ವಿಶೇಷವಾಗಿ ಅದರಲ್ಲಿ ನೈಟ್ರೇಟ್ ಅಂಶ ಲಭ್ಯವಿದೆ. ಬೀಟ್ ರೂಟ್ ತಿನ್ನುವುದರಿಂದ ಮಧುಮೇಹ, ಕ್ಯಾನ್ಸರ್, ಬಿಪಿ, ಥೈರಾಯ್ಡ್ ಮತ್ತು ಚರ್ಮದ ಸಮಸ್ಯೆಗಳು ಬರುವುದಿಲ್ಲ. ಬೀಟ್ ರೂಟ್ ನ ನಿಯಮಿತ ಸೇವನೆಯು ಸೌಂದರ್ಯದ ಜೊತೆಗೆ ಆರೋಗ್ಯವನ್ನು ನೀಡುತ್ತದೆ. ಬೀಟ್ ರೂಟ್ ತಿನ್ನದವರೂ ಈ ರೀತಿಯ ಆರೋಗ್ಯವರ್ಧಕಗಳನ್ನು ಬಳಸಬಹುದು. ಅದು ರುಚಿಕರವೂ ಹೌದು. ಹಾಗಾಗಿ ಮಕ್ಕಳಿಗೂ ತಿನ್ನಿಸಬಹುದು. ಈಗ ಬೀಟ್ ರೂಟ್ ಮಸಾಲೆ ವಡೆಗಳನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ. ಅದಕ್ಕೆ ಬೇಕಾಗುವ ಪದಾರ್ಥಗಳು ಯಾವುವು? ಅದನ್ನು ಹೇಗೆ ಮಾಡಬೇಕೆಂದು ನೋಡೋಣ.
Beetroot Masala Vada: ಬಿಸಿಬಿಸಿ ಗರಿಗರಿ ಬೀಟ್ ರೂಟ್ ಮಸಾಲೆ ವಡೆಗೆ ಬೇಕಾಗುವ ಪದಾರ್ಥಗಳು ಹೀಗಿವೆ:
ಬೀಟ್ ರೂಟ್ -Beetroot, ಕಡಲೆಬೇಳೆ ಹಿಟ್ಟು - Chana Dal (split chickpeas or yellow lentils), ಹಸಿ ಮೆಣಸಿನಕಾಯಿ -Green Chilies, ಕರಿಬೇವಿನ ಸೊಪ್ಪು - Curry Leaves, ಕೊತ್ತಂಬರಿ ಸೊಪ್ಪು - Coriander Leaves, ಶುಂಠಿ - Ginger, ದಾಲ್ಚಿನ್ನಿ ಚಕ್ಕೆ ಮೊಗ್ಗು - Cinnamon, ಬೆಳ್ಳುಳ್ಳಿ ಅಥವಾ ಈರುಳ್ಳಿ - Onion, Garlic, ಅಕ್ಕಿ ಹಿಟ್ಟು -Rice Flour, ಜೀರಿಗೆ - cumin seeds, ಉಪ್ಪು - Salt, ಎಣ್ಣೆ - Oil,
ಬೀಟ್ ರೂಟ್ ಮಸಾಲೆ ವಡೆಗಳನ್ನು ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ತೊಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ಅದರ ನಂತರ ಆ ಬೇಳೆಯನ್ನು ರುಬ್ಬಿಟ್ಟು ಕೊಳ್ಳಿ. ಈಗ ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಉಳಿದಂತೆ ಕಡಲೆಬೇಳೆ ತುರಿದ ಬೀಟ್ರೂಟ್, ಅಕ್ಕಿ ಹಿಟ್ಟು, ಜೀರಿಗೆ, ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಕಲಿಸಿಟ್ಟುಕೊಳ್ಳಿ.