ಪಾಸಿಟಿವ್ ಪೇಮೆಂಟ್ ಆಫ್ ಚೆಕ್
ಅತಿದೊಡ್ಡ ಖಾಸಗಿ ಬ್ಯಾಂಕ್ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಇಂದಿನಿಂದ ಜಾರಿ ಆಗುವಂತೆ 50,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಚೆಕ್ ಪಾವತಿಗೆ ಕಡ್ಡಾಯವಾಗಿ ಪಾಸಿಟಿವ್ ಪೇ ನಿಯಮವನ್ನು ಅನುಸರಿಸಲು ಆರಂಭಿಸುತ್ತದೆ. ಹೊಸ ನಿಯಮದ ಪ್ರಕಾರವಾಗಿ, ಖಾತೆದಾರರು ಪಾವತಿಸುವವರ ಹೆಸರು, ದಿನಾಂಕ, ಮೊತ್ತದಂತಹ ಚೆಕ್ಗೆ ಸಂಬಂಧಿಸಿದಂತೆ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಒಂದು ವೇಳೆ ಬ್ಯಾಂಕ್‌ಗೆ ಮಾಹಿತಿ ತಲುಪದಿದ್ದರೆ ನಿಮ್ಮ ಖಾತೆಯಲ್ಲಿ ಅಗತ್ಯ ಪ್ರಮಾಣದ ಬ್ಯಾಲೆನ್ಸ್ ಇದ್ದರೂ ಮತ್ತು ಇತರ ಎಲ್ಲ ಅಂಶಗಳು ಸರಿಯಾಗಿದ್ದರೂ ಚೆಕ್ ಅನ್ನು ವಿಲೇವಾರಿ ಮಾಡಲ್ಲ. 2020 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪಾಸಿಟಿವ್ ಪೇ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಿ, ನೋಟಿಸ್ ನೀಡಿತ್ತು. ಈ ಮೂಲಕವಾಗಿ ಚೆಕ್ ನೀಡುವವರ ವಿವರಗಳನ್ನು ಪರಿಶೀಲಿಸಿ, ಬ್ಯಾಂಕ್ ವಂಚನೆಯನ್ನು ತಡೆಗಟ್ಟಲು ನೆರವಾಗುವ ಕಾರ್ಯವಿಧಾನ ಇದಾಗಿದೆ. ಇದು ಜನವರಿ 1, 2021ರಂದು ಜಾರಿಗೆ ಬಂದಿತು. ನಿಯಮ ಜಾರಿಗೆ ಬಂದ ನಂತರ ಭಾರತದ ಹಲವು ಪ್ರಮುಖ ಬ್ಯಾಂಕ್ಗಳು ಈ ಫೀಚರ್ ಅಳವಡಿಸಿಕೊಂಡಿವೆ ಮತ್ತು ಜಾರಿಗೆ ತಂದಿವೆ. ಇತ್ತೀಚೆಗೆ ಈ ಫೀಚರ್ ಅಳವಡಿಸಿಕೊಂಡ ಬ್ಯಾಂಕ್ ಆಕ್ಸಿಸ್ ಬ್ಯಾಂಕ್.