Kannada News Photo gallery A modern farmer from Kyatanal in Yadgir taluk cultivate multiple crops after vacating medical store job in Yadgir
ಸಿಟಿಯಲ್ಲಿ ಮೆಡಿಕಲ್ ಸ್ಟೋರ್ ವೃತ್ತಿಯಿಂದ ಬೇಸರವಾಗಿ ಹಳ್ಳಿಯತ್ತ ಹೆಜ್ಜೆ ಹಾಕಿದ ಯುವಕ, ಇಂದು ಕೃಷಿ ಮಾಡಿ ಖುಷಿಯಾಗಿದ್ದಾನೆ!
ಅಮೀನ್ ಸಾಬ್ | Updated By: ಸಾಧು ಶ್ರೀನಾಥ್
Updated on:
Jun 26, 2023 | 12:29 PM
ಆತ ಅರೆ ವೈದ್ಯಕೀಯ ಶಿಕ್ಷಣ ಮುಗಿಸಿ ಮೆಡಿಕಲ್ ಸ್ಟೋರ್ ಹಾಕಿಕೊಂಡು ಸಿಟಿಯಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದ. ಆದ್ರೆ ಕೆಲ ವರ್ಷಗಳ ಬಳಿಕ ಸಿಟಿ ಲೈಫ್ ನಿಂದ ಬೇಸರಗೊಂಡಿದ್ದ ಆತ ನೇರವಾಗಿ ತನ್ನ ಹಳ್ಳಿಗೆ ಬಂದು ಕೃಷಿ ಕಾಯಕ ಆರಂಭಿಸಿದ್ದಾನೆ.. ಕೇವಲ ಎರಡೂವರೆ ಎಕರೆಯಲ್ಲಿ ಸಾವಯವ ಕೃಷಿ ಪದ್ದತಿಯಿಂದ ಈಗ ಭರ್ಜರಿ ಲಾಭ ಪಡೆಯುತ್ತಿದ್ದಾನೆ.. ಕೇವಲ ಎರಡೂವರೆ ಎಕರೆಯಲ್ಲಿ ಹತ್ತಾರು ಬಗೆಯ ಹಣ್ಣುಗಳನ್ನ ಬೆಳೆದು ಮಾದರಿಯಾಗಿದ್ದಾನೆ.. ಅಷ್ಟಕ್ಕೂ ಆ ರೈತ ಆದ್ರು ಯಾರು ಅಂತೀರಾ ಈ ಸ್ಟೋರಿ ನೋಡಿ..
1 / 11
ಆತ ಅರೆ ವೈದ್ಯಕೀಯ ಶಿಕ್ಷಣ ಮುಗಿಸಿ ಮೆಡಿಕಲ್ ಸ್ಟೋರ್ ಹಾಕಿಕೊಂಡು ಸಿಟಿಯಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದ. ಆದ್ರೆ ಕೆಲ ವರ್ಷಗಳ ಬಳಿಕ ಸಿಟಿ ಲೈಫ್ ನಿಂದ ಬೇಸರಗೊಂಡಿದ್ದ ಆತ ನೇರವಾಗಿ ತನ್ನ ಹಳ್ಳಿಗೆ ಬಂದು ಕೃಷಿ ಕಾಯಕ ಆರಂಭಿಸಿದ್ದಾನೆ.. ಕೇವಲ ಎರಡೂವರೆ ಎಕರೆಯಲ್ಲಿ ಸಾವಯವ ಕೃಷಿ ಪದ್ದತಿಯಿಂದ ಈಗ ಭರ್ಜರಿ ಲಾಭ ಪಡೆಯುತ್ತಿದ್ದಾನೆ.. ಕೇವಲ ಎರಡೂವರೆ ಎಕರೆಯಲ್ಲಿ ಹತ್ತಾರು ಬಗೆಯ ಹಣ್ಣುಗಳನ್ನ ಬೆಳೆದು ಮಾದರಿಯಾಗಿದ್ದಾನೆ.. ಅಷ್ಟಕ್ಕೂ ಆ ರೈತ ಆದ್ರು ಯಾರು ಅಂತೀರಾ ಈ ಸ್ಟೋರಿ ನೋಡಿ..
2 / 11
ಮೆಡಿಕಲ್ ಫಿಲ್ಡ್ ಬಿಟ್ಟು ಕೃಷಿಯತ್ತ ವಾಲಿದ ವ್ಯಕ್ತಿ.. ಮೆಡಿಕಲ್ ಸ್ಟೋರ್ ಬಿಟ್ಟು ಗಿಡಗಳಿಗೆ ನೀರು ಬಿಡುತ್ತಿರುವ ಮಾದರಿ ರೈತ.. ಕೇವಲ ಎರಡುವರೆ ಎಕರೆ ಜಮೀನಿನಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಲಾಭ ಪಡೆಯುತ್ತಿದ್ದಾನೆ ರೈತ.. ರಾಸಾಯನಿಕ ಔಷಧಿಗಳನ್ನ ಬಳಸದೆ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿರುವ ರೈತ.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಕ್ಯಾತನಾಳ್ ಗ್ರಾಮದಲ್ಲಿ..
3 / 11
ಹೌದು ಹಳ್ಳಿ ಜೀವನದಿಂದ ಬೇಸರಗೊಂಡು ಅದೆಷ್ಟೋ ಜನ ಸಿಟಿಯಲ್ಲಿ ಸೆಟ್ಲ್ ಆಗುತ್ತಾರೆ. ಮಕ್ಕಳ ಓದು ಅದು ಇದು ಅಂತ ಹಳ್ಳಿ ಬಿಟ್ಟು ಪಟ್ಟಣ ಸೇರಿ ಹಳ್ಳಿಯನ್ನೆ ಮರೆಯುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಸಿಟಿ ಜೀವನ ಬೇಸರವಾಗಿದ್ದರಿಂದ ವಾಪಸ್ ಹಳ್ಳಿಗೆ ಬಂದು ಸೇರಿದ್ದಾನೆ..
4 / 11
ಯಾದಗಿರಿ ನಗರದಲ್ಲಿ ಮೆಡಿಕಲ್ ಶಾಪ್ ಹಾಕಿಕೊಂಡು ಅರಾಮಾಗಿ ಜೀವನ ನಡೆಸುತ್ತಿದ್ದ ಬಸವರಾಜ್ ಎಂಬ ಈ ವ್ಯಕ್ತಿ ಈಗ ಹಳ್ಳಿಯಲ್ಲಿ ಕಾಯಕ ಶುರು ಮಾಡಿದ್ದಾನೆ. ಅರಾಮವಾದ ಜೀವನವನ್ನ ಬಿಟ್ಟು ಜಮೀನಿನಲ್ಲಿ ಮೈಮುರಿದು ಕೆಲಸ ಮಾಡುತ್ತಿದ್ದಾನೆ.
5 / 11
ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ಏನಾದ್ರು ಹೊಸದು ಮಾಡಬೇಕು ಅಂತ ಹಠಕ್ಕೆ ಬಿದ್ದು ಹಳ್ಳಿ ಸೇರಿದ್ದ ಬಸವರಾಜ್ ತೋಟಗಾರಿಕೆ ಬೆಳೆಯನ್ನ ಬೆಳೆಯಲು ಆರಂಭಿಸಿದ್ದಾನೆ. ಕೇವಲ ಎರಡುವರೆ ಎಕರೆ ಜಮೀನಿನಲ್ಲಿ ಸುಮಾರು ಆರೇಳು ವಿಧದ ಹಣ್ಣುಗಳನ್ನ ಬೆಳೆಯುತ್ತಿದ್ದಾನೆ.
6 / 11
ಆರಂಭದಲ್ಲಿ ಎರಡೂವರೆ ಜಮೀನಿಗೆ ಸುಮಾರು 5.5 ಲಕ್ಷ ಹಣವನ್ನ ಖರ್ಚು ಮಾಡಿದ್ದಾನೆ. ಜಮೀನಿನಲ್ಲಿ ಬೋರವೆಲ್ ಕೊರೆಸಿದ್ದಾನೆ. ಜೊತೆಗೆ ಇಡೀ ಜಮೀನಿನ ಸುತ್ತ ಮುಳ್ಳು ತಂತಿ ಬೇಲಿಯನ್ನ ಅಳವಡಿಸಿದ್ದಾನೆ. ಬಳಿಕ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿಯನ್ನ ಅಳವಡಿಸಿಕೊಂಡು ಆರೇಳು ವಿಧದ ಹಣುಗಳನ್ನ ಬೆಳೆದು ಇತರರಿಗೆ ಮಾದರಿಯಾಗಿದ್ದಾನೆ.
7 / 11
ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಹಿಂದೆ ಇವರ ಹಿರಿಯರು ಹತ್ತಿ, ತೊಗರಿಯನ್ನೇ ಬೆಳೆಯುತ್ತಿದ್ರು. ಆದ್ರೆ ಅಂದುಕೊಂಡ ರೀತಿಯಲ್ಲಿ ಲಾಭ ಸಿಗುತ್ತಿರಲಿಲ್ಲ. ಇದೀಗ ಬಸವರಾಜ್ ಕೃಷಿ ಕಾಯಕ ಆರಂಭಿಸಿದ ಮೇಲೆ ತೋಟಗಾರಿಕೆ ಬೆಳೆಯನ್ನ ಬೆಳೆಯಲು ಆರಂಭಿಸಿದ್ದಾರೆ.
8 / 11
ಎರಡುವರೆ ಎಕರೆ ಜಮೀನಿನಲ್ಲಿ ಸಪೋಟಾ, ದಾಳಿಂಬೆ, ಮೋಸಂಬಿ, ನುಗ್ಗೆ ಕಾಯಿ, ಕಾಡು ನಲ್ಲಿಕಾಯಿ, ಪೇರು, ಜಂಬೋ ನೀಲದಣ್ಣು ಹಾಗೂ ಮಾವು ಬೆಳೆದಿದ್ದಾರೆ. ಕೇವಲ ಎರಡುವರೆ ಎಕರೆಯಲ್ಲಿ ಇಷ್ಟೆಲ್ಲ ಬೆಳೆಗಳನ್ನ ಬೆಳೆದಿದ್ದಾರೆ. ಅದರಲ್ಲೂ ಪೇರು ಸಸಿಗಳನ್ನ ತಮಿಳುನಾಡಿನಿಂದ ತಂದಿದ್ದು ಇದು 60 ವರ್ಷಗಳ ಕಾಲ ಗಿಡಗಳು ಹಣ್ಣುಗಳನ್ನ ನೀಡುತ್ತವೆ ಅಂತ ಹೇಳುತ್ತಾರೆ ರೈತ. ವರ್ಷಕ್ಕೆ ಒಂದು ಬಾರಿ ಲಾಭ ಪಡೆಯುವ ಬದಲು ವರ್ಷ ಪೂರ್ತಿ ಲಾಭ ಪಡೆಯುವ ದೃಷ್ಟಿಯಿಂದ ಈ ರೀತಿ ನಾನಾ ರೀತಿಯ ಹಣ್ಣುಗಳನ್ನ ರೈತ ಬಸವರಾಜ್ ಬೆಳೆಯುತ್ತಿದ್ದಾರೆ.
9 / 11
ಪ್ರತಿಯೊಂದು ಹಣ್ಣಿನ ಸೀಜನ್ ನಲ್ಲಿ ಒಂದೊಂದು ರೀತಿಯಲ್ಲಿ ಲಾಭ ಸಿಗ್ತಾಯಿದೆ. ಕಳೆದ ತಿಂಗಳಷ್ಟೆ ರೈತ ಬಸವರಾಜ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಪೇರು ಮಾರಾಟ ಮಾಡಿ ಭರ್ಜರಿ ಲಾಭ ಪಡೆದಿದ್ದಾರೆ. ಇನ್ನು ನುಗ್ಗೆಕಾಯಿ ಬೆಲೆ ಗನನಕ್ಕೇರಿದ್ದು ರೈತ ಬಸವರಾಜ್ ಗೆ ಲಾಭ ತಂದು ಕೊಟ್ಟಿದೆ. ಹೀಗಾಗಿ ಇದೇ ವರ್ಷದಲ್ಲಿ 3.5 ಲಕ್ಷ ರೂಪಾಯಿ ಲಾಭವನ್ನ ಪಡೆದಿದ್ದಾನೆ ಈ ಮಾದರಿ ರೈತ.
10 / 11
ಇನ್ನು ಮುಂದಿನ ವರ್ಷ ಜಂಬೋ ನೀಲದಣ್ಣು ಹಾಗೂ ಮಾವು ಮುಂದಿನ ವರ್ಷ ಫಲ ನೀಡಲಿದ್ದು ಸಾಕಷ್ಟು ಲಾಭ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳಿಗೆ ಯಾವುದೇ ರಸಾಯನಿಕ ರಸಗೊಬ್ಬರ ಹಾಗೂ ಕೀಟನಾಶಕವನ್ನ ಬಳಸದೆ ಸಾವಯವ ಪದ್ದತಿ ಮೂಲಕ ಬೆಳೆದಿದ್ದಾರೆ. ಇದೆ ಕಾರಣಕ್ಕೆ ರೈತ ಬಸವರಾಜ್ ರೀತಿಯಲ್ಲಿ ತಾವು ಕೂಡ ಬೆಳೆಬೇಕು ಅಂತ ರೈತರು ಹಂಬಲಿಸುತ್ತಿದ್ದಾರೆ.
11 / 11
ಒಟ್ನಲ್ಲಿ ಹಳ್ಳಿ ಲೈಫ್ ಗೆ ಗುಡ್ ಬೈ ಹೇಳಿ ಸಿಟಿಯಲ್ಲಿ ಆರಾಮಾಗಿ ಸೆಟ್ಲ್ ಆಗುವ ಈ ಕಾಲದಲ್ಲಿ ರೈತ ಬಸವರಾಜ್ ಮಾತ್ರ ಹಳ್ಳಿಯ ಬದುಕೆ ಬೆಸ್ಟ್ ಎನ್ನುತ್ತಾರೆ. ಕೃಷಿಯಲ್ಲಿ ಏನಿಲ್ಲ ಬರಿ ನಷ್ಟ ಅಂತ ಸಿಟಿ ಸೇರುವವರಿಗೆ ಈ ರೈತ ಮಾದರಿಯಾಗಿದ್ದಾರೆ ಅಂದ್ರೆ ತಪ್ಪಾಗಲಾರದು.