ಪ್ರತೀ ಹೆಣ್ಣಿಗೆ ಗರ್ಭಿಣಿ ಆಗುವುದು ಒಂದು ಉತ್ಕೃಷ್ಟ ಅನುಭವ. ಅದಕ್ಕೆ ಸರಿಯಾದ ಆಹಾರ ಸೇವನೆ, ಆರೋಗ್ಯ ಕಾಪಾಡಿಕೊಳ್ಳುವುದು. ಮುಖ್ಯವಾಗಿರುತ್ತದೆ. ಯಾವೆಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ.
ದೀರ್ಘಕಾಲದ ಸಮಸ್ಯೆಗಳಿದ್ದರೆ ಎಚ್ಚರವಹಿಸಿ. ಆರೋಗ್ಯ ಸಮಸ್ಯೆಗಳನ್ನಿಟ್ಟುಕೊಂಡು ಗರ್ಭಿಣಿಯಾದರೆ ಸಮಸ್ಯೆಯೇ ಹೆಚ್ಚು ಹೀಗಾಗಿ ಹೆಚ್ಚಿನ ಮುನ್ನಚ್ಚರಿಕೆ ಅಗತ್ಯವಾಗಿದೆ.
ಪೋಲಿಕ್ ಆಸಿಡ್ ತೆಗೆದುಕೊಳ್ಳಿ. ಇದು ನಿಮ್ಮ ಮಗುವನ್ನು ಆರೋಗ್ಯಯುತವಾಗಿ ಬೆಳವಣಿಗೆಯಾಗುವಂತೆ ಮಾಡುತ್ತದೆ.
ಧೂಮಪಾನ ಅಥವಾ ಮದ್ಯಪಾನದ ಅಭ್ಯಾಸವಿದ್ದರೆ ಅಗತ್ಯವಾಗಿ ತ್ಯಜಿಸಿ. ಇದು ನಿಮ್ಮ ಗರ್ಭಧಾರಣೆಗೆ ಅಪಾಯ ಉಂಟುಮಾಡುತ್ತದೆ.
ಆಹಾರಗಳ ಸೇವನೆಯಲ್ಲಿ ಎಚ್ಚರಿಕೆಯಿರಲಿ. ಹೆಚ್ಚು ಮಸಾಲೆ ಪದಾರ್ಥಗಳ ಬದಲು ಹಸಿರು ತರಕಾರಿ, ಕಾಳುಗಳನ್ನು ಸೇವಿಸಿ.
ವ್ಯಾಯಾಮದ ಅಭ್ಯಾಸವಿರಲಿ. ಈಜು, ನಡಿಗೆ, ಓಟ ಎಲ್ಲವೂ ದಿನಚರಿಯಲ್ಲಿರಲಿ.