ದೆಹಲಿ: ಇಂದು 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ. ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಶುಭಾಶಯಗಳನ್ನು ತಿಳಿಸಿದ್ದಾರೆ. ಯೋಗ ದಿನಾಚರಣೆ ಒಗ್ಗೂಡಿಸುವ ದಿನವಾಗಿದೆ. ‘ಯೋಗ @ ಹೋಮ್, ಯೋಗ ವಿಥ್ ಫ್ಯಾಮಿಲಿ’ ಅಂದ್ರೆ ‘ಮನೆಯಲ್ಲಿ ಯೋಗ, ಕುಟುಂಬಸ್ಥರೊಂದಿಗೆ ಯೋಗ’ ಎಂದು ಸಂದೇಶ ನೀಡಿದ್ದಾರೆ.
ಕುಟುಂಬದ ಜತೆ ಯೋಗ ಈ ವರ್ಷದ ಥೀಮ್ ಆಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗದಲ್ಲಿ ಆಸನಗಳಿವೆ. ಪ್ರಾಣಾಯಾಮ ಒಂದು ರೀತಿಯ ಉಸಿರಾಡುವ ಆಸನ. ಪ್ರಾಣಾಯಾಮದಲ್ಲಿ ಅನೇಕ ಪ್ರಕಾರಗಳಿವೆ. ಯೋಗ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಯೋಗದಿಂದ ಮಾನಸಿಕ ಶಾಂತಿ ಸಿಗುತ್ತದೆ. ಯೋಗ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ರೋಗನಿರೋಧಕ ಶಕ್ತಿ ಹೆಚ್ಚಿದರೆ ಕೊವಿಡ್ ನಿಯಂತ್ರಣವಾಗುತ್ತೆ. ಯೋಗ ನಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಯೋಗ ಕೇವಲ ದೈಹಿಕ ಶಕ್ತಿಯನ್ನು ಮಾತ್ರ ಹೆಚ್ಚಿಸಲ್ಲ ಜೊತೆಗೆ ಮಾನಸಿಕ ಸಮತೋಲನ ಕಾಪಾಡುತ್ತದೆ ಎಂದಿದ್ದಾರೆ.
ಇಡೀ ವಿಶ್ವಕ್ಕೆ ಯೋಗದ ಮಹತ್ವ ಏನೆಂದು ಅರ್ಥವಾಗಿದೆ. ಭಗವದ್ಗೀತೆಯಲ್ಲಿ ಕೃಷ್ಣ ನೀಡಿದ ಕರ್ಮಯೋಗ ಬಗ್ಗೆ ಉಲ್ಲೇಖವಿದೆ. ಯೋಗ ಸೋದರತ್ವ ಭಾವನೆಯನ್ನು ಹೆಚ್ಚಿಸುತ್ತದೆ. ಯೋಗ ಜನರಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಜನಾಂಗ, ಬಣ್ಣ, ಲಿಂಗ, ನಂಬಿಕೆ ಎಲ್ಲವನ್ನು ಮೀರಿದ್ದು, ಈ ಯೋಗ.
ಸಂಕಷ್ಟದ ಸಮಯದಲ್ಲಿ ನಮ್ಮ ಧೈರ್ಯ ತುಂಬುತ್ತದೆ. ಇದರಲ್ಲೂ ಕೊರೊನಾ ಸಮಯದಲ್ಲಿ ಯೋಗ ಮನುಷ್ಯನಿಗೆ ಅಗತ್ಯವಾಗಿದೆ. ಕೊರೊನಾ ಸೋಂಕು ಉಸಿರಾಟದ ಮೇಲೆ ಪರಿಣಾಮ ಬೀರುತ್ತೆ. ‘ಪ್ರಾಣಾಯಾಮ’ ಉಸಿರಾಟ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಯೋಗ ಕುರಿತು ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ರವಾನಿಸಿದ್ದಾರೆ.