Kannada News Photo gallery Balasore Train Accident World leaders extend condolences to victims' families in Odisha train crash
Balasore Train Accident: ಒಡಿಶಾ ರೈಲು ದುರಂತಕ್ಕೆ ಸಂತಾಪ ಸೂಚಿಸಿದ ಜಾಗತಿಕ ನಾಯಕರು
ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 261 ಮಂದಿ ಸಾವಿಗೀಡಾಗಿದ್ದು, 1000 ಮಂದಿಗೆ ಗಾಯಗಳಾಗಿವೆ. ಈ ರೈಲು ಅಪಘಾತ ಇಡೀ ದೇಶ ಮಾತ್ರವಲ್ಲ ವಿದೇಶ ರಾಷ್ಟ್ರಗಳನ್ನೂ ಬೆಚ್ಚಿ ಬೀಳಿಸಿದೆ. ರೈಲು ಅಪಘಾತ ಸುದ್ದಿ ತಿಳಿದು ವಿಶ್ವದ ಹಲವಾರು ನಾಯಕರು ಕಂಬನಿ ಮಿಡಿದಿದ್ದಾರೆ.
1 / 8
ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ- ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
2 / 8
ಭಾರತದ ಪೂರ್ವ ಒಡಿಶಾ ರಾಜ್ಯದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ ಮತ್ತು ಗಾಯಗೊಂಡಿರುವ ಬಗ್ಗೆ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದುಃಖ ವ್ಯಕ್ತಪಡಿಸುತ್ತಿದೆ ಎಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.
3 / 8
ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದುಃಖದ ಸಮಯದಲ್ಲಿ ನಾವು ಭಾರತ ಮತ್ತು ಒಡಿಶಾದ ಜನರೊಂದಿಗೆ ನಿಲ್ಲುತ್ತೇವೆ ಎಂದು ಭಾರತದಲ್ಲಿನ ಯುಎಸ್ ಮಿಷನ್ ಪರವಾಗಿ ಎರಿಕ್ ಗಾರ್ಸೆಟ್ಟಿ ಟ್ವೀಟ್ ಮಾಡಿದ್ದಾರೆ.
4 / 8
ಒಡಿಶಾ ರಾಜ್ಯದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವ ಮತ್ತು ಗಾಯಗೊಂಡಿರುವ ಸುದ್ದಿಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಜಪಾನ್ ಸರ್ಕಾರ ಮತ್ತು ಜನರ ಪರವಾಗಿ, ತಮ್ಮ ಪ್ರಾಣವನ್ನು ಕಳೆದುಕೊಂಡವರಿಗೆ ಮತ್ತು ಅವರ ದುಃಖಿತ ಕುಟುಂಬಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ: ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ
5 / 8
ಭಾರತದ ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಚಿತ್ರಗಳು ಮತ್ತು ವರದಿಗಳು ಹೃದಯ ಕಲಕಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಗೊಂಡವರಿಗೆ ಪ್ರಾರ್ಥನೆಗಳು. ಈ ಕಷ್ಟದ ಸಮಯದಲ್ಲಿ, ಕೆನಡಿಯನ್ನರು ಭಾರತದ ಜನರೊಂದಿಗೆ ನಿಂತಿದ್ದಾರೆ ಎಂದು ಕೆನಡಾ ಪಿಎಂ ಜಸ್ಟಿನ್ ಟ್ರುಡೊ ಟ್ವೀಟ್ ಮಾಡಿದ್ದಾರೆ.
6 / 8
ಒಡಿಶಾ ರೈಲು ಅಪಘಾತದಲ್ಲಿ ಬಲಿಯಾದವರ ಕುಟುಂಬಗಳಿಗೆ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುಃಖದ ಸಮಯದಲ್ಲಿ ಭಾರತದ ಜನರು ನಮ್ಮ ಪ್ರಾರ್ಥನೆಯಲ್ಲಿದ್ದಾರೆ. ಯುರೋಪ್ ನಿಮ್ಮೊಂದಿಗೆ ದುಃಖಿಸುತ್ತದೆ: ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್
7 / 8
ಭಾರತದ ಒಡಿಶಾದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದಲ್ಲಿ ಹೆಚ್ಚಿನ ಸಾವಿನ ಸಂಖ್ಯೆಯನ್ನು ತಿಳಿದು ದುಃಖವಾಯಿತು. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಸಂತಾಪ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ-ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ
8 / 8
ಒಡಿಶಾದಲ್ಲಿನ ದುರಂತಕ್ಕೊಳಗಾದವರಿಗೆ ನನ್ನ ಪ್ರಾರ್ಥನೆಗಳು. ಸಾವಿಗೀಡಾಡದವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ತೀವ್ರ ಸಂತಾಪಗಳು. ಬದುಕುಳಿದವರಿಗೆ, ದಣಿವರಿಯದೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರಿಗೆ ನನ್ನ ಹೃತ್ಪೂರ್ವಕ ಬೆಂಬಲ ಮತ್ತು ಮೆಚ್ಚುಗೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಟ್ವೀಟ್ ಮಾಡಿದ್ದಾರೆ
Published On - 3:18 pm, Sat, 3 June 23