಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ಆರು ತಿಂಗಳ ನಂತರ ಸತ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಶೋಯೆಬ್​​ನನ್ನು ನರಸಿಂಗ್​ಪುರದಲ್ಲಿ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ತುಳಸಲಿ ಹಾಗೂ ಶೋಯೆಬ್​ಗೆ ಮದುವೆಗೂ ಮುಂಚೆಯೇ ಸಂಬಂಧವಿತ್ತು ಎಂಬುದು ತಿಳಿದುಬಂದಿದೆ. ಪ್ರಿನ್ಸ್​ಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮದುವೆಯ ನಂತರವೂ ಅಕ್ರಮ ಸಂಬಂಧ ಮುಂದುವರೆದಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us