ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಭಾರತದಲ್ಲಿ ಎಷ್ಟು ಗಂಟೆಗೆ ಲೈವ್, ಹೇಗೆ ವೀಕ್ಷಿಸುವುದು?

|

Updated on: Sep 04, 2023 | 6:55 AM

iPhone 15 launch timing, when and where to watch LIVE: ಭಾರತೀಯ ಕಾಲಮಾನದ ಪ್ರಕಾರ ಐಫೋನ್ 15 ಸರಣಿಯ ಈವೆಂಟ್ ರಾತ್ರಿ 10:30 ಕ್ಕೆ ಶುರುವಾಗಲಿದೆ. ನೀವು ಆಪಲ್‌ನ 'ವಂಡರ್‌ಲಸ್ಟ್' ಈವೆಂಟ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಮತ್ತು Apple TV ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.

1 / 8
ಆ್ಯಪಲ್ ಕಂಪನಿಯ ಮೊನ್ನೆಯಷ್ಟೆ ತನ್ನ ಬಹುನಿರೀಕ್ಷಿತ ಐಫೋನ್ 15 ಸರಣಿಯ (iPhone 15 Series) ಸ್ಮಾರ್ಟ್​ಫೋನ್​ಗಳ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಮುಂದಿನ ಪೀಳಿಗೆಯ ಐಫೋನ್ 15 ಸರಣಿ ಸ್ಮಾರ್ಟ್‌ಫೋನ್‌ಗಳು ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ ಎಂದು ಕಂಪನಿಯು ಹೇಳಿದೆ.

2 / 8
ಭಾರತೀಯ ಕಾಲಮಾನದ ಪ್ರಕಾರ ಐಫೋನ್ 15 ಸರಣಿಯ ಈವೆಂಟ್ ರಾತ್ರಿ 10:30 ಕ್ಕೆ ಶುರುವಾಗಲಿದೆ. ನೀವು ಆಪಲ್‌ನ 'ವಂಡರ್‌ಲಸ್ಟ್' ಈವೆಂಟ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಮತ್ತು Apple TV ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು. ಐಫೋನ್ 15 ಸರಣಿಯಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನುಗಳು ಇರಲಿದೆ.

3 / 8
ಐಫೋನ್ 15 USA ನಲ್ಲಿ $799 ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತದೆ. ಇದು ಹಿಂದಿನ ಮಾದರಿಯಂತೆಯೇ ಇರಲಿದೆ ಎಂಬ ಮಾತಿದೆ. ಐಫೋನ್ 14 ಸರಣಿಯ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು, ಐಫೋನ್ 15 ಬೆಲೆ ಭಾರತದಲ್ಲಿ 79,900 ರೂ. ಗಳಿಂದ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

4 / 8
ಈ ಬಾರಿಯ ಆ್ಯಪಲ್ ಐಫೋನ್​ನಲ್ಲಿ ನಿರೀಕ್ಷಿಸಲಾಗಿರುವ ಮುಖ್ಯ ಬದಲಾವಣೆ ಎಂದರೆ ಹಿಂದಿನ ಮಾದರಿಗಳಲ್ಲಿ ನೋಡಿದ ಆ್ಯಪಲ್​ನ ಲೈಟ್ನಿಂಗ್ ಪೋರ್ಟ್ ಬದಲಿಗೆ USB ಟೈಪ್-ಸಿ ಪೋರ್ಟ್ ಅನ್ನು ಬಳಸುವುದು. ಬಳಕೆದಾರರಿಗೆ ಸುಲಭವಾಗಿ ಚಾರ್ಜ್ ಮಾಡಲು ಇದು ಸಹಕಾರಿ ಆಗಿದೆ.

5 / 8
ಐಫೋನ್ 15 ಹಿಂದಿನ ಐಫೋನ್ 13 ಮತ್ತು ಐಫೋನ್ 14 ನಂತೆಯೇ 6.1-ಇಂಚಿನ ಡಿಸ್ ಪ್ಲೇಯೊಂದಿಗೆ ಬರಲಿದೆ. ಈ ವರ್ಷ ಪಂಚ್-ಹೋಲ್ ಡಿಸ್ ಪ್ಲೇ ವಿನ್ಯಾಸವನ್ನು ನಿರೀಕ್ಷಿಸಬಹುದು.

6 / 8
ಆ್ಯಪಲ್ ತನ್ನ ಕಳೆದ ವರ್ಷದ ಪ್ರಮುಖ A16 ಚಿಪ್‌ಸೆಟ್‌ನೊಂದಿಗೆ ಐಫೋನ್ 15 ಅನ್ನು ಬಿಡುಗಡೆ ಮಾಡಬಹುದು. ಯಾಕೆಂದರೆ ಹೊಸ A17 ಚಿಪ್ ಅನ್ನು ಐಫೋನ್ 15 ಪ್ರೊ ಮಾದರಿಗಳಿಗಾಗಿ ಕಾಯ್ದಿರಿಸಲಾಗಿದೆ. ಇದರ ಜೊತೆಗೆ, ಎಲ್ಲಾ ಹೊಸ 2023 ಐಫೋನ್‌ಗಳು ಇತ್ತೀಚಿನ iOS 17 ಸಾಫ್ಟ್‌ವೇರ್ ಅನ್ನು ಹೊಂದಿರುತ್ತದೆ.

7 / 8
ಸೋರಿಕೆಯ ಪ್ರಕಾರ, ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಐಫೋನ್ 15 ಮಾದರಿಗಳು ದೊಡ್ಡ ಬ್ಯಾಟರಿ ಪವರ್ ಅನ್ನು ಹೊಂದಿವೆಯಂತೆ. ಸ್ಟ್ಯಾಂಡರ್ಡ್ ಮಾಡೆಲ್ 3,877mAh ಬ್ಯಾಟರಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಇದು ಐಫೋನ್ 14 ನಲ್ಲಿ ಕಂಡುಬರುವ 3,279mAh ಯುನಿಟ್‌ಗಿಂತ ದೊಡ್ಡ ಅಪ್‌ಗ್ರೇಡ್ ಆಗಿರುತ್ತದೆ. ಆ್ಯಪಲ್ ಫಾಸ್ಟ್ ಚಾರ್ಜರ್ ಕೂಡ ನೀಡಬಹುದು ಎಂಬ ಮಾತಿದೆ. ಇದು 35W ವೇಗದ ಚಾರ್ಜ್‌ಗ್​ನಿಂದ ಕೂಡಿದೆಯಂತೆ.

8 / 8
ಸ್ಟ್ಯಾಂಡರ್ಡ್ ಆವೃತ್ತಿಗಳು ಐಫೋನ್ 14 ಸರಣಿಯ ಪ್ರೊ ಮಾದರಿಗಳಂತೆಯೇ 48-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿವೆ ಎಂದು ವದಂತಿಗಳಿವೆ. ಇದು ಹಿಂದಿನ ಐಫೋನ್ ಮಾದರಿಗಳಲ್ಲಿ ಕಂಡುಬರುವ 12-ಮೆಗಾಪಿಕ್ಸೆಲ್ ಸಂವೇದಕಗಳಿಗಿಂತ ಹೆಚ್ಚನದ್ದಾಗಿದೆ. ಆದರೆ, ಆಪ್ಟಿಕಲ್ ಜೂಮ್ ಅಥವಾ ಲಿಡಾರ್ ಸ್ಕ್ಯಾನರ್‌ಗಾಗಿ ಟೆಲಿಫೋಟೋ ಲೆನ್ಸ್ ಅನ್ನು ನಿರೀಕ್ಷಿಸಬೇಡಿ, ಏಕೆಂದರೆ ಇವುಗಳನ್ನು ಉನ್ನತ-ಮಟ್ಟದ ಪ್ರೊ ಮಾದರಿಗಳಿಗೆ ನೀಡಲಾಗುತ್ತದೆ.