Belagavi session: ವಿದ್ಯುತ್ ದೀಪಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ಸುವರ್ಣ ವಿಧಾನಸೌಧ

|

Updated on: Dec 04, 2023 | 8:18 PM

ಬೆಳಗಾವಿ ಅಧಿವೇಶನ 2023: ಬೆಳಗಾವಿಯಲ್ಲಿ ಪ್ರಸಕ್ತ ಬಾರಿಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದೆ. ಈ ಸಂದರ್ಭದಲ್ಲಿ ಸುವರ್ಣ ವಿಧಾನಸೌಧವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ವಿದ್ಯುತ್​ ದೀಪಗ ಅಲಂಕಾರದಿಂದ ಕಂಗೊಳಿಸುತ್ತಿರುವ ಸುವರ್ಣ ವಿಧಾನಸೌಧದ ಚಿತ್ರಗಳು ಇಲ್ಲಿವೆ.

1 / 7
ಸುವರ್ಣ ವಿಧಾನಸೌಧಕ್ಕೆ ವಿದ್ಯುತ್ ದೀಪಗಳಿಂದ ಮಾಡಿರುವ ಅಲಂಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಆರು ಗಂಟೆಗೆ ಚಾಲನೆ ನೀಡಿದರು. 20 ನಿಮಿಷಗಳ ಕಾಲ ಸುವರ್ಣ ಸೌಧದ ಮುಂಭಾಗ ಕಾರ್ಯಕ್ರಮ ವೀಕ್ಷಿಸಿದ ಬಳಿಕ ಅವರು ಧಾರವಾಡಕ್ಕೆ ತೆರಳಿದರು.

2 / 7
ಇನ್ನು ಮುಂದೆ ಪ್ರತಿ ಶನಿವಾರ, ಭಾನುವಾರ ಹಾಗೂ ಹಬ್ಬಗಳ ದಿನಗಳಲ್ಲಿ ಸುವರ್ಣ ವಿಧಾನಸೌಧ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ. ಶಾಶ್ವತ ವಿದ್ಯುತ್ ದೀಪಗಳ ಅಲಂಕಾರ ಸುವರ್ಣ ವಿಧಾನಸೌಧದ ಅಂದ ಹೆಚ್ಚಿಸಿದೆ.

3 / 7
ಎಲ್ ಇಡಿ ಶಾಶ್ವತ ವಿದ್ಯುತ್ ಅಲಂಕಾರ ಸುವರ್ಣ ಸೌಧದ ಅಂದ ಹೆಚ್ಚಿಸುತ್ತಿದೆ. ಇದಕ್ಕೆ ಸಿಎಂ‌ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದಾರೆ ಎಂದು ವಿಧಾನಸಭೆ ಸಭಾಧ್ಯಕ್ಷ ಯುಟಿ ಖಾದರ್ ‘ಟಿವಿ9’ಗೆ ತಿಳಿಸಿದ್ದಾರೆ.

4 / 7
ಸುವರ್ಣ ವಿಧಾನಸೌಧ ಇನ್ನು ಬೆಳಗಾವಿ ಮಾತ್ರವಲ್ಲದೆ ಸುತ್ತಮುತ್ತಲಿನ ಜನರ ಆಕರ್ಷಣೆಯ ಕೇಂದ್ರವಾಗಲಿದೆ. ಈವರೆಗೆ ಅಧಿವೇಶನದ ಸಮಯದಲ್ಲಿ ಮಾತ್ರ ಲೈಟಿಂಗ್ ವ್ಯವಸ್ಥೆ ಇರ್ತಾ ಇತ್ತು. ಇನ್ನು ಅಧಿವೇಶ ಮುಗಿದ ಬಳಿಕವೂ ಈ ಅಲಂಕಾರ ಇರಲಿದೆ ಎಂದು ಖಾದರ್ ಹೇಳಿದ್ದಾರೆ.

5 / 7
ಇನ್ಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಇರಲಿದೆ. ಅದಷ್ಟೇ ಅಲ್ಲದೆ ಸರ್ಕಾರಿ ರಜಾ ದಿನ, ಹಬ್ಬ ಹರಿದಿನ ಹಾಗೂ ಇಲ್ಲಿನ ಸ್ಥಳೀಯ ಕಾರ್ಯಕ್ರಮಗಳಿಗೆ ವಿದ್ಯುತ್ ಅಲಂಕಾರ ಬಳಸಿಕೊಳ್ಳಬಹುದು ಎಂದು ಖಾದರ್ ಹೇಳಿದ್ದಾರೆ.

6 / 7
ಸುವರ್ಣ ವಿಧಾನಸೌಧವನ್ನು ಪ್ರವಾಸಿ ತಾಣವಾಗಿ ಮಾಡಲು ನಾವು ಮುಂದಾಗಿದ್ದೇವೆ. ಈ ಕುರಿತು ಸ್ಥಳೀಯ ಸಚಿವರ ಜೊತೆ ಚರ್ಚಿಸಿ ಉನ್ನತ ಮಟ್ಟದಲ್ಲಿ ಕೆಲಸ ಮಾಡಲಿದ್ದೇವೆ ಎಂದು ಖಾದರ್ ಹೇಳಿದ್ದಾರೆ.

7 / 7
ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರ ಬೆಳಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಯಿತು. 10 ದಿನಗಳ ನಡೆಯಲಿರುವ ಕಲಾಪದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಚಿವರು, ಶಾಸಕರು, ವಿಪಕ್ಷ ನಾಯಕರು, ಶಾಸಕರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ನಂತರ ವಿವಿಧ ವಿಚಾರಗಳ ಬಗ್ಗೆ ಚರ್ಚೆಯಾಯಿತು.