Updated on: Oct 19, 2022 | 1:16 PM
ನಟ ಅಕ್ಷಯ್ ಕುಮಾರ್ ಅವರು 2022ರಲ್ಲಿ ಸತತ ಸೋಲು ಅನುಭವಿಸಿದ್ದಾರೆ. ಆದರೂ ಕೂಡ ಅವರ ಹವಾ ಕಮ್ಮಿ ಆಗಿಲ್ಲ. ಅವರು ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.
ಜಾಹೀರಾತು ಕ್ಷೇತ್ರದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಸಖತ್ ಬೇಡಿಕೆ ಇದೆ. ಅನೇಕ ಪ್ರತಿಷ್ಠಿತ ಕಂಪನಿಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.
ಟಿವಿ ಜಾಹೀರಾತಿನಲ್ಲಿ ಅತಿ ಹೆಚ್ಚು ಕಾಣಿಸಿಕೊಂಡ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅವರು ನಂಬರ್ ಒನ್ ಆಗಿದ್ದಾರೆ. ಇದು ಅವರಿಗೆ ಇರುವ ಬೇಡಿಕೆಗೆ ಹಿಡಿದ ಕನ್ನಡಿ ಆಗಿದೆ.
ಹಲವಾರು ಜಾಹೀರಾತುಗಳಲ್ಲಿ ಅಕ್ಷಯ್ ಕುಮಾರ್ ಅವರು ಕಾಣಿಸಿಕೊಳ್ಳುತ್ತಾರೆ. ಅದರಿಂದ ಅವರಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ.
ಸಿನಿಮಾಗಳು ಸೋಲು ಕಂಡರೂ ಜಾಹೀರಾತು ಕ್ಷೇತ್ರದಲ್ಲಿ ಅಕ್ಷಯ್ ಕುಮಾರ್ ಮಿಂಚುತ್ತಿದ್ದಾರೆ. ಇನ್ನುಳಿದ ಸ್ಟಾರ್ ನಟರನ್ನು ಹಿಂದಿಕ್ಕಿ ಅವರು ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಬಳಿಕ ಅಮಿತಾಭ್ ಬಚ್ಚನ್ ಮತ್ತು ಆಲಿಯಾ ಭಟ್ ಸ್ಥಾನ ಪಡೆದಿದ್ದಾರೆ. ಅನುಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಅವರಿಬ್ಬರು ಇದ್ದಾರೆ.