Updated on: Jan 09, 2022 | 7:10 AM
ಜೇನುತುಪ್ಪ ಮತ್ತು ಕಾಫಿ ಪುಡಿಯನ್ನು ಸ್ಕ್ರಬ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಹೊಳಪು ಬರುತ್ತದೆ. ಕಾಫಿಯು ಮುಖದಲ್ಲಿರುವ ಕೊಳೆಯನ್ನು ಹೋಗಲಾಡಿಸಿದರೆ, ಜೇನುತುಪ್ಪವು ಮುಖದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.
ಮೊಸರು ಮತ್ತು ಕಾಫಿ ಪುಡಿಯ ಪ್ಯಾಕ್ ಮುಖದ ಶುಷ್ಕತೆಯನ್ನು ಹೋಗಲಾಡಿಸಲು ಪರಿಣಾಮಕಾರಿ ಮೊಸರು ಮತ್ತು ಕಾಫಿ ಪುಡಿಗೆ ಜೇನುತುಪ್ಪವನ್ನು ಸೇರಿಸಬಹುದು. ರಾತ್ರಿಯಲ್ಲಿ ಈ ಪ್ಯಾಕ್ ಅನ್ನು ಅನ್ವಯಿಸುವುದು ಉತ್ತಮ.
ತುಪ್ಪ ಮತ್ತು ಕಾಫಿ ಪುಡಿ ಮುಖಕ್ಕೆ ಮಾತ್ರವಲ್ಲ, ತುಟಿಗಳಿಗೂ ಅತ್ಯುತ್ತಮ ಆರೈಕೆಯಾಗಬಲ್ಲದು. ತುಪ್ಪ ಮತ್ತು ಕಾಫಿ ಪಡಿಯನ್ನು ಬೆರೆಸಿ ತುಟಿಗಳ ಮೇಲೆ ಮಸಾಜ್ ಮಾಡಿ ಮತ್ತು 10 ನಿಮಿಷಗಳ ನಂತರ ಅದನ್ನು ಸ್ವಚ್ಛಗೊಳಿಸಿ. ಇದರಿಂದ ತುಟಿಗಳು ಮೃದುವಾಗುತ್ತದೆ.
ತೆಂಗಿನೆಣ್ಣೆ ಮತ್ತು ಕಾಫಿ ಪುಡಿ ಮಿಶ್ರಣ ಮಾಡಿ ಒಂದು ರೀತಿಯ ಸ್ಕ್ರಬ್ ಅನ್ನು ತಯಾರಿಸಬಹುದು. ಸುಮಾರು 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿದ ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ಮುಖಕ್ಕೆ ಹೊಳಪು ನೀಡುತ್ತದೆ.
ಹಾಲಿನ ಕೆನೆ ಮತ್ತು ಕಾಫಿ ಪುಡಿ ಕಣ್ಣುಗಳ ಕೆಳಗೆ ಕಪ್ಪಾಗುವುದನ್ನು ಕಡಿಮೆ ಮಾಡುತ್ತದೆ. ಇದು ಕಣ್ಣಿನ ಕೆಳಗಿನ ಶುಷ್ಕತೆಯನ್ನು ಸಹ ತೆಗೆದುಹಾಕುತ್ತದೆ.