- Kannada News Photo gallery Cricket photos Team India Virat Kohli charges Rs.11.45 cr per Instagram post says report
Virat Kohli: ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಕಿಂಗ್ ಕೊಹ್ಲಿ ಗಳಿಸುವ ಆದಾಯ ಇಷ್ಟೊಂದಾ..!
Virat Kohli: ಹಾಪರ್ ಇನ್‌ಸ್ಟಾಗ್ರಾಮ್ ರಿಚ್ ಲಿಸ್ಟ್ 2021 ರ ಪ್ರಕಾರ, ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಪಡೆಯುವ ಸಂಭಾವನೆಯ ವಿಚಾರದಲ್ಲಿ ಇದೀಗ ವಿರಾಟ್ ಕೊಹ್ಲಿ ವಿಶ್ವದ 14 ನೇ ಸ್ಥಾನ ಪಡೆದುಕೊಂಡಿದ್ದಾರೆ. ವರದಿ ಪ್ರಕಾರ ಕೊಹ್ಲಿ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಬರೋಬ್ಬರಿ11.45 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎಂದು ತಿಳಿದುಬಂದಿದೆ.
Updated on: Aug 12, 2023 | 9:15 AM

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇದುವರೆಗೆ ಕ್ರಿಕೆಟ್ ಮೈದಾನದಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮೈದಾನದಲ್ಲಿ ವಿರಾಟ್ ಕೊಹ್ಲಿಯ ಆಟ, ಅವರ ವ್ಯಕ್ತಿತ್ವ, ಅವರ ಆಟದ ಶೈಲಿ ಮತ್ತು ಇತರ ಹಲವು ಅಂಶಗಳಿಂದ ಅವರಿಗೆ ಅಸಂಖ್ಯಾತ ಅಭಿಮಾನಿಗಳ ಬಳಗವೇ ಇದೆ.

ಇದಲ್ಲದೆ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲೂ ಕೋಟ್ಯಾಂತರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಅದರಲ್ಲೂ ಇನ್ಸ್ಟಾಗ್ರಾಂನಲ್ಲಿ 256 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ವಿರಾಟ್, ಕ್ರಿಕೆಟ್ನಲ್ಲಿ ಇಷ್ಟೊಂದು ಫ್ಯಾನ್ ಫಾಲೋಯಿಂಗ್ ಹೊಂದಿರುವ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಹೀಗಾಗಿ ವಿರಾಟ್ ಕೊಹ್ಲಿಗೆ, ಕ್ರಿಕೆಟ್, ಜಾಹೀರಾತುಗಳ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಪ್ರಮಾಣದ ಆದಾಯ ಹರಿದುಬರುತ್ತಿದೆ. ಅದರಲ್ಲೂ ಇನ್ಸ್ಟಾಗ್ರಾಮ್ ಒಂದರಿಂದಲೇ ಕೊಹ್ಲಿ ಖಾತೆಗೆ ಕೋಟಿಗಟ್ಟಲೆ ಆದಾಯ ಸೇರುತ್ತಿದೆ.

ಹಾಪರ್ ಇನ್‌ಸ್ಟಾಗ್ರಾಮ್ ರಿಚ್ ಲಿಸ್ಟ್ 2021 ರ ಪ್ರಕಾರ, ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಪಡೆಯುವ ಸಂಭಾವನೆಯ ವಿಚಾರದಲ್ಲಿ ಇದೀಗ ವಿರಾಟ್ ಕೊಹ್ಲಿ ವಿಶ್ವದ 14 ನೇ ಸ್ಥಾನ ಪಡೆದುಕೊಂಡಿದ್ದಾರೆ. ವರದಿ ಪ್ರಕಾರ ಕೊಹ್ಲಿ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಬರೋಬ್ಬರಿ11.45 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎಂದು ತಿಳಿದುಬಂದಿದೆ.

ವರದಿ ಪ್ರಕಾರ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಅತಿ ಹೆಚ್ಚು ಸಂಭಾವನೆ ಪಡೆಯುವವರ ಪೈಕಿ ಪೋರ್ಚುಗಲ್ನ ಫುಟ್ಬಾಲ್ ಲೆಜೆಂಡ್ ಕ್ರಿಸ್ಟಿಯಾನೋ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದು, ಈ ಕಾಲ್ಚೆಂಡಿನ ಚತುರ ಒಂದು ಪೋಸ್ಟ್‌ಗೆ 26.75 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಹಾಗೆಯೇ ಎರಡನೇ ಸ್ಥಾನದಲ್ಲಿರುವ ಮತ್ತೊಬ್ಬ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 21.49 ಕೋಟಿ ರೂ. ಚಾರ್ಜ್ ಮಾಡುತ್ತಾರೆ.

ಈ ಪಟ್ಟಿಯಲ್ಲಿರುವ ಭಾರತೀಯರ ಪೈಕಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ 29ನೇ ಸ್ಥಾನದಲ್ಲಿದ್ದಾರೆ. ವರದಿಯ ಪ್ರಕಾರ ಅವರು ಪ್ರತಿ ಪೋಸ್ಟ್‌ಗೆ ಸುಮಾರು 4.40 ಕೋಟಿ ರೂ. ಶುಲ್ಕ ವಿಧಿಸಿದ್ದಾರೆ.



















