ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ; ಇಲ್ಲಿವೆ ಸುಂದರ ಕ್ಷಣದ ಫೋಟೋಗಳು
TV9 Web | Updated By: Lakshmi Hegde
Updated on:
Aug 15, 2021 | 12:37 PM
Independence Day 2021: ಪ್ರತಿವರ್ಷದಂತೆ ಈ ವರ್ಷವೂ ದೆಹಲಿ ಕೆಂಪುಕೋಟೆಯಲ್ಲಿ, ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರಿಂದ ಧ್ವಜಾರೋಹಣ ನಡೆಯಿತು. ಆ ವಿಶೇಷ ಕ್ಷಣಗಳ ಫೋಟೋ ಇಲ್ಲಿದೆ..
1 / 10
ದೇಶದ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಇಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣಧ್ವಜಾರೋಹಣ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾಗಿದ್ದು, ಅದನ್ನು ಆಜಾದಿ ಕಾ ಅಮೃತ ಮಹೋತ್ಸವ್ ಎಂದು ಆಚರಿಸಲಾಗುತ್ತಿದೆ.
2 / 10
ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುತ್ತಿದ್ದಂತೆ ಎರಡು ಹೆಲಿಕಾಪ್ಟರ್ಗಳ ಮೂಲಕ ಹೂವಿನ ಎಸಳುಗಳ ಸುರಿಮಳೆ ಸುರಿಸಲಾಯಿತು. 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಈ ವಿಶೇಷತೆ ಇಡಲಾಗಿತ್ತು. ವಾಯುಸೇನಾ ಪಡೆಯ MI-17ನ ಎರಡು ಚಾಪರ್ಗಳ ಮೂಲಕ ಹೂವಿನ ಎಸಳುಗಳು ರಾಷ್ಟ್ರಧ್ವಜಕ್ಕೆ ಸಿಂಪಡಿಸಲ್ಪಟ್ಟವು.
3 / 10
75ನೇ ಸ್ವಾತಂತ್ರ್ಯೋತ್ಸವದ ಆಚರಣೆ ವೇಳೆ ಪಾಲ್ಗೊಂಡ ಎಲ್ಲ ಸೇನಾಪಡೆಗಳನ್ನೂ ವೀಕ್ಷಿಸುತ್ತ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಹಾಕಿದರು. ಪ್ರತಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಗಳಂದು ಸೇನಾ ಪಡೆಗಳು ಕೆಂಪುಕೋಟೆ ಬಳಿ ಪಥಸಂಚಲನ ನಡೆಸಿ, ಪ್ರಧಾನಿಗೆ ಗೌರವ ವಂದನೆ ಸಲ್ಲಿಸುತ್ತವೆ. ಈ ಬಾರಿಯೂ ಶಿಷ್ಟಾಚಾರದಂತೆ, ಬಿಗಿ ಭದ್ರತೆ ನಡುವೆ ಎಲ್ಲ ಕಾರ್ಯಕ್ರಮಗಳೂ ನಡೆದಿವೆ.
4 / 10
ದೆಹಲಿ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಸಶಸ್ತ್ರ ಮೀಸಲು ಪಡೆಗಳು, ರಕ್ಷಣಾದಳಗಳಿಂದ ಪ್ರಧಾನಿ ನರೇಂದ್ರ ಮೋದಿ ಗೌರವ ವಂದನೆ ಸ್ವೀಕಾರ ಮಾಡಿದರು. ಈ ವೇಳೆ ಮೂರು ಸೇನಾಪಡೆಗಳಿಂದ ಪ್ರಧಾನಿಯವರಿಗೆ ಗೌರವ ವಂದನೆ ಸಲ್ಲಿಕೆಯಾಗುತ್ತದೆ.
5 / 10
ದೆಹಲಿ ಐತಿಹಾಸಿಕ ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ ಸೇರಿ ಇನ್ನೂ ಹಲವು ಮಂತ್ರಿಗಳು ಪಾಲ್ಗೊಂಡಿದ್ದರು. ರಾಷ್ಟ್ರಗೀತೆ ಹಾಡುವ ವೇಳೆ ಎದ್ದು ನಿಂತು ಗೌರವ ಸೂಚಿಸುತ್ತಿರುವ ಫೋಟೋ ಇದು.
6 / 10
ಇಂದು ಮುಂಜಾನೆ ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿದರು. ನಂತರ ರಾಷ್ಟ್ರಧ್ವಜಾರೋಹಣ ಮಾಡಿ, ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂದಿನ ಭಾಷಣದ ವೇಳೆ ಅವರು ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
7 / 10
ಟೋಕಿಯೋ ಒಲಿಂಪಿಕ್ಸ್ನಲ್ಲಿ ಈ ಬಾರಿ ಭಾರತ ಹಲವು ಪದಕಗಳ ಸಾಧನೆ ಮಾಡಿದೆ. ಅದರಲ್ಲೂ ಕೇಂದ್ರಬಿಂದು ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ. ಅವರು ಇಂದು ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸಿದ್ದರು. ನೀರಜ್ ಚೋಪ್ರಾ ಸೇರಿ ಒಲಿಂಪಿಕ್ಸ್ ಆಟಗಾರರು ಪಾಲ್ಗೊಂಡಿದ್ದರು.
8 / 10
ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿ, ಅವರಿಗೆ ಅಭಿನಂದನೆ ಸಲ್ಲಿಸಿದರು. ಟೋಕಿಯೋ 2020ರ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಅಥ್ಲೀಟ್ಗಳು ಮತ್ತು ಕ್ರೀಡಾಪಟುಗಳನ್ನು ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನಿಸಲಾಗಿತ್ತು
9 / 10
ಪ್ರಧಾನಿ ನರೇಂದ್ರ ಮೋದಿ ಮೊದಲು ರಾಷ್ಟ್ರಧ್ವಜಾರೋಹಣ ಮಾಡಿದರು. ಅದಾದ ಬಳಿಕ ದೇಶವನ್ನು ಉದ್ದೇಶಿಸಿ 90 ನಿಮಿಷಗಳ ಕಾಲ ಮಾತನಾಡಿದರು. ಭಾಷಣ ಮುಗಿದ ಬಳಿಕ ಅವರು ಎನ್ಸಿಸಿ ಕೆಡೆಟ್ಸ್ ಕುಳಿತಿದ್ದ ಸಾಲಿಗೆ ಬಂದು ಅವರನ್ನು ಮಾತನಾಡಿಸಿದರು.
10 / 10
ದೇಶವನ್ನುದ್ದೇಶಿಸಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಪ್ರಧಾನಿ ಮೋದಿ, ನಂತರ ಪ್ರೇಕ್ಷಕರು ಕುಳಿತ ಸಾಲಿಗೆ ಬಂದು ಅವರೊಡನೆ ಮಾತುಕತೆ ನಡೆಸಿದರು. ಈ ಬಾರಿ ಕೊರೊನಾ ನಿಮಿತ್ತ ಎಲ್ಲ ರೀತಿಯ ಮುಂಜಾಗ್ರತೆಗಳನ್ನೂ ತೆಗೆದುಕೊಳ್ಳಲಾಗಿತ್ತು. ಆಸನಗಳ ನಡುವೆ ಅಂತರ ಇರುವುದನ್ನು ಕಾಣಬಹುದು
Published On - 12:33 pm, Sun, 15 August 21