
ಹೀಗೆ ಸುತ್ತ ಎತ್ತ ನೊಡಿದರೂ ಪ್ರಕೃತಿ ಸೌಂದರ್ಯ, ಆಕಾಶ ಭೂಮಿ ಒಂದಾದ ರೀತಿ ಕಾಣುವ ನಂದಿಗಿರಿಧಾಮದ ಸೊಬಗು, ನಂದಿಗಿರಿಧಾಮದ ಪ್ರಕೃತಿ ಸೊಬಗಿನ ಮಧ್ಯೆ ಇರುವ ನಂದಿ ಗ್ರಾಮದಲ್ಲಿ ಶ್ರೀ ಭೋಗನಂದೀಶ್ವರ, ಅರುಣಾಚಲೇಶ್ವರ ಹಾಗೂ ಉಮಾಮಹೇಶ್ವರ ದೇವಸ್ಥಾನಗಳಲ್ಲಿ ಅದ್ದೂರಿ ಜಾತ್ರೆ ನಡೆದಿದೆ.

ಮಹಾ ಶಿವರಾತ್ರಿ ಪ್ರಯುಕ್ತ ಕ್ಷೇತ್ರದಲ್ಲಿ ಇಂದು ಜೋಡಿ ಬ್ರಹ್ಮರಥೋತ್ಸವ ನಡೆಯಿತು. ಈ ವೇಳೆ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಾತ್ರೆಯಲ್ಲಿ ಬಾಗಿಯಾಗಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರ ಆಗಿರುವವರೆಗೂ ನಾನೆ ಶಾಸಕನಾಗಿರಲಿ ಹಾಗೂ ಸಚಿವ ಡಾ.ಎಂ.ಸಿ.ಸುಧಾಕರ್ , ಸಚಿವ ಕೃಷ್ಣಬೈರೇಗೌಡ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ಶಿವರಾತ್ರಿ ಪ್ರಯುಕ್ತ ನಂದಿ ಜಾತ್ರೆಗೆ ಲಕ್ಷಾಂತರ ಜನ ಹರಿದು ಬಂದಿದ್ದರು. ರಥೋತ್ಸವದಲ್ಲಿ ಪಾಲ್ಗೋಂಡು ದೇವರ ಕೃಫೆಗೆ ಪಾತ್ರರಾದರು.

ಇನ್ನು ನಂದಿ ಜಾತ್ರೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್, ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು.

ರಾತ್ರಿಯಿಡಿ ಜಾಗರಣ, ಭಜನೆ ಪ್ರಾರ್ಥನೆ ನಡೆದ್ರೆ, ಬೆಳಿಗ್ಗೆ ದೇವರ ದರ್ಶನ ಪಡೆದು ರಥ ಎಳೆದು ಭಕ್ತರು ದೇವರ ಕೃಪೆಗೆ ಪಾತ್ರರಾದರು.
Published On - 4:06 pm, Sat, 9 March 24