Note ban: ಭಾರತದಲ್ಲಿ ಇದುವರೆಗೆ ಯಾವೆಲ್ಲ ನೋಟುಗಳು ರದ್ದಾಗಿವೆ ಗೊತ್ತಾ? ನೀವು ಈ ಹಿಂದೆ ನೋಡಿರದ ನೋಟ್​ ಬ್ಯಾನ್​ ವೃತ್ತಾಂತ ಇಲ್ಲಿದೆ!

ಸಾಧು ಶ್ರೀನಾಥ್​

Updated on: May 21, 2023 | 1:05 AM

ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ, ಮೇ 19 ರಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡು ಚಲಾವಣೆಯಿಂದ ರೂ. 2000 ನೋಟು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಈ ನೋಟನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ತಿಳಿಸಲಾಗಿದೆ.

1 / 7
Note ban: ಭಾರತದಲ್ಲಿ ಇದುವರೆಗೆ ಯಾವೆಲ್ಲ ನೋಟುಗಳು ರದ್ದಾಗಿವೆ ಗೊತ್ತಾ? ನೀವು ಈ ಹಿಂದೆ ನೋಡಿರದ ನೋಟ್​ ಬ್ಯಾನ್​ ವೃತ್ತಾಂತ ಇಲ್ಲಿದೆ!

2 / 7

ಸಾಂದರ್ಭಿಕ ಚಿತ್ರ

3 / 7

ಅದೇ ಸಮಯದಲ್ಲಿ, ಮೊದಲ ನೋಟು ಅಮಾನ್ಯೀಕರಣವು 1946 ರಲ್ಲಿ ನಡೆಯಿತು. ಈ ವೇಳೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ 500, 1000 ಹಾಗೂ 10 ಸಾವಿರ ನೋಟುಗಳನ್ನು ರದ್ದುಗೊಳಿಸಲಾಗಿತ್ತು.

4 / 7

ಇದಾದ ನಂತರ 1978ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ಕಪ್ಪುಹಣದ ವಿರುದ್ಧ ಕ್ರಮ ಕೈಗೊಂಡು ರೂ. 1,000 ರೂ. 5,000 ಮತ್ತು ರೂ.10,000 ನೋಟುಗಳನ್ನು ರದ್ದುಗೊಳಿಸಿತ್ತು.

5 / 7

ಈ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ 1000 ರೂಪಾಯಿ ನೋಟುಗಳನ್ನು ಸಹ ಅಮಾನ್ಯಗೊಳಿಸಲಾಗಿತ್ತು. ನಂತರ ಅದನ್ನು ಚಲಾವಣೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಮತ್ತೆ ಆ ನೋಟುಗಳನ್ನು 2016 ರಲ್ಲಿ ಮತ್ತೆ ನಿಲ್ಲಿಸಲಾಯಿತು.

6 / 7

ನಿರ್ದಿಷ್ಟವಾಗಿ ಹೇಳುವುದಾದರೆ, 2000 ರೂಪಾಯಿಗಳನ್ನು ಚಲಾವಣೆಯಿಂದ ತೆಗೆದುಹಾಕುವ ನಿರ್ಧಾರವು ನೋಟು ಅಮಾನ್ಯೀಕರಣವಲ್ಲ. ನೀವು ಅದನ್ನು ಬಳಸಬಹುದು. ಮಾರುಕಟ್ಟೆಯಲ್ಲಿ ಚಲಾವಣೆ ಮಾಡಬಹುದಾಗಿದೆ. ಆದರೆ ನೋಟು ಅಮಾನ್ಯೀಕರಣ ಮಾಡಿದಾಗ ಹೀಗೆ ಚಲಾವಣೆ ಮಾಡಲು ಆಗುವುದಿಲ್ಲ.

7 / 7

2000 ರೂಪಾಯಿ ಕರೆನ್ಸಿ ನೋಟು: 2000, 1000, 500 ಹೊರತುಪಡಿಸಿ ಚಿತ್ರದಲ್ಲಿರುವ ಈ ನೋಟುಗಳು ಸಹ ಗತಕಾಲಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇಂದಿನ ಪೀಳಿಗೆಯ ಅನೇಕ ಜನರು ಇವುಗಳನ್ನು ನಿಜವಾಗಿ ನೋಡಿಲ್ಲ.

Published On - 1:03 am, Sun, 21 May 23

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us