ಇಂದಿನಿಂದ ಖರೀದಿಗೆ ಸಿಗಲಿದೆ 6,000mAh ಬ್ಯಾಟರಿಯ ಗ್ಯಾಲಕ್ಸಿ F34 5G ಸ್ಮಾರ್ಟ್ಫೋನ್: ಬೆಲೆ ಎಷ್ಟು?
Galaxy F34 5G Sale: ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಗ್ಯಾಲಕ್ಸಿ F34 5G ಫೋನಿನಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಆಯ್ಕೆ ಕೂಡ ಇದೆ. ಹಾಗಾದರೆ, ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
1 / 8
ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಗ್ಯಾಲಕ್ಸಿ F34 5G ಫೋನಿನಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಆಯ್ಕೆ ಕೂಡ ಇದೆ. ಇದೀಗ ಈ ಸ್ಮಾರ್ಟ್ಫೋನ್ ಆಕರ್ಷಕ ಡಿಸ್ಕೌಂಟ್ನಲ್ಲಿ ಕಾಣಿಸಿಕೊಂಡಿದೆ. ಫ್ಲಿಪ್ಕಾರ್ಟ್ನಲ್ಲಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ.
2 / 8
ಆದರೆ, ಇದೀಗ ಫ್ಲಿಪ್ಕಾರ್ಟ್ನಲ್ಲಿ ಗ್ಯಾಲಕ್ಸಿ F34 5G ಫೋನ್ ಶೇ. 22 ರಷ್ಟು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇದರ 6GB RAM ಆಯ್ಕೆ ಕೇವಲ 18,999 ರೂ. ಗೆ ಸೇಲ್ ಆಗುತ್ತಿದೆ. ಅಂತೆಯೆ 8GB RAM ಆಯ್ಕೆಯನ್ನು 20,999 ರೂ. ಗೆ ನಿಮ್ಮದಾಗಿಸಬಹುದು. ಈ ಫೋನ್ ಎಲೆಕ್ಟ್ರಿಕ್ ಬ್ಲಾಕ್ ಮತ್ತು ಮಿಸ್ಟಿಕ್ ಗ್ರೀನ್ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಮಾರಾಟ ಕಾಣುತ್ತಿದೆ.
3 / 8
ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್ಸಂಗ್ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಎಫ್ ಸರಣಿ ಅಡಿಯಲ್ಲಿ ನೂತನ ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿತ್ತು. ಮಧ್ಯಮ ಬೆಲೆಯ ಈ ಫೋನ್ ದೇಶದಲ್ಲಿ ಭರ್ಜರಿ ಮಾರಾಟ ಕಾಣುತ್ತಿದೆ.
4 / 8
ಗ್ಯಾಲಕ್ಸಿ F34 5G ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ 6GB RAM + 128GB ಸ್ಟೋರೇಜ್ ರೂಪಾಂತರದ ಮೂಲಬೆಲೆ ಫ್ಲಿಪ್ಕಾರ್ಟ್ನಲ್ಲಿ 24,499 ರೂ. ಇದೆ. ಅಂತೆಯೆ ಇದರ 8GB RAM + 128GB ಆಯ್ಕೆಗೆ 25,999ರೂ. ನಿಗದಿ ಮಾಡಲಾಗಿದೆ.
5 / 8
ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಸ್ಮಾರ್ಟ್ಫೋನ್ 6.46-ಇಂಚಿನ ಪೂರ್ಣ-HD+ AMOLED ಡಿಸ್‌ಪ್ಲೇಯನ್ನು ಹೊಂದಿದೆ. 120Hz ನ ರಿಫ್ರೆಶ್ ದರ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ನೀಡಲಾಗಿದೆ. ಇದು ಇನ್-ಹೌಸ್ ಆಕ್ಟಾ-ಕೋರ್ ಎಕ್ಸಿನೊಸ್ 1280 ಪ್ರೊಸೆಸರ್ನಿಂದ ಚಾಲಿತವಾಗಿದೆ. ಇದು Android 13-ಆಧಾರಿತ One UI 5.1 ನೊಂದಿಗೆ ರನ್ ಆಗುತ್ತದೆ.
6 / 8
ಕ್ಯಾಮೆರಾ ವಿಭಾಗದಲ್ಲಿ, ಗ್ಯಾಲಕ್ಸಿ F34 5G 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಸಂವೇದಕ ಮತ್ತು ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕವನ್ನು ಜೋಡಿಸಲಾಗಿದೆ.
7 / 8
ಗ್ಯಾಲಕ್ಸಿ F34 5G ಸ್ಮಾರ್ಟ್ಫೋನ್ನಲ್ಲಿ ಹಿಂಭಾಗದ ಕ್ಯಾಮೆರಾ ಜೊತೆ ಎಲ್ಇಡಿ ಫ್ಲ್ಯಾಷ್ ಇದೆ. ಇವುಗಳ ಜೊತೆಗೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13-ಮೆಗಾಪಿಕ್ಸೆಲ್ ಸೆನ್ಸಾರ್ನ ಕ್ಯಾಮೆರಾ ಅಳವಡಿಸಲಾಗಿದೆ.
8 / 8
ದೀರ್ಘ ಸಮಯ ಬಾಳಿಕೆ ಬರುವ 6,000mAh ಬ್ಯಾಟರಿಯನ್ನು ನೀಡಲಾಗಿದೆ. ಎರಡು ದಿನಗಳ ಕಾಲ ಚಾರ್ಜ್ ಬರುತ್ತದೆ ಎಂದು ಕಂಪನಿ ಹೇಳಿದೆ. ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G, GPS, NFC, Wi-Fi, Bluetooth v5.3 ಮತ್ತು USB Type-C ಸಂಪರ್ಕವನ್ನು ಬೆಂಬಲಿಸುತ್ತದೆ.