ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಆದಾಯವು ಆಗಸ್ಟ್ ತಿಂಗಳಲ್ಲಿ 1.12 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷದ ಇದೇ ತಿಂಗಳಿಗಿಂತ ಶೇ 30ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. 2021ರ ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.16 ಲಕ್ಷ ಕೋಟಿ ರೂಪಾಯಿ ಆಗಿತ್ತು. "2021ರ ಆಗಸ್ಟ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯವು 1,12,020 ಕೋಟಿ ರೂಪಾಯಿ. ಇದರಲ್ಲಿ ಸಿಜಿಎಸ್‌ಟಿ 20,522 ಕೋಟಿ ರೂಪಾಯಿ., ಎಸ್‌ಜಿಎಸ್‌ಟಿ 26,605 ಕೋಟಿ ರೂಪಾಯಿ., ಐಜಿಎಸ್‌ಟಿ 56,247 ಕೋಟಿ ರೂಪಾಯಿ (ಇದರಲ್ಲಿ 26,884 ಕೋಟಿ ರೂಪಾಯಿ ಸರಕುಗಳ ಆಮದಿನ ಮೇಲೆ ಸಂಗ್ರಹ ಆಗಿದ್ದು ಸಹ ಸೇರಿದೆ). ಇನ್ನು ಸೆಸ್ 8,646 ಕೋಟಿ ರೂಪಾಯಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ ರೂ. 646 ಕೋಟಿ ಸೇರಿದಂತೆ) ಸಂಗ್ರಹ ಆಗಿದೆ.
"ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 23,043 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿಗೆ 19,139 ಕೋಟಿ ರೂಪಾಯಿ ತೀರುವಳಿ ಮಾಡಿದೆ. ಜೊತೆಗೆ, ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ನಡುವೆ 50:50ರ ಅನುಪಾತದಲ್ಲಿ ಐಜಿಎಸ್‌ಟಿ ತಾತ್ಕಾಲಿಕ ಪರಿಹಾರವಾಗಿ 24,000 ಕೋಟಿ ರೂಪಾಯಿ ನೀಡಿದೆ. ಸಾಮಾನ್ಯ ಮತ್ತು ತಾತ್ಕಾಲಿಕ ತೀರುವಳಿ ನಂತರ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ 2021ರ ಆಗಸ್ಟ್ ತಿಂಗಳಲ್ಲಿ ಸಿಜಿಎಸ್‌ಟಿಗೆ 55,565 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿಗೆ 57,744 ಕೋಟಿ ರೂಪಾಯಿ," ಎಂದು ಹಣಕಾಸು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ದೇಶೀಯ ವಹಿವಾಟಿನ ಆದಾಯ ಹೆಚ್ಚಳ (ಸಾಂದರ್ಭಿಕ ಚಿತ್ರ)
ಜೂನ್ನಲ್ಲಿ ಜಿಎಸ್‌ಟಿ ಸಂಗ್ರಹ ಇಳಿಕೆ
ಜಿಎಸ್‌ಟಿ ಅಮ್ನೆಸ್ಟಿ ಯೋಜನೆ ಗಡುವು ವಿಸ್ತರಣೆ
ಆರ್ಥಿಕತೆ ಚೇತರಿಕೆಯ ಸೂಚನೆ