Winter Health Tips: ಈ ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗಿನ ಐದು ಆಹಾರ ಕ್ರಮವನ್ನು ರೂಢಿಸಿಕೊಳ್ಳಿ

Edited By:

Updated on: Nov 04, 2022 | 12:43 PM

ಚಳಿಗಾಲ ಬಂತೆಂದರೆ ಸಾಕು, ಶೀತ, ಜ್ವರಗಳಂತಹ ಕಾಯಿಲೆಗಳು ಜೊತೆಗೆ ಬಂದು ಬಿಡುತ್ತವೆ. ಆದ್ದರಿಂದ ಆರೋಗ್ಯಕರ, ಸಮತೋಲಿತ ಆಹಾರವನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ.

1 / 6
ಈ ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ, ಸಮತೋಲಿತ ಆಹಾರವು ಅತ್ಯಗತ್ಯ. ಆದ್ದರಿಂದ ಈ ಕೆಳಗಿನ ಪದಾರ್ಥಗಳನ್ನು ದಿನ ನಿತ್ಯದ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ. ಇದು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ, ಸಮತೋಲಿತ ಆಹಾರವು ಅತ್ಯಗತ್ಯ. ಆದ್ದರಿಂದ ಈ ಕೆಳಗಿನ ಪದಾರ್ಥಗಳನ್ನು ದಿನ ನಿತ್ಯದ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ. ಇದು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

2 / 6

ಅರಿಶಿನವು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಚಳಿಗಾಲದಲ್ಲಿ ನೋಯುತ್ತಿರುವ ಗಂಟಲು, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಪ್ರತಿ ದಿನ ಬಿಸಿ ಹಾಲಿಗೆ ಒಂದು ಚಿಟಿಕೆ ಅರಶಿನ ಹುಡಿಯನ್ನು ಬೆರೆಸಿ ಕುಡಿಯಿರಿ.

3 / 6

ತುಳಸಿ ಎಲೆಯಲ್ಲಿ ಅಪಾರ ಔಷಧಿಯ ಅಂಶಗಳನ್ನು ಹೊಂದಿದ್ದು, ಪ್ರತಿ ದಿನ ಬೆಳಗ್ಗೆ ತುಳಸಿ ಎಲೆಯನ್ನು ಸೇವಿಸಿ. ಜೊತೆಗೆ ಚಳಿಗಾಲದಲ್ಲಿ ನೀವು ಕುಡಿಯುವ ಬಿಸಿ ನೀರಿಗೆ ಒಂದೆರಡು ತುಳಸಿ ಎಲೆಗಳನ್ನು ಹಾಕಿ.

4 / 6

ಬಾದಾಮಿಯಲ್ಲಿ ಮೆಗ್ನೀಸಿಯಮ್, ಪ್ರೋಟೀನ್ ಮತ್ತು ಸತು ಸೇರಿದಂತೆ ಹಲವಾರು ಖನಿಜ ಅಂಶಗಳು ಬಾದಾಮಿಗಳಲ್ಲಿ ಸೇರಿವೆ. ಜೊತೆಗೆ ವಿಟಮಿನ್ ಇ ಹೊಂದಿದೆ. ವಿಟಮಿನ್ ಇ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳಿಂದ ರಕ್ಷಿಸಲು ಸಹಾಯಮಾಡುತ್ತದೆ.

5 / 6

ಶುಂಠಿಯಲ್ಲಿ ಉರಿಯೂತ ನಿವಾರಕ ಅಂಶವನ್ನು ಒಳಗೊಂಡಿದ್ದು, ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನಿಮ್ಮ ದೇಹ ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

6 / 6

ಬೆಳ್ಳುಳ್ಳಿಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಇದು ಫೋಲೇಟ್, ಸತು, ಮತ್ತು ವಿಟಮಿನ್ ಸಿ ಮತ್ತು ಬಿ ಯನ್ನು ಒಳಗೊಂಡಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಶೀತ ಮತ್ತು ಕೆಮ್ಮಿನ ಆಗಾಗ್ಗೆ ಚಳಿಗಾಲದ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ.

Published On - 12:42 pm, Fri, 4 November 22

Loading...
Unable to load recommendations.
Follow Us