Audi A6 Avant: 700 ಕಿ.ಮೀ ಮೈಲೇಜ್ ನೀಡುವ ಕಾರನ್ನು ಪರಿಚಯಿಸಿದ Audi
TV9 Web | Updated By: ಝಾಹಿರ್ ಯೂಸುಫ್
Updated on:
Mar 17, 2022 | 9:34 PM
A6 Avant e-tron 4,960 mm ಉದ್ದ, 1,960 mm ಅಗಲ ಮತ್ತು 1,440 mm ಎತ್ತರವನ್ನು ಹೊಂದಿರಲಿದೆ. ಇನ್ನು Audi A6 Avant e-tron ಮುಂಭಾಗದಲ್ಲಿ ಸಿಂಗಲ್-ಫ್ರೇಮ್ ಗ್ರಿಲ್ ನೀಡಲಾಗಿದೆ.
1 / 6
ಆಡಿ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರ್ A6 ಅವಂತ್ ಇ-ಟ್ರಾನ್ ಅನ್ನು ಬಹಿರಂಗಪಡಿಸಿದೆ. ಇದು ಆಲ್-ಎಲೆಕ್ಟ್ರಿಕ್ ಸ್ಟೇಷನ್ ವ್ಯಾಗನ್ ಆಗಿದ್ದು, ಇದು 2024 ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
2 / 6
ವಿಶೇಷ ಎಂದರೆ ಈ ಕಾರನ್ನು ಕೇವಲ 25 ನಿಮಿಷಗಳಲ್ಲಿ ಸಂಪೂರ್ಣ ಜಾರ್ಜ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ್ರೆ 700 ಕಿ.ಮೀ ವರೆಗೆ ಚಲಿಸಬಹುದು. ಇದೊರೊಂದಿಗೆ ಒಂದೇ ಚಾರ್ಜ್ನಲ್ಲಿ 700 ಕಿಮೀ ಓಡಿದ ಮೊದಲ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ A6 ಅವಂತ್ ಇ-ಟ್ರಾನ್ ಪಾಲಾಗಿದೆ.
3 / 6
A6 ಅವಂತ್ ಇ-ಟ್ರಾನ್ ಪ್ರೀಮಿಯಂ ಪ್ಲಾಟ್‌ಫಾರ್ಮ್ ಎಲೆಕ್ಟ್ರಿಕ್ (PPE) ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಇದನ್ನು ಆಡಿ ಮತ್ತು ಪೋರ್ಷೆ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದನ್ನು ಮೊದಲು 2023 ರಲ್ಲಿ ಹೊಸ ಪೋರ್ಷೆ ಮ್ಯಾಕನ್ ಇವಿ ಮತ್ತು ಆಡಿ ಕ್ಯೂ6 ಇ-ಟ್ರಾನ್‌ನಲ್ಲಿ ಬಳಸಲಾಗುವುದು ಎಂದು ಕಂಪೆನಿಗಳ ಒಪ್ಪಂದದಲ್ಲಿ ತಿಳಿಸಲಾಗಿದೆ.
4 / 6
A6 Avant e-tron 4,960 mm ಉದ್ದ, 1,960 mm ಅಗಲ ಮತ್ತು 1,440 mm ಎತ್ತರವನ್ನು ಹೊಂದಿರಲಿದೆ. ಇನ್ನು Audi A6 Avant e-tron ಮುಂಭಾಗದಲ್ಲಿ ಸಿಂಗಲ್-ಫ್ರೇಮ್ ಗ್ರಿಲ್ ನೀಡಲಾಗಿದೆ. ಇದು ಎಂಜಿನ್, ಬ್ಯಾಟರಿ ಮತ್ತು ಬ್ರೇಕ್‌ಗಳನ್ನು ತಂಪಾಗಿಸಲು ಹೆಚ್ಚಿನ ಸಹಾಯ ಮಾಡಲಿದೆ.
5 / 6
A6 ಇ-ಟ್ರಾನ್‌ನ ಡ್ರೈವ್‌ಟ್ರೇನ್ ವಿವರಗಳನ್ನು ಆಡಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಕಾರ್ಯಕ್ಷಮತೆಗಾಗಿ ಟ್ವಿನ್ ಎಂಜಿನ್ ಕಾನ್ಫಿಗರೇಶನ್ ಮತ್ತು ಪವರ್‌ಗಾಗಿ ಹಿಂಬದಿ ಚಕ್ರ ಚಾಲನೆಯ ಆಯ್ಕೆಯನ್ನು ಇದು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಟ್ವಿನ್ ಎಂಜಿನ್ ಗರಿಷ್ಠ 463 ಎಚ್‌ಪಿ ಪವರ್ ಮತ್ತು 800 ಎನ್‌ಎಂ ಪೀಕ್ ಟಾರ್ಕ್ ಅನ್ನು ಪಡೆಯಲಿದೆ.
6 / 6
Audi A6 Avant e-tron ನಲ್ಲಿ ಸುಮಾರು 100 kW ನ ಫ್ಲೋರ್-ಮೌಂಟೆಡ್ ಬ್ಯಾಟರಿಯನ್ನು ಬಳಸುತ್ತದೆ. ಇದರಿಂದಾಗಿ ಈ ಕಾರು ಸುಮಾರು 700 ಕಿಮೀ ರೇಂಜ್ ನೀಡುತ್ತದೆ. ಒಟ್ಟಿನಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುವ ಮೂಲಕ ಆಡಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.