- Kannada News Photo gallery Cricket photos Asia Cup 2023 Points Table Bangladesh grab two points after win vs Afghanistan
Asia Cup 2023 Points Table: 4 ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡಕ್ಕೆ ಯಾವ ಸ್ಥಾನ?
Asia Cup 2023 Points Table: ಬಾಂಗ್ಲಾದೇಶ ತನ್ನ ಗುಂಪು ಹಂತದ ಎರಡೂ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಹೀಗಾಗಿ ಸೂಪರ್ 4 ಹಂತಕ್ಕೇರಲು ಈಗ ಶ್ರೀಲಂಕಾ-ಅಫ್ಘಾನಿಸ್ತಾನದ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ. ಇನ್ನು ನಡೆದಿರುವ ನಾಲ್ಕು ಪಂದ್ಯಗಳ ಬಳಿಕ ಪಾಯಿಂಟ ಪಟ್ಟಿ ಹೇಗಿದೆ ಎಂಬುದನ್ನು ನೋಡುವುದಾದರೆ..
Updated on: Sep 04, 2023 | 8:55 AM

ಏಷ್ಯಾಕಪ್ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 89 ರನ್‌ಗಳಿಂದ ಸೋಲಿಸಿದ ಬಾಂಗ್ಲಾದೇಶ ಸೂಪರ್ 4 ಹಂತದ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಬಾಂಗ್ಲಾದೇಶದ ಈ ಗೆಲುವಿನಲ್ಲಿ ಮೆಹದಿ ಹಸನ್ ಮಿರಾಜ್ ಅವರ ಆಲ್ ರೌಂಡ್ ಪ್ರದರ್ಶನ, ನಜ್ಮುಲ್ ಹಸನ್ ಶಾಂಟೊ ಅವರ ಬಲಿಷ್ಠ ಶತಕ ಹಾಗೂ ವೇಗಿ ತಸ್ಕಿನ್ ಅಹ್ಮದ್ ಅವರ ಮಾರಕ ಬೌಲಿಂಗ್ ಪ್ರಮುಖ ಪಾತ್ರ ವಹಿಸಿತು.

ಬಾಂಗ್ಲಾದೇಶ ತನ್ನ ಗುಂಪು ಹಂತದ ಎರಡೂ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಹೀಗಾಗಿ ಸೂಪರ್ 4 ಹಂತಕ್ಕೇರಲು ಈಗ ಶ್ರೀಲಂಕಾ-ಅಫ್ಘಾನಿಸ್ತಾನದ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ. ಇನ್ನು ನಡೆದಿರುವ ನಾಲ್ಕು ಪಂದ್ಯಗಳ ಬಳಿಕ ಪಾಯಿಂಟ ಪಟ್ಟಿ ಹೇಗಿದೆ ಎಂಬುದನ್ನು ನೋಡುವುದಾದರೆ..

ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಪಾಕಿಸ್ತಾನ ಆಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿದ್ದರೆ, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಒಟ್ಟು 3 ಅಂಕ ಪಡೆದಿರುವ ಪಾಕಿಸ್ತಾನ ಸೂಪರ್ 4ಗೆ ಅರ್ಹತೆ ಪಡೆದಿದೆ.

ಹಾಗೆಯೇ ಎ ಗುಂಪಿನಲ್ಲಿ ಟೀಂ ಇಂಡಿಯಾ 2ನೇ ಸ್ಥಾನ ಪಡೆದುಕೊಂಡಿದೆ. ಆಡಿರುವ ಏಕೈಕ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಭಾರತದ ಬಳಿ ಒಂದೇ ಒಂದು ಅಂಕವಿದೆ. ಇದೀಗ ನೇಪಾಳ ವಿರುದ್ಧದ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿಯಂತ್ತಾಗಿದೆ.

ಈ ಗುಂಪಿನಲ್ಲಿರು ಮತ್ತೊಂದು ತಂಡವೆಂದರೆ ಅದು ನೇಪಾಳ. ಈ ತಂಡ ಆಡಿರುವ ಒಂದು ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಇದೀಗ ಈ ತಂಡ ಸೂಪರ್ ಫೋರ್ ಹಂತಕ್ಕೆ ತಲುಪಬೇಕೆಂದರೆ ಭಾರತದ ವಿರುದ್ಧ ಗೆಲಲ್ಲೇಬೇಕಿದೆ.

ಇನ್ನು ಬಿ ಗುಂಪಿನಲ್ಲಿ ಆತಿಥೇಯ ಶ್ರೀಲಂಕಾ ಮೊದಲ ಸ್ಥಾನದಲ್ಲಿದೆ. ಆಡಿರುವ ಏಕೈಕ ಪಂದ್ಯವನ್ನು ಗೆದ್ದಿರುವ ಲಂಕಾ 2 ಅಂಕ ಕಲೆಹಾಕಿದೆ.

ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ಬಾಂಗ್ಲಾದೇಶ ಆಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತು, ಒಂದರಲ್ಲಿ ಗೆಲುವು ಸಾಧಿಸಿದೆ. ಇದೀಗ ಬಾಂಗ್ಲಾ ಸೂಪರ್ 4 ಹಂತಕ್ಕೇರಬೇಕಂದರೆ ಶ್ರೀಲಂಕಾ-ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋಲಲೇಬೇಕಿದೆ.

ಈ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದಿರುವ ಅಫ್ಘಾನಿಸ್ತಾನ ಆಡಿರುವ ಒಂದು ಪಂದ್ಯದಲ್ಲಿ ಸೋಲು ಕಂಡಿದ್ದು, ಸೂಪರ್ ಫೋರ್ ಹಂತಕ್ಕೆ ತಲುಪಲು ಶ್ರೀಲಂಕಾ ವಿರುದ್ಧ ಗೆಲಲ್ಲೇಬೇಕಿದೆ.




